ಶ್ರೀನಿವಾಸಪುರ: ತಾಲೂಕಿನ ಯಲ್ದೂರು ಹೋಬಳಿ ಮಂಜಲನಗರ ಗ್ರಾಮದಲ್ಲಿ ಕಮ್ಮಸಂದ್ರ ಗ್ರಾಮಕ್ಕೆ ಹೋಗುವ ದಾರಿಯಲ್ಲಿನ ಮಾವಿನ ತೋಪಿನಲ್ಲಿ ಹದಿಮೂರನೆ ಶತಮಾನದಲ್ಲಿ ಹೊಯ್ಸಳ ಅರಸರ Hoysala dynasty ಆಳ್ವಿಕೆಯಲ್ಲಿ ನಿರ್ಮಾಣವಾದದ್ದೆಂದು ಹೇಳಲಾದ ದೇವಾಲಯ ಪತ್ತೆಯಾಗಿದೆ.
ಮಂಜಲನಗರದ ಗ್ರಾಮದ ಜಯಕುಮಾರ್ ಅವರ ವಿನಂತಿ ಮೇರೆಗೆ ಇತಿಹಾಸಕಾರರು ಹಾಗು ಶಾಸನ ತಜ್ಞ ಪ್ರೋ,ಕೆ. ಆರ್.ನರಸಿಂಹನ್, ಮತ್ತು ವೀರಗಲ್ಲುಗಳ ಅಧ್ಯಯನಕಾರ ಕೆ.ಧನಪಾಲ್ ನೇತೃತ್ವದಲ್ಲಿ ಗ್ರಾಮಕ್ಕೆ ಭೇಟಿಕೊಟ್ಟು ಮಂಜಲನಗರದ ಗ್ರಾಮಸ್ಥರ ಸಹಕಾರದೊಂದಿಗೆ ಗ್ರಾಮದ ಪುರಾತನ ದೇವಾಲಯ ಅಧ್ಯಯನ ನಡೆಸಿದಾಗ ಅಲ್ಲಿದ್ದ ಶಾಸನಗಳು ಪುರಾವೆಗಳ ಆಧಾರದಲ್ಲಿ ದೇವಾಲಯ ಹದಿಮೂರನೆ ಶತಮಾನ ಅಂದರೆ 1288 ಇಸವಿಯಲ್ಲಿ ಹೊಯ್ಸಳರ ಅರಸ ರಾಮನಾಥನ ಕಾಲಕ್ಕೆ ಸೇರಿದ್ದು ಅಂದಾಜಿಸಗಿದೆ. Hoysala administration ಅರಸ ರಾಮನಾಥನ ಬಲವೖದ್ಧಿಗೆ ಆತನ ಮಂತ್ರಿ, ಪ್ರಮುಖ ಅಧಿಕಾರಿಗಳು ವೆಟ್ಟಪಲ್ಲಿಗೆ ಸೇರಿದ ಜಮೀನುಗಳನ್ನು ಧರ್ಮವಾಗಿ ಬಿಟ್ಟಿದ್ದಾರೆ ಎಂದು ಶಾಸನ ತಜ್ಞರು ಹೇಳುತ್ತಾರೆ.

ಹೊಯ್ಸಳರ ಕಾಲದ ದೇವಾಲಯವಾದರು ಇದನ್ನು ಚೋಳರ ಶೈಲಿಯಲ್ಲಿ ನಿರ್ಮಿಸಿರುವುದು ವಿಶೇಷ ಎನ್ನಲಾಗಿದೆ ಈ ದೇವಾಲಯದಲ್ಲಿ ಈಗ್ಗೆ ನಲವತ್ತೖದು ವರ್ಷಗಳ ಹಿಂದೆ ಪೂಜಾದಿ ಕಾರ್ಯಗಳು ನಡೆಯಿತಿದ್ದು ದೇವಾಲಯ ಶಿಥಿಲಾವಸ್ಥೆ ತಲುಪಿದ ಹಿನ್ನಲೆಯಲ್ಲಿ ಗರ್ಭಗುಡಿಯಲ್ಲಿದ್ದ ಲಕ್ಷ್ಮೀ-ನಾರಯಣನ ವಿಗ್ರಹಗಳನ್ನು ಗ್ರಾಮದ ಕಟ್ಟಡವೊಂದರಲ್ಲಿ ಸಂರಕ್ಷಿಸಲಾಗಿದೆ ಇದನ್ನು ಮುಜರಾಯಿ ಇಲಾಖೆ ದಾಖಲೆಗಳಲ್ಲಿ ಲಕ್ಷ್ಮೀ-ನಾರಯಣ ದೇವಸ್ಥಾನ ಎಂದು ನಮೂದಿಸಲಾಗಿದೆ ಎಂಬುದಾಗಿ ಗ್ರಾಮಸ್ಥರು ಹೇಳುತ್ತಾರೆ,ಇದಕ್ಕೆ ಪ್ರತಿಕ್ರಿಯಿಸಿದ ಇತಿಹಾಸಕಾರರು ಇದು ಲಕ್ಷ್ಮೀ-ನಾರಯಣನ ವಿಗ್ರಹಗಳಲ್ಲ ಇವು ಚನ್ನಕೇಶವ-ಶ್ರೀದೇವಿ ಭೂದೇವಿ ಅಮ್ಮನವರ ವಿಗ್ರಹಗಳು Chennakeshava Temple ವಿಶೇಷವಾಗಿ ಚನ್ನಕೇಶವ ವಿಗ್ರಹ ತಿರುಮಲದ ವೇಂಕಟೇಶ್ವರನ ವಿಗ್ರಹವನ್ನು ಹೊಲುತ್ತದೆ ಆದರೆ ವೈಕುಂಠ ಹಸ್ತಕ್ಕೆ ಬದಲಾಗಿ ಇಲ್ಲಿ ಅಭಯ ಹಸ್ತ ಇದೆ ಎಂದು ಇತಿಹಾಸಕಾರರು ಹೇಳುತ್ತಾರೆ.ಇಂತಹ ದೇವಾಲಯ ಹಾಗು ವಿಗ್ರಹಗಳು ಕುರುಡುಮಲೆ ಮತ್ತು ಮುಡಿಯುನೂರಿನಲ್ಲೂ ನೋಡಬಹುದಾಗಿದೆ ಎನ್ನುತ್ತಾರೆ.


ಗ್ರಾಮಸ್ಥರಿಂದ ದೇವಾಯಲ ದುರಸ್ಥಿ
ಇತ್ತೀಚೆಗೆ ದೇವಾಲಯದ ಗರ್ಭಗೃಹ ಮತ್ತದರ ಮುಂದಿನ ಭಾಗವನ್ನು ದುರಸ್ತಿಗೊಳಿಸಿ ಉಳಿದ ಭಾಗವನ್ನು ಕೆಡವಿಹಾಕಲಾಗಿದೆ.ಗರ್ಭಗೃಹದಮೇಲಿನ ಶಿಖರವನ್ನು ನೂತನಶೖಲಿಯಲ್ಲಿ ನಿರ್ಮಿಸಲಾಗಿದೆ ದೇವಾಲಯದ ಮುಂದಿನ ಗರುಡಗಂಬದ ಜಗಲಿ ಬಂಡೆಯಮೇಲೆ ಎರಡುಸಾಲಿನ ತಮಿಳು ಶಾಹನವಿದ್ದು ಇದು ಹದಿಮೂರನೆ ಶತಮಾನಕ್ಕೆ ಸೇರುತ್ತದೆ ಎಂದು ದಾಖಲಿಸಲಾಗಿದೆ.ಮಂಜಲನಗರದ ಗ್ರಾಮಸ್ಥರಿಗೆ ಇಲ್ಲಿನ ಇತಿಹಾಸ, ಧಾರ್ಮಿಕ ಚಟುವಟಿಕೆಗಳ ಬಗ್ಗೆ ಮನದಟ್ಟು ಮಾಡಿಕೊಟ್ಟಿರುತ್ತಾರೆ.ಯದರೂರು ಮಂಜುನಾಥದೀಕ್ಷಿತ್, ಕೖಷ್ಣಗಿರಿ ಸಂಶೋಧಕ ಗೋವಿಂದರಾಜ್ ಅವರು ಇವರ ಕಾರ್ಯಕ್ಕೆ ನೆರವಾಗಿದ್ದು ದೇವಾಲಯವನ್ನು ಸಂರಕ್ಷಿಸಿಕೊಡಬೇಕೆಂದು ಗ್ರಾಮಸ್ಥರು ಸರಕಾರವನ್ನು ವಿನಂತಿಸಿದ್ದಾರೆ.



