ಶ್ರೀನಿವಾಸಪುರ:ದೂರದೃಷ್ಟಿಯಿಂದ ಆಡಳಿತ ನಡೆಸಿದ ಕೆಂಪೇಗೌಡರು ಬೆಂಗಳೂರು ನಗರವನ್ನು ಅಂದೆ ಅಭಿವೃದ್ಧಿ ಗೊಳಿಸಿದ್ದಾರೆ ಇವತ್ತು ಇಡೀ ವಿಶ್ವವೇ ಬೆಂಗಳೂರು ನಗರ ಕಡೆ ನೋಡುವಂತೆ ಮಾಡಿದೆ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ ಹೇಳಿದರು. ಪಟ್ಟಣದ ಪುರಸಭೆ ಕಚೇರಿಯಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ ಬೆಂಗಳೂರು ನಗರವನು ನಿರ್ಮಿಸಿ, ಎಲ್ಲಾ ಸಮುದಾಯಗಳ ಬಂಧುಗಳು ಜೀವನ ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟಿದ ಕೀರ್ತಿ ದಕ್ಷ ಆಡಳಿತಗಾರ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.ಪುರಸಭೆ ಸದಸ್ಯ ಆನಂದಗೌಡ ಮಾತನಾಡಿ ಪಟ್ಟಣದ ಮುಳಬಾಗಿಲು ವೃತ್ತಕ್ಕೆ ಕೆಂಪೇಗೌಡ ವೃತ್ತ ಎಂದು ನಾಮಕರಣ ಮಾಡುವಂತೆ ಮಂಡಿಸಿದರು. ಅದಕ್ಕೆ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದರು. ಮಾವುಬೆಳೆಗಾರರ ಸಂಘದ ಕ್ಷೇಮಾಭಿವೃದ್ಧಿಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಪುರಸಭಾ ಮುಖ್ಯಾಧಿಕಾರಿ ವಿ.ನಾಗರಾಜ್, ಉಪಾಧ್ಯಕ್ಷೆ ಸುನಿತಾ, ಸದಸ್ಯರಾದ ಬಿ.ವಿ.ವೆಂಕಟರೆಡ್ಡಿ, ಎನ್ಎನ್ಆರ್ .ನಾಗರಾಜ್, ಶಾಂತಮ್ಮ,ಫೈರೋಜ್ , ನಾಮನಿ ಸದಸ್ಯರದ, ನರಸಿಂಹಮೂರ್ತಿ, ಗಂಗಾಧರ್, ಹೇಮಂತ್ಕುಮಾರ್, ಶಿವರಾಜ್, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಬಿಂದು. ಶ್ರೀನಿವಾಸರೆಡ್ಡಿ, ಹೊಳೋರು ಸಂತೋಷ್,ಪೂಲುಶಿವಾರೆಡ್ಡಿ,ಯುವರಾಜ್, ಕಂದಾಯ ನಿರೀಕ್ಷಕ ಎನ್.ಶಂಕರ್, ಆರೋಗ್ಯಾಧಿಕಾರಿ ಸುರೇಶ್, ಸಿಬ್ಬಂದಿ ಚಂದ್ರು,ಸಂತೋಷ್, ನಾಗೇಶ್, ಪ್ರತಾಪ್ ಮುಂತಾದವರು ಇದ್ದರು.



