ಶ್ರೀನಿವಾಸಪುರ:ಜೀವನಾಡಿ ಮಾವಿಗೆ ಬೆಂಬಲ ಬೆಲೆ ನೀಡಿ ರೈತರ ಹಿತ ಕಾಪಾಡಿದ ಸರ್ಕಾರಗಳಿಗೆ ಹಾಗು ಸಹಕರಿಸಿದ ಶಾಸಕ ಮತ್ತು ಅಧಿಕಾರಿಗಳಿಗೆ ಮಾವು ಬೆಳೆಗಾರರು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾ ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪರೆಡ್ಡಿ ಹಾಗು ಪಾತಕೋಟೆ ನವೀನ್ ಕುಮಾರ್ ನಷ್ಟದಲ್ಲಿದ್ದ ರೈತರಿಗೂ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಮಾವು ಬೆಳೆಗಾರರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು ಅರಂಭದಲ್ಲಿ ಬೆಳೆಗಾರರ ಪ್ರತಿಭಟನೆಗೆ ಸರ್ಕಾರ ಸೊಪ್ಪು ಹಾಕಿರಲಿಲ್ಲ ನಂತರದಲ್ಲಿ “20 ದಿನಗಳ ಕಾಲ ರೈತರೊಂದಿಗೆ ಹೋರಾಟಗಳು ನಿರಂತರವಾದ ಹಿನ್ನಲೆಯಲ್ಲಿ ರೈತರ ಬೆಳೆಗಾರರ ಪ್ರತಿಭಟನೆ ಕಾವು ಹೆಚ್ಚುತ್ತಿದ್ದಂತೆ ಬೆಡಿಕೆಗೆ ಸ್ಪಂದಿಸಿದ ಸರ್ಕಾರಗಳು ಕಳೆದ ಜೂ.26ರಂದು ಎಕರೆಗೆ 2 ಟನ್ ಮಾವಿಗೆ 4 ರೂ. ಪ್ರೋತ್ಸಾಹಧನ ಘೋಷಣೆ ಮಾಡಿ ಒಬ್ಬ ರೈತರಿಗೆ 5 ಎಕರೆವರೆಗೆ ಮಾವಿಗೆ ಬೆಂಬಲ ಬೆಲೆ ಅರ್ಹತೆ ನೀಡಲಾಗಿತ್ತು.ನಂತರದಲ್ಲಿ ಶಾಸಕ ವೆಂಕಟಶಿವಾರೆಡ್ಡಿ ಮಾಜಿ ವಿಧಾನಪರಿಷತ್ ಸದಸ್ಯ ತೂಪಲ್ಲಿಚೌಡರೆಡ್ಡಿ ಮೂಲಕ ರಾಜ್ಯ ಕೃಷಿ ಸಚಿವ ಚಲುವನಾರಯಣಸ್ವಾಮಿ ಅವರೊಂದಿಗೆ ಚರ್ಚಿಸಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ ಪರಿಣಾಮ, ಮಾವಿಗೆ 2 ಟನ್ ಬದಲಾಗಿ 4 ಟನ್ನಂತೆ ಪ್ರತಿ ಖಾತೆದಾರನಿಗೆ 5 ಎಕರೆಗೆ 20 ಟನ್ವರೆಗೆ ಬೆಂಬಲ ಬೆಲೆ ಕೊಡುವ ಭರವಸೆ ನೀಡಿ ಆದೇಶ ಜಾರಿ ಮಾಡಲಾಯಿತು, ರೈತರ ಪರವಾಗಿ ರಾಜ್ಯ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್,ಕೋಲಾರ ಜಿಲ್ಲಾಧಿಕಾರಿ ರವಿ ಅವರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದಿರುತ್ತಾರೆ.ಪತ್ರಿಕಾಗೋಷ್ಠಿಯಲ್ಲಿ ಫಾರೂಕ್,ವೀರಪ್ಪರೆಡ್ಡಿ,ಈರಪ್ಪ,ಅಸ್ಲಾಂ ಮುಂತಾದವರು ಇದ್ದರು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



