ನ್ಯೂಜ್ ಡೆಸ್ಕ್:ಜಾತಕದಲ್ಲಿ ರಾಹು-ಕೇತುಗಳ ದಶಾ-ಮಹಾದಶಾ ಇದ್ದರೆ, ಸಾಲಾಗಿ ಸಮಸ್ಯೆಗಳು ಬರುತ್ತದೆ. ರಾಹು ಕೇತುವಿನ ದೃಷ್ಟಿಯಿಂದ ಆರ್ಥಿಕ ಮತ್ತು ಸಾಮಾಜಿಕ ಜೊತೆಗೆ ಮಾನಸಿಕವಾಗಿಯೂ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದ್ದು ಈ ಕಾರಣಕ್ಕೆ ಜಾತಕದಲ್ಲಿ ದೋಷ ಕಂಡು ಬಂದಾಕ್ಷಣ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಇದಕ್ಕಾಗಿ ರಾಹು-ಕೇತು ಶಾಂತಿ ಮಾಡಿಸಿದರೆ ಪರಿಹಾರವಾಗುತ್ತದೆ ಎನ್ನುತ್ತಾರೆ ಶಾಸ್ತ್ರಜ್ಞರು.
ಶ್ರೀಕಾಳಹಸ್ತಿಯಲ್ಲಿ ರಾಹು ಕೇತು ಪೂಜೆಯನ್ನು ಮಾಡಿದರೆ ಉತ್ತಮ ಫಲಿತಾಂಶಗಳು ಸಿಗುತ್ತವೆ ಎಂಬುದು ನಂಬಿಕೆ. ರಾಹು ಕೇತು ಪೂಜೆಯಿಂದ ನಕಾರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಶಾಂತಿ, ಆರೋಗ್ಯ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಈ ರಾಹುಕೇತು ಪೂಜೆಯನ್ನು ಮಾಡಿದರೆ, ಮದುವೆ ವಿಳಂಬ ಇತ್ಯಾದಿಗಳಿಗೆ ತ್ವರಿತ ಪರಿಹಾರ ನೀಡುತ್ತದೆ ಎಂದು ನಂಬಲಾಗಿದೆ.
ರಾಹು ಕೇತು ಪೂಜೆ ಸಮಸ್ಯೆಗಳಿಗೂ ಪರಿಹಾರ
ರಾಹು ಕೇತು ದೋಷದಿಂದ ಮಾನಸಿಕ ಒತ್ತಡ, ಆರ್ಥಿಕ ಸಂಕಷ್ಟ, ದೀರ್ಘಕಾಲದ ಆರೋಗ್ಯ ಸಮಸ್ಯೆಗಳು, ಮಾನಸಿಕ ಒತ್ತಡ, ಭಯ, ರೋಗಗಳು, ಕೆಲಸದಲ್ಲಿ ಅಭಿವೃದ್ಧಿ ಕೊರತೆ,ಕೆಲಸಗಳು ನಿಧಾನಗತಿ,ವ್ಯವಹಾರದಲ್ಲಿ ನಷ್ಟ, ವಿವಾಹ ವಿಳಂಬ, ವೈವಾಹಿಕ ಜೀವನದಲ್ಲಿ ತೊಂದರೆಗಳು,ಅತಿಯಾದ ಕೋಪ,ಕೌಟುಂಬಿಕ ವಿವಾದಗಳು, ಮಕ್ಕಳ ಸಮಸ್ಯೆಗಳು, ನಿರಾಶೆ ಮುಂತಾದ ಸಮಸ್ಯೆಗಳು ಕಾಡುತ್ತವೆ.
ರಾಹು ಕೇತು ಪೂಜಾ ವಿಧಾನ ರಾಹು ಕೇತು ಪೂಜೆಯನ್ನು ವಿದ್ವಾಂಸರು ಸೂಚಿಸಿದ ಸಮಯದಲ್ಲಿ ಅಥವಾ ರಾಹು ಕಾಲದ ಸಮಯದಲ್ಲಿ ಅಥವಾ ಗ್ರಹಣ ಸಮಯದಲ್ಲಿ ಮಾಡಿಸಲಾಗುತ್ತದೆ. ಈ ಪೂಜೆಯನ್ನು ವಿದ್ವಾಂಸರ ಸಮ್ಮುಖದಲ್ಲಿ ವೈಜ್ಞಾನಿಕವಾಗಿ ಮಾಡಲಾಗುತ್ತದೆ. ಈ ರಾಹು ಕೇತು ಪೂಜೆಗೆ ಶನಿವಾರ ಒಳ್ಳೆಯದು. ಆ ದಿನ ಈ ಪರಿಹಾರಗಳನ್ನು ಮಾಡುವುದು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಶ್ರಾವಣ ಮಾಸದಲ್ಲಿ ಶಿವನನ್ನು ಪೂಜಿಸುವುದರಿಂದ ರಾಹು ಕೇತು ದೋಷಗಳು ಸಹ ನಿವಾರಣೆಯಾಗುತ್ತವೆ ಎಂದು ಹೇಳಲಾಗುತ್ತದೆ. ರಾಹು-ಕೇತು ಪೂಜೆಗೆ ಬೇಕಾಗುವ ವಸ್ತುಗಳು. ಅರಿಶಿನ, ಕುಂಕುಮ,ನಾಗ ಪೆಡಿಗೆ, ತೆಂಗಿನಕಾಯಿ, ಕಪ್ಪು ಎಳ್ಳು, ಕಪ್ಪು ಬಟ್ಟೆ, ಸಾಸಿವೆ ಎಣ್ಣೆ ದೀಪ, ಹೂವುಗಳು, ವೀಳ್ಯದ ಎಲೆ, ಬಿಲ್ವ ಎಲೆಗಳು, ಕಪ್ಪು ಬೆಲ್ಲ, ನಿಂಬೆಹಣ್ಣು ಮತ್ತು ಕಪ್ಪು ಬಟ್ಟೆ. ರಾಹು ಕೇತು ಪೂಜೆಗೆ ಪ್ರಸಿದ್ಧ ಸ್ಥಳ ಆಂಧ್ರಪ್ರದೇಶದಲ್ಲಿ ಶ್ರೀಕಾಳಹಸ್ತಿ ದೇವಸ್ಥಾನ ಅತ್ಯಂತ ಪ್ರಸಿದ್ಧ ಮತ್ತು ಶಕ್ತಿಶಾಲಿ ದೇವಾಲಯವಾಗಿದೆ,ಇಲ್ಲಿ, ರಾಹು ಕಾಲದಲ್ಲಿ ಪ್ರತಿದಿನ ರಾಹುಕೇತು ದೋಷ ನಿವಾರಣ ಪೂಜೆಗಳನ್ನು ಮಾಡಲಾಗುತ್ತದೆ. ಬೆಳಿಗ್ಗೆ 6 ರಿಂದ ಪೂಜೆಗಳು ಪ್ರಾರಂಭವಾಗಿ ಸಂಜೆಯವರಿಗೂ ನಡೆಯುತ್ತವೆ. ಟಿಕೆಟ್ಗಳು ರೂ.500 ರಿಂದ ರೂ.2500 ವರೆಗೆ ಲಭ್ಯವಿದೆ. ಸಂಪೂರ್ಣ ವಿವರಗಳನ್ನು ದೇವಾಲಯದ ಅಧಿಕೃತ ವೆಬ್ಸೈಟ್ನಲ್ಲಿ ಪಡೆಯಬಹುದಾಗಿದೆ, ಇನ್ನೂ ಕೋಲಾರಕ್ಕೆ ಹತ್ತಿರ ಎನ್ನುವಂತೆ ಇರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೊಗಲಿಯ ಸ್ವಯಂಭೂ ಶ್ರೀ ಮೊಗಲೇಶ್ವರ ದೇವಸ್ಥಾನದಲ್ಲೂ ರಾಹುಕೇತು ದೋಷ ನಿವಾರಣ ಪೂಜಾ ಹೋಮ ಮಾಡಲಾಗುತ್ತದೆ.ಮುಳಬಾಗಿಲು ನಗರಕ್ಕೆ ಸುಮಾರು 55 ಕೀ,ಮಿ ದೂರದಲ್ಲಿರುವ ಮೊಗಿಲಿ ಮುಳಬಾಗಿಲಿನಿಂದ ತಿರುಪತಿ ಚಿತ್ತೂರಿಗೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲಮನೇರು ಆದ ನಂತರ ಸಿಗುತ್ತದೆ.
ಪ್ರಸಿದ್ಧ ಗಣೇಶನ ಪುಣ್ಯಕ್ಷೇತ್ರವಾದ ಕಾಣಿಪಾಕಂನ ಶ್ರೀ ಮಣಿಕಂಠೇಶ್ವರನ ದೇವಾಲಯದಲ್ಲೂ ರಾಹು ಕೇತು ಪೂಜೆಗಳನ್ನು ಮಾಡಲಾಗುತ್ತದೆ ಕರ್ನಾಟಕದ ರಾಮಚಂದ್ರಪುರ ಮಠ,ಗೊಕರ್ಣ,ಕುಕ್ಕೆ,ಘಾಟಿಸುಬ್ರಮಣ್ಯ ಹಾಗು ಶ್ರೀರಂಗಪಟ್ಟಣದಲ್ಲಿ ರಾಹುಕೇತು ಪೂಜೆಗಳನ್ನು ಮಾಡಿಸುವ ಬಗ್ಗೆ ಹೇಳುತ್ತಾರೆ.
ಸರಳ ಪರಿಹಾರ ಶಿವಾರಾಧನೆ
ಬೆಂಗಳೂರಿನ ಪ್ಯಾಲೆಸ್ ಗುಟ್ಟಹಳ್ಳಿಯಲ್ಲಿರುವ ಏಕೈಕ ಪಂಚಮುಖಿ ಈಶ್ವರನ ಮುಂದೆ ಕುಳಿತು ರುದ್ರಾಕ್ಷ ಜಪಮಾಲೆಯನ್ನ ಹಿಡಿದು ‘ ಓಂ ನಮಃ ಶಿವಾಯ ‘ಮಂತ್ರವನ್ನು ಪಠಿಸಿ ಶಿವನನ್ನು ಆರಾಧಿಸಿದರೆ ರಾಹು-ಕೇತುಗಳ ದೋಷ ಕಡಿಮೆಯಾಗುತ್ತವೆ.ಆರ್ಥಿಕ ಸಮಸ್ಯೆಗಳಿಗೂ ಸಹ ಪರಿಹಾರ ಸಿಗುತ್ತದೆ ಎನ್ನುಲಾಗಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



