ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಡಿವಿಜಿ ರಸ್ತೆಯಲ್ಲಿರುವ ಶ್ರೀನಿವಾಸಪುರ PLD ಅಧ್ಯಕ್ಷರ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.ಪಟ್ಟಣದ ವೆಂಕಟೇಶ್ವರ ಬಡಾವಣೆಯ ಡಿವಿಜಿ ರಸ್ತೆಯಲ್ಲಿರುವ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ರವರ ಮನೆ ಇದ್ದು ಇವರು ಕುಟುಂಬ ಸಮೇತರಾಗಿ ಮೂರು ದಿನಗಳ ಹಿಂದೆ ಮೈಸೂರಿಗೆ ನೆಂಟರ ಮನೆಗೆ ತೆರಿಳಿದ್ದಾಗ ಕಳ್ಳತನ ನಡದಿರುತ್ತದೆ.
ಶ್ವಾನ ದಳ ಬೆರಳಚ್ಚು ತಜ್ಞರ ಭೇಟಿ
ಅಶೋಕ್ ಕುಟುಂಬ ಕಳ್ಳತನದ ಮಾಹಿತಿ ತಿಳಿದು ಮೈಸೂರಿನಿಂದ ವಾಪಾಸ್ಸಾಗುತ್ತಿದ್ದು ಸ್ಥಳಕ್ಕೆ ಪೊಲೀಸ್ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ, ಮನೆ ಮಾಲಿಕ ಅಶೋಕ್ ಬಂದ ನಂತರ ಕಳ್ಳತನವಾಗಿರುವ ವಡವೆ ಹಣದ ಮಾಹಿತಿ ತಿಳಿಯಲಿದೆ.ಸಹಾಯಕ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜಗದೀಶ್,ಶ್ರೀನಿವಾಸಪುರ ಪೊಲೀಸ್ ಠಾಣಾಧಿಕಾರಿ ಗೊರವನಕೊಳ್ಳ ಅವರು ಅಶೋಕ್ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸಿದ್ದಾರೆ.
ದಿಂಬಾಲ್ ಅಶೋಕ್ ಮನೆ ಬಾಗಿಲು ತೆಗೆದಿರುವುದನ್ನು ಕಂಡ ಪಕ್ಕದ ಮನೆಯರು ಅನುಮಾನ ಗೊಂಡು ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ,ಕಳ್ಳರು ಚಾಲಾಕಿತನದಿಂದ ಕಳ್ಳತನ ಮಾಡಿದ್ದು ದಿಂಬಾಲ್ ಅಶೋಕ್ ಅವರ ಮನೆಯ ಸುತ್ತಮುತ್ತಲಿನ ಮನೆಗಳ ಮುಂದಿನ ಸಿಸಿ ಕ್ಯಾಮಾರಗಳನ್ನು ಹೊಡೆದು ಹಾಕಿ ಕಳ್ಳತನ ಮಾಡಿದ್ದಾಗಿ ಹೇಳುತ್ತಿದ್ದಾರೆ.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



