- ದೇವನಹಳ್ಳಿಯ ಚನ್ನರಾಯಪಟ್ಟಣದಲ್ಲಿ
- ರೈತರ ಹೋರಾಟಕ್ಕೆ ಸರಕಾರ ಮಣಿದ
- ಬೆನ್ನಲ್ಲಿ ಯದರೂರು ಅಖಾಡಕ್ಕೆ ಮಾಜಿ ಸ್ಪೀಕರ್
ಶ್ರೀನಿವಾಸಪುರ:ತಾಲೂಕಿನ ಯದರೂರು ಬಳಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಸರ್ಕಾರದ ಉದ್ದೇಶವಾಗಿದ್ದು ಕೈಗಾರಿಕಾ ಅಭಿವೃದ್ಧಿ ಮಂಡಳಿ Karnataka Industrial Areas Development Board (KIADB) ವತಿಯಿಂದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ವಿಚಾರದಲ್ಲಿ ರೈತರಿಗೆ ನೊಟೀಸ್ ಸಹ ನೀಡಲಾಗಿದೆ, ರೈತರಿಂದ ಭೂ ಸ್ವಾಧೀನ ಪ್ರಕ್ರಿಯೆಗೆ ವಿರೋಧ ವ್ಯಕ್ತವಾಗಿತ್ತು, ರೈತರ ಅಭಿಪ್ರಾಯ ಸಂಗ್ರಹ ಸಂದರ್ಭದಲ್ಲಿ ಕೆಲ ರೈತರು,ಕೆಐಎಡಿಬಿ ನಿಲವುಗಳನ್ನು ವಿರೋಧಿಸುತ್ತ ಬಂದಿದ್ದು,ಇಂದು ಶುಕ್ರವಾರ ರೈತರ ಅಭಿಪ್ರಾಯ ಸಂಗ್ರಹಕ್ಕೆ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಬಂದಿದ್ದರು ಇದೇ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ಮಾಜಿ ಸ್ಪೀಕರ್ ರಮೇಶಕುಮಾರ್ ರೈತರನ್ನು ಭೇಟಿಯಾದರು ಶಾಮಿಯಾನದ ಕೆಳಗೆ ರೈತರನ್ನು ಕೂರಿಸಿಕೊಂಡು ಅಭಿಪ್ರಾಯಗಳನ್ನು ಪಡೆದು ನಂತರ ಮಾತನಾಡಿದ ಅವರು ರೈತರ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಪಡಿಸಿಕೊಳ್ಳದಂತೆ ಕೆಐಎಡಿಬಿ ಅಧಿಕಾರಿಗಳಿಗೆ ಹೇಳಿದರು.

ರೈತರಿಗೆ ಭೂಮಿಯೊಂದಿಗೆ ಭಾವನಾತ್ಮಕ ಸಂಬಂದ ಇದೆ
ಅತುರಾತುರವಾಗಿ ಫಲವತ್ತಾದ ಕೃಷಿ ಭೂಮಿಯ ಸ್ವಾಧೀನ ಮಾಡಿಕೊಂಡರೆ ರೈತರು ಬಿದಿಪಾಲಾಗುತ್ತಾರೆ ಸಣ್ಣ ಹಿಡುವಳಿದಾರರು ಇದ್ದಾರೆ ಅವರಿಗೆ ಭೂಮಿಯೊಂದಿಗೆ ಭಾವನಾತ್ಮಕ ಸಂಬಂದ ಇರುತ್ತದೆ, ಅವರ ಒಪ್ಪಿಗೆ ಇಲ್ಲದೆ ಜಮೀನು ಪಡೆಯುವ ಹಾಗಿಲ್ಲ ಎಂದರು.
ಈ ಸಂದರ್ಭದಲ್ಲಿ ಕೋಮುಲ್ ನಿರ್ದೇಶಕ ಕೆ.ಕೆ.ಮಂಜು,ಮಾಜಿ ಅಧ್ಯಕ್ಷ ಬೇಟಪ್ಪ,ತಾಲೂಕು ಪಂಚಾಯಿ ಮಾಜಿ ಅಧ್ಯಕ್ಷ ಶಾಗತ್ತೂರು ಸುಧಾಕರ್,ಮಾಜಿ ಸದಸ್ಯೆ ಯಲ್ದೂರುಗೌರಮ್ಮ,ಸಿಪಿಎಂ ಪಕ್ಷದ ಕಾರ್ಮಿಕ ಮುಖಂಡ ಪಾತಕೋಟನವೀನ್ ಸೇರಿದಂತೆ ಮುಂತಾದವರು ಇದ್ದರು.
ಇದೆ ಸಂದರ್ಭದಲ್ಲಿ ಕೆಐಎಡಿಬಿ KIADB ಜಿಲ್ಲಾ ಭೂಸ್ವಾಧಿನಾಧಿಕಾರಿ ವೆಂಕಟಲಕ್ಷ್ಮೀ ರೈತರಿಂದ ಅಹವಾಲು ಸ್ವೀಕರಿದರು



