ಶ್ರೀನಿವಾಸಪುರ:ಅಕ್ರಮ ಸಂಬಂಧ ತಿಳಿದ ಅತ್ತೆ ನಮ್ಮ ಜೀವನಕ್ಕೆ ತೊಂದರೆ ಮಾಡುತ್ತಾಳೆ ಎಂದು ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಆತ್ತೆಯ ತಲೆಗೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಪೋಲಿಸ್ ಠಾಣೆ ವ್ಯಾಪ್ತಿಯ ಎಮ್.ತುಮ್ಮಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಹಲ್ಲೆ ಆರೋಪದಲ್ಲಿ ಸೊಸೆ ರೇಖಾ ಮತ್ತು ಆಕೆಯ ಪ್ರಿಯಕರ ಶಶಿಕುಮಾರ್ ರವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ಅತ್ತೆ ರಮಣಮ್ಮ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಮ್.ತುಮ್ಮಲಪಲ್ಲಿ ಗ್ರಾಮದ ಮಂಜುನಾಥರೆಡ್ಡಿ ಆಂಧ್ರಪ್ರದೇಶದ ರೇಖಾ ಎಂಬಾಕೆಯನ್ನು ಕಳೆದ 7 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಅದರೆ ಇತ್ತಿಚಿಗೆ ಸೊಸೆ ರೇಖಾ ಮೊಬೈಲ್ ಖಾಯಾಲಿಗೆ ಬಿದ್ದಿದ್ದಾಳೆ ಅಷ್ಟೆ ಅಲ್ಲದೆ ಶಶಿಕುಮಾರ್ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವನ್ನು ಬೆಳೆಸಿದ್ದಾಳೆ ಜೊತೆಗೆ ಪ್ರಿಯಕರ ಕೊಟ್ಟ ಮೊಬೈಲ್ ಅನ್ನು ಮನೆಯಲ್ಲಿ ಯತೇಚ್ಚವಾಗಿ ಬಳಸುವುದು, ನಡೆಯಿತಿತ್ತು ಇದು ಮನೆಯಲ್ಲಿ ಅತ್ತೆ ಸೊಸೆ ನಡುವೆ ರಾದ್ದಾಂತಕ್ಕೆ ಕಾರಣವಾಗಿದೆ ರೇಖಾ ಗಂಡ ಹಾಲು ವಾಹನದ ಚಾಲಕನಾಗಿದ್ದು ಹೆಚ್ಚಾಗಿ ಮನೆಯಲ್ಲಿ ಇರುತ್ತಿರಲಿಲ್ಲ,ಇದು ರೇಖಾ ಹಾಗು ಲವ್ವರ್ ಲವ್ವಿ ಡವ್ವಿಗೆ ಅನಕೂಲವಾಗಿದೆ ಇದು ಅತ್ತೆ ಗಮನಕ್ಕೂ ಬಂದಿದೆ ಜೊತೆಗೆ ಮನೆಯಲ್ಲಿ ಮೊಬೈಲ್ ವಿಚಾರವಾಗಿ ನಡೆಯುತ್ತಿದ್ದ ರಾದ್ದಾಂತ ಗಂಡನಿಗೆ ಗೊತ್ತಾಗಿ ಆತ ಸಹ ಬುದ್ಧಿ ಹೇಳಿದ್ದಾನೆ ಆದರೂ ಸೊಸೆ ರೇಖಾ ಮೊಬೈಲ್ ಸಂವಹನದ ಮೂಲಕ ತನ್ನ ಪ್ರೇಮಿಯೊಂದಿಗೆ ಪ್ರಣಯ ಸಂಬಂಧವನ್ನು ಮುಂದುವರೆಸಿದ್ದಾಳೆ ಈ ಬಗ್ಗೆ ಅತ್ತೆ ರಾಂಗ್ ಆಗಿದ್ದಕ್ಕೆ ರೇಖಾಳ ಗಂಡ ಡ್ಯೂಟಿಗೆ ಹೋಗಿದ್ದಾಗ ಸಮಯ ಕಾದು ಸೊಸೆ ಹಾಗೂ ಆಕೆಯ ಪ್ರಿಯಕರ ಸೇರಿ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ರಮಣಮ್ಮನನ್ನು ಅಪರಿಚಿತರು ಹಲ್ಲೆ ಮಾಡಿದ್ದಾರೆ ಎಂದು ಸೊಸೆ ಸುದ್ಧಿ ಹಬ್ಬಿಸಿದ್ದಾಳೆ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ದೂರು ದಾಖಲಿಸಿಕೊಂಡ ಪೋಲಿಸರು ವಿಚಾರಣೆ ನಡೆಸಿದಾಗ ಸೊಸೆ ರೇಖಾ ಹಾಗೂ ಲವರ್ ಬಾಯ್ ಶಶಿಕುಮಾರ್ ಪುರಾಣ ಹೊರಗೆ ಬಂದಿದೆ.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



