ನ್ಯೂಜ್ ಡೆಸ್ಕ್:ವೇಮಗಲ್ ವಿಧಾನಸಭಾ ಕ್ಷೇತ್ರ ಕೋಲಾರ ಜಿಲ್ಲೆಯಲ್ಲೆ ಪ್ರತಿಷ್ಟಿತ ಹಾಗು ಗತ್ತು ಗೈರತ್ತಿನ ಕ್ಷೇತ್ರ ಎಂದೆ ಖ್ಯಾತಿ ಪಡದಿತ್ತು ಅಲ್ಲಿನ ಶಾಸಕ ಭೈರೇಗೌಡರು C. Byre Gowda, ಆರು ಬಾರಿ ಚುನಾಯಿತರಾಗಿ ರಾಜ್ಯ ಕೃಷಿ ಸಚಿವರಾಗಿ ಕೋಲಾರ ಜಿಲ್ಲೆಯಲ್ಲಿ ತಮ್ಮದೆ ಛಾಪು ಮೂಡಿಸಿದ್ದರು.ಕೃಷಿ ಸಚಿವರಾಗಿ ಅವರ ಕಾರ್ಯವೈಖರಿ ರಾಜ್ಯಾದ್ಯಂತ ಪ್ರಖ್ಯಾತಿ ಪಡೆದಿದ್ದು ಭೈರೇಗೌಡರ ಹೆಸರಿಗೆ ವೇಮಗಲ್ ಜತೆಯಾಗಿತ್ತು. ಭೈರೇಗೌಡರ ನಂತರದಲ್ಲಿ ನಡೆದ ವಿದ್ಯಮಾನ್ಯಗಳಲ್ಲಿ ಕೋಲಾರ ಜಿಲ್ಲೆ ವಿಭಜನೆಯಾಗಿ ಚಿಕ್ಕಬಳ್ಳಾಪುರ ಜಿಲ್ಲೆ 2007 ಅಸ್ತಿತ್ವಕ್ಕೆ ಬಂದಿತು.1967 ರಿಂದ ಮೈಸೂರು ರಾಜ್ಯದಲ್ಲಿ ಜನ್ಮ ತಾಳಿದ ವೇಮಗಲ್ Vemagal ವಿಧಾನಸಭಾ ಕ್ಷೇತ್ರ 2008 ಹೊತ್ತಿಗೆ ಕ್ಷೇತ್ರ ಪುನರ್ ವಿಂಗಡನೆಯಲ್ಲಿ ವೇಮಗಲ್ ಕ್ಷೇತ್ರ ಅಸ್ತಿತ್ವವನ್ನೆ ಕಳೆದುಕೊಂಡಿತು.ವೇಮಗಲ್ ವಿಧಾನಸಭಾ ಕ್ಷೇತ್ರದಲ್ಲಿದ್ದ ಸುಗಟೂರು ಹೋಬಳಿ ಶ್ರೀನಿವಾಸಪುರ ಕ್ಷೇತ್ರಕ್ಕೆ ಸೇರ್ಪಡೆಯಾದರೆ ಕೈವಾರ ಹಾಗು ಚಿಂತಾಮಣಿ ಕಸಬಾ ಹೋಬಳಿಗಳು ಜಿಲ್ಲೆ ವಿಭಜನಿಯಿಂದಾಗಿ ಚಿಂತಾಮಣಿಗೆ ಸೇರ್ಪಡೆಯಾಯಿತು ಮುಂದೆ ವೇಮಗಲ್ ಸೇರಿದಂತೆ ನರಸಾಪುರ ಹೋಬಳಿಗಳು ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಯಿತು.
ವೇಮಗಲ್ ಊರಿನ ಬಗ್ಗೆ ವಿಶೇಷ ಕಾಳಜಿ ಇಟ್ಟಿರುವ ಮಾಜಿ ಸಭಾಪತಿ ಸುದರ್ಶನ್ ಪಟ್ಟಣ ಪಂಚಾಯಿತಿಗೆ ಬಡ್ತಿ ಪಡೆಯುವ ಕಾರ್ಯದಲ್ಲಿ ಅವರ ಪಾತ್ರ ದೊಡ್ಡದು ತಮ್ಮ ಕುಟುಂಬದ ಒಡೆತನದ ಕಟ್ಟಡಗಳನ್ನು ಸರ್ಕಾರದ ಇಲಾಖೆಗಳಿಗೆ ಕೊಟ್ಟಿದ್ದಾರೆ.
ವೇಮಗಲ್ ಕೈಗಾರಿಕ ಪ್ರದೇಶವಾದ ನಂತರ ಊರು ಹಳೆ ಸ್ವರೂಪ ಕಳೆದು ಹೊಸ ರೂಪದಲ್ಲಿ ಕಾಣುತ್ತಿದೆ ವೇಮಗಲ್ ಅಲ್ಲಿನ ಜನರ ಜೀವನ ಶೈಲಿಯೆ ಬದಲಾಗಿದೆ,ಈಗ ಪಟ್ಟಣ ಪಂಚಾಯಿತಿಗೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ ಕೋಲಾರ ತಾಲೂಕಿನ ರಾಜಕಾರಣಿಗಳು ನಿತ್ಯನಿರಂತರ ಎನ್ನುವಂತೆ ಅಲ್ಲೆ ಬೀಡು ಬಿಟ್ಟು ಪಟ್ಟಣ ಪಂಚಾಯಿತಿ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.
ಮರು ಹುಟ್ಟು ಪಡೆಯುತ್ತದ “ವೇಮಗಲ್”?
ಇದರ ಮದ್ಯ ಮತ್ತೊಂದು ಮಾತು ಕೇಳಿಬರುತ್ತಿದ್ದು ಜನಸಂಖ್ಯೆಯ ಆಧಾರದ ಮೇಲೆ ವಿಧಾನಸಭಾ ಕ್ಷೇತ್ರಗಳ ಮರು ವಿಂಗಡಣೆ de limitation ಆದರೆ ಕೋಲಾರ ಜಿಲ್ಲೆಯಲ್ಲಿ ವೇಮಗಲ್ ವಿಧಾನಸಭಾ ಕ್ಷೇತ್ರ ಮರು ಹುಟ್ಟುಪಡೆಯುತ್ತದೆ ಎಂದು ಹೇಳಲಾಗುತ್ತಿದೆ.ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಕೋಲಾರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವಂತ ಆರು ವಿಧಾನಸಭಾ ಕ್ಷೇತ್ರಗಳ de limitation ಮರು ವಿಂಗಡನೆಯಾಗಿ ಏಳು ವಿಧಾನಸಭಾ ಕ್ಷೇತ್ರಗಳಾಗುತ್ತದೆ ಏಳನೆ ಕ್ಷೇತ್ರವೆ ವೇಮಗಲ್ ವಿಧಾನಸಭಾ ಕ್ಷೇತ್ರ ಎಂಬ ಮಾತು ಕೇಳಿಬರುತ್ತಿದೆ.
2026 ಅಂತ್ಯದಲ್ಲಿ ಬರುವಂತಹ ಜನಸಂಖ್ಯೆ ವರದಿ ಆಧಾರದಲ್ಲಿ ಕ್ಷೇತ್ರಗಳ ಮರು ವಿಂಗಡಣೆ ಕಾರ್ಯಕ್ಕೆ ಚಾಲನೆ ದೊರೆಯಲಿದೆ ಎಂದು ಹೇಳಲಾಗುತ್ತಿದ್ದು ಪಟ್ಟಣ ಪಂಚಾಯಿತಿ ಸ್ಥಾನಮಾನ ಪಡೆದಿರುವ ವೇಮಗಲ್ ಭವಿಷತ್ತಿನಲ್ಲಿ ತಾಲೂಕು ಮುಖ್ಯ ಕೇಂದ್ರವಾಗುವ ಅರ್ಹತೆ ಇದೆ ಕ್ಷೇತ್ರ ಮರು ವಿಂಗಡನೆಯಲ್ಲಿ ಮತ್ತೆ ವಿಧಾನಸಭಾ ಕ್ಷೇತ್ರ ಆದರೆ ಅಭಿವೃದ್ಧಿಗೆ ಸಹಕಾರ ಸಿಕ್ಕಂತಾಗುತ್ತದೆ ಎಂದು ಹೇಳಲಾಗುತ್ತಿದೆ.
ವೇಮಗಲ್ ವಿಧಾನಸಭಾ ಕ್ಷೇತ್ರ ರೂಪಗೊಂಡರೆ ವೇಮಗಲ್,ನರಸಾಪುರ,ಸುಗಟೂರು ಹೋಬಳಿಗಳು ಒಳಗೊಂಡಂತೆ ವೇಮಗಲ್ ವಿಧಾನಸಭಾ ಕ್ಷೇತ್ರ ಮರುಜನ್ಮ ಪಡೆಯಬಹುದು ಎನ್ನುತ್ತಾರೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



