ಶ್ರೀನಿವಾಸಪುರ:ಮಾಜಿ ಸ್ಪೀಕರ್ ರಮೇಶ್ ಕುಮಾರ್ ರಾಜ್ಯ ಕಂಡ ಹಿರಿಯ ಮುತ್ಸದಿ ರಾಜಕಾರಣಿ ಸಮಾಜದ ಎಲ್ಲಾ ವರ್ಗದ ಜನರ ಒಲವು ಪ್ರೀತಿ ಗಳಿಸಿದ್ದಾರೆ ಅವರ ಬಗ್ಗೆ ಮಾತನಾಡುವಾಗ ವಿವೇಚನೆಯಿಂದ ಮಾತನಾಡಬೇಕು ಎಂದು ಕೋಮುಲ್ ನಿರ್ದೇಶಕ ಕಲ್ಲೂರುಮಂಜುನಾಥರೆಡ್ಡಿ ಶಾಸಕ ವೆಂಕಟಶಿವಾರೆಡ್ದಿಗೆ ಟಾಂಗ್ ನೀಡಿದರು.
ಇಂದು ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು ಇತ್ತಿಚಿಗೆ ಹಾಲಿ ಶಾಸಕ ವೆಂಕಟಶಿವಾರೆಡ್ಡಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವಾಗ ರಮೇಶ್ ಕುಮಾರ್ ವಿರುದ್ದ ಅಸಭ್ಯಕರವಾಗಿ ಮಾತನಾಡಿದ್ದಾರೆ ಇದು ಸರಿಯಲ್ಲ, ಸಾರ್ವಜನಿಕ ಜೀವನದಲ್ಲಿ ಯಾರಿಗೂ ಗೌರವ ತರುವುದಿಲ್ಲ ರಾಜಕೀಯ ಏನೆ ಇರಲಿ ಟೀಕಿಸುವಾಗ ಭಾಷೆ ಹಿತಮಿತವಾಗಿ ಇರಬೇಕು, ವೆಂಕಟಶಿವಾರೆಡ್ಡಿ ಜೆಡಿಎಸ್ ಪಕ್ಷದಿಂದ ಗೆದ್ದು ಕ್ಷೇತ್ರದ ಶಾಸಕರಾಗಿದ್ದಾರೆ ಅವರ ಬಗ್ಗೆ ನಮಗೆ ಗೌರವ ಇದೆ ಅವರು ತಾಲೂಕಿನ ಅಭಿವೃದ್ಧಿ ಮಾಡಲು ಕಾಂಗ್ರೆಸ್ ಪಕ್ಷದ ಮುಖಂಡರು ಅಡ್ಡಿ ಪಡಿತ್ತಿದ್ದಾರೆ ಎನ್ನುವ ಆರೋಪ ಸುಳ್ಳು ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಂಪೂರ್ಣವಾದ ಸಹಕಾರ ಇರುತ್ತದೆ ಎಂದರು.
ವಿಷಾಧ ವ್ಯಕ್ತಪಡಿಸುತ್ತೇನೆ ಸಂಜಯ್ ರೆಡ್ಡಿ
ಮಾತಿನ ಭರದಲ್ಲಿ ಶಾಸಕ ವೆಂಕಟಶಿವಾರೆಡ್ಡಿ ಅವರನ್ನು ಶ್ರೀನಿವಾಸಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೈರಗಾನಹಳ್ಳಿಸಂಜಯ್ ರೆಡ್ಡಿ ನಿಂದಿಸಿದ್ದರು ಅದಕ್ಕೆ ಇಂದಿನ ಪತ್ರಿಕಾಘೋಷ್ಠಿಯಲ್ಲಿ ಮಾಧ್ಯಮದ ಎದರು ಕ್ಷಮೆಯಾಚಿಸಿದ ಪ್ರಸಂಗ ನಡೆಯಿತು.ಶಾಸಕ ವೆಂಕಟಶಿವಾರೆಡ್ಡಿಯವರು ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುವಾಗ ರಮೇಶ್ ಕುಮಾರ್ ಕುರಿತಾಗಿ ಅಸಭ್ಯಕರವಾಗಿ ಮಾತನಾಡಿದ್ದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡನಾಗಿ ರಮೇಶ್ ಕುಮಾರ್ ಅಭಿಮಾನಿಯಾಗಿ ತಕ್ಷಣ ಪ್ರತಿಕ್ರಿಯಿಸಿದೆ ಆದರೆ ವೆಂಕಟಶಿವಾರೆಡ್ಡಿಯವರು ಹಿರಿಯರು ಹಾಗು ಗೌರ್ವಾನಿತ ಶಾಸಕ ಆಗಿರುವ ಅವರನ್ನು ಗೌರವಿಸುತ್ತೇನೆ ನನ್ನ ಪದ ಬಳಕೆಯಿಂದ ಯಾರಿಗಾದರು ನೋವಾಗಿದ್ದರೆ ವಿಷಾಧಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಬಂಕ್ ಮಂಜುನಾಥರೆಡ್ಡಿ, ಅಗ್ರಹಾರ ಅಶ್ವಥ್ ರೆಡ್ಡಿ ನಾಗದೇನಹಳ್ಳಿಶ್ರೀನಿವಾಸ್ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



