- ಮೇವು ಕತ್ತರಿಸುವ ಯಂತ್ರಕ್ಕೆ
- ಸಿಲುಕಿದ ಕೃಷಿ ಕಾರ್ಮಿಕ ಮಹಿಳೆ ಸಾವು
- ಗೌವನಪಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲು
ಶ್ರೀನಿವಾಸಪುರ:ಯಂತ್ರದಲ್ಲಿ ಮೇವು ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಆದ ಅಜಾಗರೂಕತೆಯಿಂದ ಕೃಷಿ ಕಾರ್ಮಿಕ ಮಹಿಳೆ ಯಂತ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಅಡ್ಡಗಲ್ ಗ್ರಾಮದ ಬಳಿ ನೆಡೆದಿದೆ.
ಮೃತ ಮಹಿಳೆಯನ್ನು ತಾಲೂಕಿನ ಕೊಪ್ಪವಾರಪಲ್ಲಿ ಗ್ರಾಮದ ಮಂಗಮ್ಮ ಕೋಂ ವೀರನಾರಯಣಸ್ವಾಮಿ(40)ಎಂದು ಗುರುತಿಸಲಾಗಿದ್ದು ಈಕೆ ಮಾಜಿ ಸ್ಪಿಕರ್ ರಮೇಶ್ ಕುಮಾರ್ ಅವರ ತೋಟದಲ್ಲಿ ಕೃಷಿ ಕಾರ್ಮಿಕಳಾಗಿದ್ದು ಇಂದು ಜಾನುವಾರುಗಳಿಗೆ ಸೀಮೆ ಹುಲ್ಲು ಕತ್ತರಿಸುವ ಸಲುವಾಗಿ ಯಂತ್ರಕ್ಕೆ ಚಾಲನೆ ನೀಡಿದ್ದ ಮಹಿಳೆ ಸೀರೆ ಯಂತ್ರಕ್ಕೆ ಸಿಲುಕಿ ಆಕೆ ಮೃತ ಪಟ್ಟಿರುವುದಾಗಿ ಹೇಳಿರುತ್ತಾರೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗೌವನಪಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ



