ನ್ಯೂಜ್ ಡೆಸ್ಕ್:ರಾಜ್ಯದಲ್ಲಿ ವಿಪರೀತ ಚಳಿಯ ಅನುಭವ ಆಗುತ್ತಿದ್ದು,ದೇಹ ಗಡ ಗಡ ನಡುಗುವಂತಹ ಸ್ಥಿತಿ ಬಂದಿದೆ. ಅರಂಭದ ಥಂಡಿಗೆ ಜನ ತತ್ತರಿಸಿದ್ದಾರೆ ಎತ್ತಿಟ್ಟಿದ್ದ ಕಂಬಳಿ ರಗ್ಗು ಮೊರೆ ಹೋಗಿದ್ದಾರೆ. ಹಗಲು ರಾತ್ರಿ ಎನ್ನದೇ ಶೀತಗಾಳಿಯ ಆರ್ಭಟ ಜನರನ್ನು ನಡುಗಿಸುತ್ತಿದೆ.
ದಿನ ಕಳೆದಂತೆ ಚಳಿ ತೀವ್ರತೆ ಹೆಚ್ಚಾಗುತ್ತಿದ್ದು ಜನರು ಥಂಡಿಗೆ ಮುದುಡಿ ಹೋಗಿದ್ದಾರೆ. ಅದರಲ್ಲೂ ಕೋಲಾರ ಭಾಗದ ಬಯಲುಸೀಮೆ ಪ್ರದೇಶದಲ್ಲೂ ಚಳಿಯ ತೀವ್ರತೆ ಹೆಚ್ಚಾಗಿದೆ ಮುಂದಿನ ಎರಡು ದಿನಗಳ ಕಾಲ ಶೀತಗಾಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಮುಂದಿನ ಎರಡು ದಿನ ಥಂಡಿ ಹೆಚ್ಚಾಗಲಿದ್ದು.ಇನ್ನೂ ಒಂದು ವಾರಕಾಲ ಚಳಿಯ ವಾತಾವರಣ ಮುಂದುವರೆಯಲಿದೆ ಎನ್ನಲಾಗಿದ್ದು ಈ ವರ್ಷ ವಾಡಿಕೆಗಿಂತ ಮುಂಚಿತವಾಗಿ ಚಳಿಗಾಲ ಎಂಟ್ರಿಯಾಗಿದೆ ಎನ್ನುತ್ತಾರೆ.ಅರಂಭದಲ್ಲೆ ಜನರು ಹೈರಾಣಾಗಿದ್ದಾರೆ.


ಚಳಿಗಾಲದ ಸಲಹೆಗಳು
ಚಳಿಗಾಲದಲ್ಲಿ ತಂಪಾದ ಗಾಳಿ, ಕಡಿಮೆ ತಾಪಮಾನ ಮತ್ತು ಶುಷ್ಕ ಗಾಳಿಯನ್ನು ತರುತ್ತದೆ, ಇದು ನಮ್ಮ ಆರೋಗ್ಯ ಮತ್ತು ದೈನಂದಿನ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಈ ಕಾಲದಲ್ಲಿ ಬೆಚ್ಚಗಿರಲು, ಆರೋಗ್ಯವಾಗಿರಲು ಮತ್ತು ಸಕ್ರಿಯವಾಗಿರಲು ಅನುಕೂಲ ಆಗಲಿದೆ ಎನ್ನುತ್ತಾರೆ ತಜ್ಞರು.
ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ದಪ್ಪ ಲೇಯರ್ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಉಣ್ಣೆಯ ಸ್ವೆಟರ್ಗಳು, ಕೈಗೆ ಕಾಲಿಗೆ ಸಾಕ್ಸ್ ಗವಸುಗಳನ್ನು ಮತ್ತು ಸ್ಕಾರ್ಫ್ಗಳು ಧರಿಸಿ ಕಿವಿ ಮತ್ತು ತಲೆಯನ್ನು ಮುಚ್ಚಿಕೊಂಡು ಚಳಿಯಿಂದ ರಕ್ಷಿಸಿಕೊಳ್ಳುವ ಅವಶ್ಯಕತೆ ಇದೆ
ನಿಯಮಿತವಾಗಿ ವ್ಯಾಯಾಮ ಮಾಡಿ
ಚಳಿಗಾಲದಲ್ಲಿಯೂ ಸಹ, ಸಕ್ರಿಯವಾಗಿರಲು ಪ್ರಯತ್ನಿಸಿ. ಬೆಳಗಿನ ನಡಿಗೆ, ಸ್ಟ್ರೆಚಿಂಗ್, ಯೋಗ ಅಥವಾ ಒಳಾಂಗಣ ವ್ಯಾಯಾಮಗಳು ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ.
ಮಕ್ಕಳು ಮತ್ತು ವೃದ್ಧರನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವುದು ಅಗತ್ಯವಾಗಿದ್ದು ಅವರಿಗೆ ಬೆಚ್ಚಗಿನ ಬಟ್ಟೆಗಳನ್ನು ಧರಿಸುವಂತೆ ಜಾಗ್ರತೆ ವಹಿಸಿ ಪೌಷ್ಟಿಕವಾದ ಆಹಾರ ಸೇವಿಸಲು ಮತ್ತು ಶೀತ ಗಾಳಿಯಿಂದ ದೂರವಿರಿಸುವ ಮೂಲಕ ಪ್ರಯತ್ನಿಸಿ.
ಸಾಕಷ್ಟು ನಿದ್ರೆ ಮಾಡಿ
ವಿಶೇಷವಾಗಿ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ಮತ್ತು ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಉತ್ತಮ ನಿದ್ರೆ ಅತ್ಯವಶ್ಯಕವಾಗಿದೆ.
ಹೈಡ್ರೇಟೆಡ್ ಆಗಿರಿ
ನಿಮಗೆ ಬಾಯಾರಿಕೆಯಾಗದಿದ್ದರೂ, ಚಳಿಗಾಲದಲ್ಲಿ ದೇಹಕ್ಕೆ ಇನ್ನೂ ನೀರು ಬೇಕಾಗುತ್ತದೆ. ಹೈಡ್ರೇಟೆಡ್ ಆಗಿರಲು ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಬೆಚ್ಚಗಿನ ನೀರು ಅಥವಾ ಗಿಡಮೂಲಿಕೆ ಚಹಾಗಳನ್ನು ಕುಡಿಯಿರಿ. ಚಳಿಗಾಲದಲ್ಲಿ ನಸುಕಿನ ಜಾವ 4 ಗಂಟೆಯಿಂದ ಬೆಳಗ್ಗೆ 8ಗಂಟೆಯವರೆಗೂ ಶೀತದ ವಾತವರಣ ಇರುತ್ತಿರುವುದಿರಿಂದ ಶೀತ -ಜ್ವರ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಉಸಿರಾಟ, ಎಲುಬು ಕೀಲು ನೋವು ಇರುವವರು ಆದಷ್ಟು ಬೆಚ್ಚಗೆ ಇರುವಂತೆ ಮತ್ತು ಚಳಿಗಾಲ ಮುಗಿಯೋ ವರೆಗೆ ಉಗುರು ಬೆಚ್ಚಗಿನ ನೀರು ಬಿಸಿ ಆಹಾರ ಸೇವಿಸುವಂತೆ ಹವಾಮಾನ ಇಲಾಖೆ ತಜ್ಞರು ಸೂಚನೆ ನೀಡಿದ್ದಾರೆ.



