ಇದೊಂದು ಮಾನವೀಯತೆ ಎತ್ತಿಹಿಡಿಯುವ ಕಥೆ.ಝಣ ಝಣ ಕಾಂಚಾಣದ ಲೋಕದಲ್ಲಿ ದುಡ್ಡೆ ದೊಡ್ಡಪ್ಪ ದೌಲತ್ತು ಅವರಪ್ಪ ಎಂಬ ಭ್ರಮಾ ಲೋಕದಲ್ಲಿ ತೆಲುತ್ತಿರುವ ಕಾಲಘಟ್ಟದಲ್ಲಿ ಕಸದ ತೊಟ್ಟಿಯಲ್ಲಿದ್ದ ನವಜಾತ ಶಿಶುವಿಗೆ ಜೀವನೀಡಿದ ವೈದ್ಯೆಯರು ಮತ್ತೊಂದು ಪ್ರಕರಣದಲ್ಲಿ ಸಾಮಾನ್ಯ ಕುಟುಂಬದ 19 ದಿನದ ನವಜಾತಾ ಶಿಶು ಉಸಿರಾಟ ನಿಲ್ಲಿಸಿ ದೇಹದ ಸ್ವಾಧಿನ ಕಳೆದುಕೊಂಡಿದ್ದ ಶಿಶುವಿಗೆ ಪ್ರಾಣ ನೀಡುವ ಮೂಲಕ ದೊಡ್ಡಬಳ್ಳಾಪುರದ ಸರ್ಕಾರಿ ವೈದ್ಯೆಯರು ಮಹಾನ್ ಮಾನವೀಯತೆ ಮೆರೆದಿರುವ ಅಪರೂಪದ ಘಟನೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ತಾಯಿ-ಮಗು ಆಸ್ಪತ್ರೆಯಲ್ಲಿ ನಡೆದಿದೆ.


ದೊಡ್ಡಬಳ್ಳಾಪುರ:ಇದೊಂದು ಅಪರೂಪದ ಸೇವೆ ಎನ್ನಬಹುದು, ದೊಡ್ಡಬಳ್ಳಾಪುರ ಭಾಗದಲ್ಲಿ ಕೂಲಿ-ನಾಲಿ ಮಾಡಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಆದರ್ಶ ಮತ್ತು ಗುಡಿಯ ಕುಮಾರಿ ದಂಪತಿಗಳ 19 ದಿನಗಳ ನವಜಾತಾ ಶಿಶು ಉಸಿರಾಟ ನಿಂತು ದೇಹದ ಸಂಪೂರ್ಣ ಸ್ವಾದಿನ ಕಳೆದುಕೊಂಡ ಸ್ಥಿತಿಯಲ್ಲಿ ದೊಡ್ಡಬಳ್ಳಾಪುರ ತಾಯಿ-ಮಗು ಆಸ್ಪತ್ರೆಗೆ ತಂದಿದ್ದಾರೆ ಅಸಾಯಕರಾದ ಪೋಷಕರು ಮಗು ನಮ್ಮ ಪಾಲಿಗಿಲ್ಲ ಎಂದು ಕೈಚಲ್ಲಿ ಕೂತಿದ್ದರು ಆದರೆ ಮಕ್ಕಳ ತಜ್ಞರಾದ ಡಾ.ಸವಿತ ಹಾಗು ಡಾ. ಗಾಯತ್ರಿ. ಡಾ.ಲಲಿತಾ,ಶ್ರುಶುಷಕರ ಸಹಕಾರದೊಂದಿಗೆ ಕೂಡಲೇ ಕಾರ್ಯ ಪ್ರವೃತ್ತರಾಗಿ ಮಗುವನ್ನುಎನ್.ಬಿ.ಎಸ್.ಯು(NBSU) ತುರ್ತು ಘಟಕಕ್ಕೆ ರವಾನಿಸಿ ಅವಶ್ಯಕ ತುರ್ತು ಚಿಕಿತ್ಸೆ ನೀಡಿ ಮಗು ಮತ್ತೆ ಉಸಿರಾಡುವಂತೆ ಮಾಡಿದ್ದಾರೆ. ಮಗುವಿನ ಉಸಿರಾಟದ ಸ್ಥಿತಿ ಹತೋಟಿಗೆ ಬಂದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ರವಾನಿಸಿರುತ್ತಾರೆ.
ಕಸದ ತೊಟ್ಟಿಯಲ್ಲಿ ಸಿಲುಕಿದ ನವಜಾತ ಶಿಶು
ಮತ್ತೊಂದು ಪ್ರಕರಣದಲ್ಲಿ ದೊಡ್ಡಬಳ್ಳಾಪುರದ ಹಾಡೋನಹಳ್ಳಿ ಬಳಿ ಖಾಸಗಿ ಬಡಾವಣೆಯಲ್ಲಿನ ಕಸದ ತೊಟ್ಟಿಯಲ್ಲಿ ಮಗುವ ಚಿರಾಟ ಕೇಳಿ ದಾರಿ ಹೋಕರು ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಕಸದ ತೊಟ್ಟಿಯಲ್ಲಿದ್ದ ನವಜಾತ ಶಿಶುವನ್ನು ಕಂಡು ತಕ್ಷಣ ಮಕ್ಕಳ ಸಹಾಯವಾಣಿ 1098 ಗೆ ಮಾಹಿತಿ ತಲುಪಿಸಿದ್ದ ಹಿನ್ನಲೆಯಲ್ಲಿ ಸ್ಥಳಕ್ಕೆ ಬಂದಂತಹ ಅಧಿಕಾರಿಗಳು ಮಗುವನ್ನು ದೊಡ್ಡಬಳ್ಳಾಪುರದ ತಾಯಿ-ಮಗು ಆಸ್ಪತ್ರೆಗೆ ರವಾನಿಸುತ್ತಾರೆ ಅಲ್ಲಿದ್ದ ವೈದ್ಯರಾದ ಡಾ.ಸವಿತ ಮತ್ತು ಡಾ.ಗಾಯಿತ್ರಿ ಕಾರ್ಯಪ್ರವೃತ್ತರಾಗಿ ನಿತ್ರಾಣವಾಗಿದ್ದ 5 ದಿನದ ಮಗುವಿಗೆ ಚಿಕಿತ್ಸೆ ನೀಡುತ್ತಾರೆ ನಂತರ ಆಸ್ಪತ್ರೆಯಲ್ಲಿದ್ದ ತಾಯಿಯಂದಿರ ಸಹಕಾರದೊಂದಿಗೆ ತಾಯಿ ಹಾಲೂಣಿಸುತ್ತಾರೆ ದಿನೆ ದಿನೆ ಅಭಿವೃದ್ಧಿ ಹೊಂದುತ್ತ ಮಗು ಸುಮಾರು 2 ಕೆಜಿಯಷ್ಟು ತೂಕವಾದ ನಂತರ ಮಗುವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದತ್ತು ಸ್ವೀಕಾರ ಕೇಂದ್ರದ ಅಧಿಕಾರಿ ಹೇಮಾ ಅವರಿಗೆ ಹಸ್ತಾಂತರಿಸುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿರುತ್ತಾರೆ.
ದೊಡ್ಡಬಳ್ಳಾಪುರ ತಾಯಿ-ಮಗು ಆಸ್ಪತ್ರೆ ವೈದ್ಯರ ಹಾಗು ಸಿಬ್ಬಂದಿ ಮಾನವೀಯತೆಯ ಸೇವೆ ಸರ್ವತ ಮೆಚ್ಚುಗೆ ವ್ಯಕ್ತವಾಗುತ್ತಿದೆ.



