ನ್ಯೂಜ್ ಡೆಸ್ಕ್: ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗು ಅವರ ಮಗನನ್ನು ಆಂಧ್ರದ ನರಸರಾವ್ಪೇಟೆಯಲ್ಲಿ ಹಾಡು ಹಗಲೆ ಅಪಹರಿಸಿ ಧಾರುಣವಾಗಿ ಕೊಲೆ ಮಾಡಲಾಗಿದೆ. ಮೃತರನ್ನು ಬೆಂಗಳೂರಿನ ಚಿನ್ನಸಂದ್ರ ಕಾಡುಗೋಡಿ ನಿವಾಸಿಗಳಾದ ಕೆ. ವೀರಸ್ವಾಮಿರೆಡ್ಡಿ ಮತ್ತು ಅವರ ಮಗ ಕೆ.ವಿ. ಪ್ರಶಾಂತ್ ರೆಡ್ಡಿ(35) ಎಂದು ಗುರಿತಿಸಲಾಗಿದೆ. ಚೆಕ್ ಬೌನ್ಸ್ ಪ್ರಕರಣದ ವಿಚಾರಣೆಗೆ ಆಂಧ್ರದ ನರಸರಾವ್ಪೇಟೆಗೆ ಹೋಗಿದ್ದರು. ಮೃತ ವೀರಸ್ವಾಮಿರೆಡ್ಡಿ ಮೂಲತಃ ಆಂಧ್ರದ ಬಾಪಟ್ಲ ಜಿಲ್ಲೆಯ ಸಂತಮಾಗಲೂರಿನವರು ಎನ್ನಲಾಗಿದ್ದು ಕುಟುಂಬ ಸಮೇತ ಬೆಂಗಳೂರಿಗೆ ವಲಸೆ ಬಂದು ವೈಟ್ಫೀಲ್ಡ್ ಪ್ರದೇಶದಲ್ಲಿ ನೆಲೆಸಿದ್ದರು. ಸ್ಥಳಿಯವಾಗಿ ರಿಯಲ್ ಎಸ್ಟೇಟ್ ವ್ಯಾಪಾರ ಹಾಗು ರಾಜಕೀಯವಾಗಿ ಭಾರತೀಯ ಜನತಾ ಪಕ್ಷದಲ್ಲಿ ಇದ್ದು ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಭಾವಿ ಮಾಜಿ ಶಾಸಕ ಅರವಿಂದ ಲಿಂಬಾವಳಿ ಆಪ್ತ ವರ್ಗದಲ್ಲಿ ಗುರುತಿಸಿಕೊಂಡು ಮಗ ಸ್ಥಳೀಯ ಯುವ ಮೊರ್ಚಾ ಅಧ್ಯಕ್ಷರಾಗಿ ಪ್ರಭಾವಿಗಳಾಗಿದ್ದರು ಮುಂದಿನ ಬಿಬಿಎಂ ಚುನಾವಣೆಯಲ್ಲಿ ಸ್ಪರ್ದಿಸಲು ತಯಾರಿ ಮಾಡಿಕೊಂಡಿದ್ದರಂತೆ.
ಚೌಕ್ ಬೌನ್ಸ್ ವ್ಯವಹಾರ ಪ್ರಾಣಕ್ಕೆ ಮುಪ್ಪಾಯಿತ?
ಚೆಕ್ ಬೌನ್ಸ್ ಪ್ರಕರಣದಲ್ಲಿ ಆಂಧ್ರದದಲ್ಲಿ ವಿಚಾರಣೆ ಎದುರಿಸುತ್ತಿದ್ದ ವೀರಸ್ವಾಮಿರೆಡ್ಡಿ ಅದಕ್ಕಾಗಿ ಮಗನೊಂದಿಗೆ ಆಂಧ್ರದ ನರಸರಾವ್ಪೇಟೆಗೆ ತಮ್ಮ ಬೆಂಗಳೂರಿನ ವಕೀಲ ನಾಗಭೂಷಣಂ ಜೊತೆಗೆ ಹೋಗಿದ್ದು, ಸ್ಥಳೀಯ ಹೋಟೆಲ್ ಒಂದರಲ್ಲಿ ತಂಗಿದ್ದರು,ಬೆಳಿಗ್ಗೆ ಮೂವರು ಶ್ರೀನಿಧಿ ಹೋಟೆಲ್ನಲ್ಲಿ ಉಪಾಹಾರ ಸೇವಿಸಿ ನ್ಯಾಯಾಲಯಕ್ಕೆ ಹೋಗಲು ಹೊರಬಂದಾಗ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನ ಟಿಜಿ 08 ಕೆ 2345 ರಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯಲ್ಲಿದ್ದ ವೀರಸ್ವಾಮಿರೆಡ್ಡಿ ಮತ್ತು ಅವರ ಮಗ ಪ್ರಶಾಂತ್ ರೆಡ್ಡಿ ಅವರನ್ನು ಸುತ್ತುವರಿದು ಬಲವಂತವಾಗಿ ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಹೋಗಿದ್ದಾರೆ.ಅಪ್ಪ-ಮಗನೊಂದಿಗೆ ಇದ್ದ ವಕೀಲ ದ್ವಿಚಕ್ರ ವಾಹನದಲ್ಲಿ ಕಾರನ್ನು ಹಿಂಬಾಲಿಸಿದ್ದಾರೆ ಆದರೆ, ಕಾರು ವೇಗವಾಗಿ ಚಲಿಸುತ್ತಿದ್ದರಿಂದ ಅದನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಅಪ್ಪ-ಮಗನನ್ನು ಆರು ಮಂದಿ ದುಷ್ಕರ್ಮಿಗಳು ಅಪಹರಿಸಿಕೊಂಡು ಹೋಗಿದ್ದು ನಂತರ ವೀರಸ್ವಾಮಿರೆಡ್ಡಿ ಮತ್ತು ಪ್ರಶಾಂತ್ ರೆಡ್ಡಿ ಅವರು ಸಂತಮಾಗೂರಿನ ವಿಷ್ಣು ಸ್ಮಾರ್ಟ್ ಸಿಟಿ ವೆಂಚರ್ನಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ. ನರಸರಾವ್ಪೇಟೆಯಲ್ಲಿ ಇಬ್ಬರನ್ನು ಅಪಹರಿಸಿದ ದುಷ್ಕರ್ಮಿಗಳು ಅವರನ್ನು ವಾಹನದಲ್ಲಿ 20 ಕಿಲೋಮೀಟರ್ ದೂರ ಕರೆದೊಯ್ದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಆಂಧ್ರದ ರಿಯಲ್ ಎಸ್ಟೇಟ್ ಉದ್ಯಮಿ ಅನಿಲ್ ರೆಡ್ಡಿ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವೀರಸ್ವಾಮಿರೆಡ್ಡಿ ಮತ್ತು ಅನಿಲ್ ರೆಡ್ಡಿ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಇದ್ದು ಇಬ್ಬರ ನಡುವೆ ವ್ಯವಹಾರ ವಿವಾದವಾಗಿ ಮಾರ್ಪಟ್ಟಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ ನರಸರಾವ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಘಟನೆಯ ತನಿಖೆ ಆರಂಭಿಸಿದ್ದಾರೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



