ಹೊಸಕೋಟೆ-ಚಿಂತಾಮಣಿ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯದಿಂದ ಬಿದ್ದಿದ್ದ ಜಲ್ಲಿಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ, ಹಿಂಬದಿಯಿಂದ ಬಂದ ಕ್ಯಾಂಟರ್ ಅವರ ಮೇಲೆ ಹರಿದು ದುರ್ಘಟನೆ ಸಂಭವಿಸಿದೆ.
ನ್ಯೂಜ್ ಡೆಸ್ಕ್:ರಸ್ತೆ ಹಳ್ಳ ಮುಚ್ಚಲು ಕಾಮಗಾರಿ ಮಾಡುವ ಸಂದರ್ಭದಲ್ಲಿ ಬೆಂಗಳೂರಿನ ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋದ ಟಿಪ್ಪರ್ ಲಾರಿ 22 ವರ್ಷದ ವಿದ್ಯಾರ್ಥಿನಿ ಧನುಶ್ರೀ ಚಲಾಯಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿ ಆಕೆ ಕೆಳಗೆ ಬಿದಿದ್ದು ಆಕೆ ಮೇಲೆ ಟಿಪ್ಪರ್ ಲಾರಿ ಹರಿದು ವಿದ್ಯಾರ್ಥಿನಿ ಸಾವನ್ನಪ್ಪಿದ ಬೆನ್ನಲ್ಲೇ ಹೊಸಕೋಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದೆ ಮತ್ತೊಂದು ಘಟನೆಯಾಗಿದೆ.
ರಸ್ತೆ ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಮೇಲೆ ಜಲ್ಲಿಕಲ್ಲುಗಳು ಬಿದ್ದಿದ್ದು ಇಬ್ಬರು ಸಹೋದರಿಯರು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದಿದ್ದು ಅಲ್ಲಿ ಜಲ್ಲಿಕಲ್ಲುಗಳನ್ನು ಹರಡಿದ್ದು ಅದರ ಮೇಲೆ ವಾಹನ ಚಲಾಯಿಸಿದಾಗ ದ್ವೀಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ ಅದೇ ಸಮಯಕ್ಕೆ ಹಿಂಬದಿಯಿಂದ ಬರುತ್ತಿದ್ದ ಕ್ಯಾಂಟರ್ (ಸರಕು ಸಾಗಣೆ ವಾಹನ) ಅತಿ ವೇಗ ಅಜಾಗುರುಕತೆಯಿಂದ ಚಲಾಯಿಸಿಕೊಂಡು ಬಂದಿದ್ದು ಕೆಳಗೆ ಬಿದ್ದಿದ್ದ ಯುವತಿಯರ ಮೇಲೆ ಹರಿದು ಇಬ್ಬರೂ ಯುವತಿಯರು ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳನ್ನು ಹೊಸಕೋಟೆ ಮೂಲದವರಾದ ಶೈಲಾ (25) ಮತ್ತು ಆಕೆಯ ಸಹೋದರಿ ಶ್ವೇತಾ (22) ಎಂದು ಗುರುತಿಸಲಾಗಿದೆ.ಮೃತ ಯುವತಿ ಶೈಲಾ ನರ್ಸ್ ಆಗಿ ಕೆಲಸ ಮಾಡತ್ತಿದ್ದರೆ ಈಕೆಯ ಸಹೋದರಿ ಶ್ವೇತಾ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದರು ಎನ್ನಲಾಗಿದೆ ಇವರು ಶುಕ್ರವಾರ ಮಧ್ಯಾಹ್ನ 1.45 ರ ಸುಮಾರಿಗೆ ಚಿಂತಾಮಣಿಯ ಕೈವಾರ ತಾತಯ್ಯ ದೇವಸ್ಥಾನಕ್ಕೆ ಬಂದಿದ್ದು ವಾಪಸ್ಸು ಹೊಸಕೋಟೆಯಲ್ಲಿರುವ ತಮ್ಮ ಮನೆಗೆ ಹಿಂತಿರುಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ಇಬ್ಬರು ಯುವತಿಯರ ಸಾವಿಗೆ ರಸ್ತೆ ಹಳ್ಳದ ಅವಾಂತರ ಕಾರಣ ಎಂದು ಸ್ಥಳೀಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿ ನಡೆಯುತ್ತಿರುವ ಕುರಿತಾಗಿ ವಾಹನ ಸವಾರರ ಸುರಕ್ಷತೆಗಾಗಿ ಯಾವುದೆ ಮುನ್ನಚರಿಕೆ ವಹಿಸದೆ ನಿರ್ಲಕ್ಷ್ಯ ವಹಿಸಿರುವ ಅಧಿಕಾರಿಗಳು ಮತ್ತು ಗುತ್ತಿಗೆದಾರರೆ ಕಾರಣ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.



