ನ್ಯೂಜ್ ಡೆಸ್ಕ್:ಕಲ್ಪತರು ನಾಡು ತುಮಕೂರಿನಿಂದ ಕೋಲಾರಕ್ಕೆ ಬರಲು ಈ ರಸ್ತೆ ಬಳಸಿದರೆ ಅಂದಾಜು ಒಂದು ಗಂಟೆ ಸಾಕು ಇನ್ನೂ ಚಿಕ್ಕಬಳ್ಳಾಪುರಕ್ಕೆ ಬಹುಶಃ ನಲವತೈದು ನಿಮಿಷ ಆದರೆ ಸಾಕು ಎನ್ನುತ್ತಾರೆ ವಾಹನ ಚಾಲಕರು.
ಈ ರಸ್ತೆ ಬಳಸುವದರಿಂದ ಬೆಂಗಳೂರಿನ ಜನದಟ್ಟಣೆ ರಸ್ತೆಗಳಲ್ಲಿನ ಸಂಚಾರದ ದೀರ್ಘಕಾಲಿಕ ಕಿರಿಕಿರಿ Trafficಯಿಂದ ಸಾಕಪ್ಪ ಸಾಕು ಎಂದು ಬಳಲುವುದು ತಪ್ಪಿಸಲು ಮತ್ತು ಅಂತರ-ರಾಜ್ಯ ಪ್ರಯಾಣಿಕರಿಗೆ ಈ ಹೆದ್ದಾರಿ ನಿರ್ಣಾಯಕ ಬೈಪಾಸ್ ಆಗಿರುತ್ತದೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಮಾತು.

ಯಾವುದು ಈ ರಸ್ತೆ
ಹಾಗಾದರೆ ಇದು ಯಾವ ರಸ್ತೆ ಎಂದರೆ ಇದು ಬೆಂಗಳೂರು ಉತ್ತರ ಜಿಲ್ಲೆ ಡಾಬಸ್ ಪೇಟೆಯಿಂದ ತಮಿಳುನಾಡಿನ ಹೊಸೂರಿನವರೆಗೆ ವಿಸ್ತರಿಸಿರುವ ನೂತನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ರಸ್ತೆ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ NHAI ಭಾರತ್ಮಾಲಾ ಪರಿಯೋಜನಾ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ.
NHAI ಅಧಿಕಾರಿಗಳು ಹೇಳುವಂತೆ STRR ನಾಲ್ಕರಿಂದ ಆರು ಪಥಗಳ ಪ್ರವೇಶ-ನಿಯಂತ್ರಿತ ಹೆದ್ದಾರಿಯಾಗಿದ್ದು, ಈ ಕೆಳಗಿನ ಪ್ರಮುಖ ನಗರಗಳಾದ ಡಾಬಸ್ ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ,ಹೊಸಕೋಟೆ, ಆನೇಕಲ್, ತಟ್ಟೆಕೆರೆ, ಕನಕಪುರ, ರಾಮನಗರ ಮತ್ತು ಮಾಗಡಿ ಹಾಗು ಅಂತಿಮವಾಗಿ ತಮಿಳುನಾಡಿನ ಹೊಸೂರಿಗೆ ಸಂಪರ್ಕ ಕಲ್ಪಿಸಲು ಅನಕೂಲವಾಗುತ್ತದೆ.
ಹೊಸೂರು ಮತ್ತು ಮೈಸೂರಿನ ಭಾಗದವರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬರುವಂತ ವಾಹನ ಚಾಲಕರಿಗೆ ಈ ರಸ್ತೆ ಅನಕೂಲವಾಗುತ್ತದೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಬೇಕೆಂದು ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು ಹಾಗೂ ಸಂಸದ ಡಾ. ಸಿ ಎನ್ ಮಂಜುನಾಥ್ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಈ ಕಾಮಗಾರಿಗೆ ಅನುಮೋದನೆ ನೀಡಲು ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಸಚಿವರು ಅನುಮೋದನೆ ನೀಡಿದ ಪರಿಣಾಮ ಶೀಘ್ರವಾಗಿ ಪೂರ್ಣವಾಗಲು ಕಾರಣವಾಗಿದಿಯಂತೆ.ಜೂನ್ 2022 ರಲ್ಲಿ ಪ್ರಧಾನಿ ಮೋದಿಯವರು ಅಡಿಪಾಯ ಹಾಕಿದ ಹೆದ್ದಾರಿಯನ್ನು 2025 ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.



