ಶ್ರೀನಿವಾಸಪುರ:ಪಟ್ಟಣದ ವಿವಿಧ ರಸ್ತೆಗಳ ಬದಿ ತಿಂಡಿ ಅಂಗಡಿ ಹೋಟೆಲ್ ಗಳನ್ನು ಒಂದೇ ಸೂರಿನಡಿ ತಂದು ವ್ಯಾಪಾರಸ್ಥರಿಗೆ ಅನಕೂಲಮಾಡುವ ಉದ್ದೇಶದಿಂದ ಪುರಸಭೆ ಫುಡ್ ಕೋರ್ಟ್ ನಿರ್ಮಾಣ ಮಾಡಿದೆ ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಹೇಳಿದರು.
ಪಟ್ಟಣದ ಸರ್ಕಾರಿ ಬಾಲಕೀಯರ ಕಾಲೇಜು ಮುಂಭಾಗದಲ್ಲಿ ಪುಡ್ ಕೋರ್ಟ್ ಲೋಕಾರ್ಪಣೆ ಮಾಡಿ ಮಾತನಾಡಿದರು.
ಬೀದಿ ಬದಿ ವ್ಯಾಪಾರಸ್ಥರ ಪಟ್ಟಿಯನ್ನು Srinivasapura ಪುರಸಭೆ ಅಧಿಕಾರಿಗಳಿಂದ ಸಿದ್ದಪಡಿಸಲಾಗಿದ್ದು, ಲಾಟರಿ ಮೂಲಕ ಅಂಗಡಿಗಳನ್ನು ಹಂಚಿಕೆ ಮಾಡಲಾಗುವುದು.ಯಾವುದೆ ಷರತ್ತು ಇಲ್ಲದೆ ಅಂಗಡಿ ನೀಡಲಾಗುತ್ತಿದ್ದು ಮೂಲ ಅಂಗಡಿ ಪಡೆದವರು ಮಾತ್ರ ಅಂಗಡಿ ತೆರೆದು ವ್ಯವಹಾರ ಮಾಡಬೇಕು ಬೇರೆವರಿಗೆ ಬಾಡಿಗೆ ಕೊಡುವುದು ಮಾಡಬೇಡಿ ಈ ಬಗ್ಗೆ ಕಟ್ಟುನಿಟ್ಟಾಗಿ ಕ್ರಮ ಜರಿಗಿಸಲಾಗುವುದು ಹಾಗೆ ಈ ಜಾಗ ನಿಮ್ಮ ಸ್ವಂತ ಜಾಗ ಅಲ್ಲ ಎಂದು ಹೇಳಿದರು.
ಪಟ್ಟಣದ ಅಭಿವೃದ್ಧಿಗೆ ಆದ್ಯತೆ
ಪಟ್ಟಣದಲ್ಲಿ ಸುಮಾರು 7 ಸಾವಿರ ಮನೆಗಳು ಇದ್ದು ಅದರಲ್ಲಿ ಈಗಾಗಲೇ ನನ್ನ ಅವಧಿಯಲ್ಲಿ 2600 ಮೇಲ್ಟಟ್ಟು ಖಾತೆಗಳನ್ನು ಮಾಡಲಾಗಿದೆ. ನನ್ನ ಆಶಯಗಳಿಗೆ ಸಹಕರಿಸುತ್ತಿರುವ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದ ಅವರು. 2018 ರಲ್ಲಿ ಪಟ್ಟಣದ ಆಭಿವೃದ್ಧಿಗಾಗಿ ಸರ್ಕಾರದಿಂದ 15 ಕೋಟಿ ರೂ ವಿಶೇಷ ಅನುದಾನ ಬಿಡುಗಡೆಯಾಗಿದ್ದು ಟೆಂಡರ್ ಮೂಲಕ ಪಟ್ಟಣದಲ್ಲಿ ರಸ್ತೆ, ಕೊಳವೆಬಾವಿ, ಕುಡಿಯುವ ನೀರು , ಚರಂಡಿಗಳ ಅಭಿವೃದ್ಧಿ ನಿರ್ಮಾಣ ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ಒದಗಿಸಲು ಪುರಸಭೆ ಸದಸ್ಯರ ಸಹಕಾರದೊಂದಿಗೆ ಪಟ್ಟಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಮುಖ್ಯಾಧಿಕಾರಿ ವಿ.ನಾಗರಾಜ್, ಉಪಾಧ್ಯಕ್ಷೆ ಸುನಿತಾ, ಮಾಜಿ ಉಪಾಧ್ಯಕ್ಷೆ ಆಯೀಶಾ ನಯಾಜ್, ಸದಸ್ಯರಾದ ಆನಂದ್ಬಾಬು, ಎನ್ಎನ್ಆರ್ .ನಾಗರಾಜ್, ನಾಮನಿ ಸದಸ್ಯರಾದ ನರಸಿಂಹಮೂರ್ತಿ , ಹೇಮಂತ್, ಕಂದಾಯ ನಿರೀಕ್ಷಕ ಎನ್.ಶಂಕರ್, ಆರೋಗ್ಯ ನಿರೀಕ್ಷಕ ಸುರೇಶ್, ಸಿಬ್ಬಂದಿಗಳಾದ ಸಂತೋಷ್, ನಾಗೇಶ್, ಶ್ರೀನಾಥ್ ಮುಂತಾದವರು ಇದ್ದರು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



