ಚಿಂತಾಮಣಿ:ಕೋಲಾರ-ಚಿಕ್ಕಬಳ್ಳಾಪುರ ಬೆಂಗಳೂರಿಗೆ ಅಹಾರ ತರಕಾರಿ ನೀಡುವ ಭೂಮಿಯಾಗಿದ್ದು ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಒರ್ವ ಸಹೋದರನಾಗಿ ಸಹಕಾರ ನೀಡುವ ಪ್ರಯತ್ನ ಮಾಡುವೆ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಪರಸ್ಪರ ಗೌರವ ಸೌಹಾರ್ದತೆಯಿಂದ ಕೂಡಿದೆ ನಾವೆಲ್ಲ ಭಾರತ ಮಾತೆಯ ಮಕ್ಕಳು ಎಂದು ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಹೇಳಿದರು. ಅವರು ಇಂದು ಚಿಂತಾಮಣಿಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದ ಪ್ರಜೆಗಳಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿ ಕರ್ನಾಟಕ ಅದ್ಭುತ ಪರಂಪರೆ, ಸಂಸ್ಕೃತಿಯ ನಾಡು ಕಲೆ ಮತ್ತು ಸಂಸ್ಕೃತಿ ನಮ್ಮನ್ನು ಒಂದೂಗಿಡಿಸಿದೆ,ಪ್ರಪಂಚ ಮೆಚ್ಚುವಂತ ವ್ಯಕ್ತಿಗಳಿಗೆ ಜನ್ಮ ನೀಡಿರುವ ಪುಣ್ಯಭೂಮಿ ಇಲ್ಲಿ ಜನಿಸಿದ ಮೊಕ್ಷಗುಂಡಮ್ ವಿಶ್ವೇಶ್ವರಯ್ಯ,ತಮ್ಮ ರಚನೆಗಳಿಂದ ಪ್ರಖ್ಯಾತರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರಿಗೂ ನಮನಗಳು ಎಂದ ಅವರು ನ್ಯಾಯಮೂರ್ತಿ ವಿ.ಗೋಪಾಲಗೌಡರ ಕಾರ್ಯವೈಖರಿ ಸಮಾಜ ಮುಖಿ ಚಿಂತನೆಗಳಿಂದ ಕೂಡಿರುತ್ತದೆ ಜನಸೇನಾ ಪಕ್ಷಕ್ಕೆ ಬಲ ನೀಡಿದವರಲ್ಲಿ ನ್ಯಾ.ಗೋಪಾಲಗೌಡ ಕೂಡ ಸಹ ಒಬ್ಬರು ಮೂಲತಃ ಹೋರಾಟಗಾರರಾದ ಅವರು ಜನಸೇನಾ ಪಕ್ಷದ ಸಿದ್ದಾಂತಗಳನ್ನು ಗೌರವಿಸುತ್ತಾರೆ. ನಮ್ಮ ಹೋರಾಟಕ್ಕೆ ಅವರು ಬಲ ತುಂಬಿದ್ದಾರೆ ನಮ್ಮಿಬ್ಬರ ಚಿಂತನೆಗಳು ಯುವಜನತೆ, ರೈತಪರ, ಪರಿಸರದ ಕುರಿತಾಗಿ ಕಾಳಜಿ ಇರುತ್ತದೆ ಎಂದು ನಿವೃತ್ತ ನ್ಯಾಯಮೂರ್ತಿ ಕಾರ್ಯವೈಖರಿಯನ್ನು ಕೊಂಡಾಡಿದರು.ನಾನು ಸೋಲುವ ಸಮಯದಲ್ಲಿ ನನಗೆ ಧೈರ್ಯ ತುಂಬಿ ಶಕ್ತಿ ನೀಡಿದವರು ನ್ಯಾ.ಗೋಪಾಲಗೌಡ ಅವರ ಜನುಮದಿನದಂದು ಅವರ ಜನ್ಮ ಸ್ಥಳವಾದ ಚಿಂತಾಮಣಿಗೆ ಬಂದಿರೋದು ಹೆಮ್ಮೆಯ ವಿಷಯ ಎಂದರು.


ಚಿಂತಾಮಣಿ ನಗರದ ಹೊರ ವಲಯದ ಬೆಂಗಳೂರು ರಸ್ತೆಯ ಚಿನ್ನಸಂದ್ರ ಬಳಿ ವ್ಯವಸ್ಥಿತವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಜನ ಸಾಗರವೇ ಹರಿದು ಬಂದಿತ್ತು. ಆಂಧ್ರ ಡಿಸಿಎಂ ವೇದಿಕೆ ಮೇಲೇರುತ್ತಿದ್ದಂತೆ ಓಜಿ, ಓಜಿ ಪವನ್ ಅಭಿಮಾನಿಗಳ ಘೋಷಣೆ ಮುಗಿಲು ಮುಟ್ಟಿತ್ತು.
ಅನಾರೋಗ್ಯದ ನಿಮಿತ್ತ ಹೈದರಾಬಾದ್ ನಲ್ಲಿ ವಿಶ್ರಾಂತಿಯಲ್ಲಿದ್ದ ಪವನ್ ಕಲ್ಯಾಣ್ ಅನಾರೋಗ್ಯದ ಒತ್ತಡದಲ್ಲೆ ಕಾರ್ಯಕ್ರಮಕ್ಕೆ ಬಂದಿದ್ದು ಭಾಷಣ ಮಾಡುವಾಗ ಕೆಮ್ಮುತ್ತಲೇ ಇದ್ದರು.
ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಕೇಂದ್ರ ಸಚಿವ ವಿ. ಸೋಮಣ್ಣ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತುರ್ತು ಕಾರ್ಯಕ್ರಮ ಹಿನ್ನಲೆಯಲ್ಲಿ ನ್ಯಾಯಮೂರ್ತಿ ಗೋಪಾಲಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ಅವರು ಭಾಷಣ ಮುಗಿಯುತ್ತಲೆ ನಿರ್ಗಮಿಸಿದರು. ಹುಟ್ಟುಹಬ್ಬ ಅಚರಿಸಿಕೊಂಡ ನ್ಯಾಯಮೂರ್ತಿ ಗೋಪಾಲಗೌಡ ಹಾಗು ಚಿಂತಾಮಣಿ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕೋಲಾರದ ಸಂಸದ ಎಂ.ಮಲ್ಲೇಶ್ ಬಾಬು ಹಾಗು ಕೋಲಾರದ ಜೆಡಿಎಸ್ ಮುಖಂಡ CMR ಶ್ರೀನಾಥ್,ಚಿಂತಾಮಣಿ ಬಿಜೆಪಿ ಮುಖಂಡ ವೇಣುಗೋಪಾಲ್ ನೀರಾವರಿ ಹೋರಾಟಗಾರ ಅಂಜನೇಯರೆಡ್ಡಿ ವೇದಿಕೆಯಲ್ಲಿದ್ದರು.



