ಮುರುಗ ಭಕ್ತರ ಮಾನಾಡು ಎಂಬ ಕಾರ್ಯಕ್ರಮವನ್ನು ಹಿಂದೂ ಮುನ್ನಾನಿ, ವಿಶ್ವ ಹಿಂದೂ ಪರಿಷತ್, ಬಿಜೆಪಿ ಮತ್ತು ಇತರ ಹಿಂದೂ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಆಧ್ಯಾತ್ಮಿಕ ಸಭೆ ಮಧುರೈನಲ್ಲಿ ನಡೆದಿದ್ದು ತಮಿಳುನಾಡಿನಲ್ಲಿ ಅತ್ಯಂತ ಭಕ್ತಿಯಿಂದ ಪೂಜಿಸುವ ದೇವರು ಮುರುಗ( ಸುಬ್ರಹ್ಮಣ್ಯ ಸ್ವಾಮಿ)ಹೆಸರಿನಲ್ಲಿ ಭಕ್ತರನ್ನು ಒಗ್ಗೂಡಿಸುವ, ಸನಾತನ ಧರ್ಮವನ್ನು ರಕ್ಷಿಸುವ ಮತ್ತು ಹಿಂದೂ ಐಕ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಅಂದಾಜು 5 ಲಕ್ಷ ಭಕ್ತರು ಭಾಗವಹಿಸಿದ್ದರು ಎನ್ನಲಾಗಿದೆ.
ಪವನ್ ಕಲ್ಯಾಣ್ ಏಕೆ ಹೋಗಿದ್ದರು?
ಸನಾತನ ಧರ್ಮ ಸಂರಕ್ಷಣೆ ಕುರಿತು visionary ಇಟ್ಟುಕೊಂಡು ಅದೆ ದಾರಿಯಲ್ಲಿ ಸಾಗುತ್ತಿರುವ ಪವನ್ ಕಲ್ಯಾಣ್ ರಾಜಕೀಯದ image ಅಷ್ಟೆ ಅಲ್ಲದೆ ತಮಿಳುನಾಡಿನೊಂದಿಗೆ ಆಧ್ಯಾತ್ಮಿಕ ಸಂಪರ್ಕವನ್ನು ಹೊಂದಿದ್ದಾರೆ ಸನಾತನ ಧರ್ಮದ ಕುರಿತಾಗಿ ತಮಿಳುನಾಡು ರಾಜಕೀಯ ತಳಹದಿಗೆ ಸಹಕಾರಿಯಾಗಲಿದೆ ಎಂಬ ಉದ್ದೇಶ ಇಟ್ಟುಕೊಂಡ ಬಿಜೆಪಿ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ಆಂಧ್ರದಲ್ಲಿ ಪವನ್ ಅವರನ್ನು ಖುದ್ದು ಭೇಟಿ ಮಾಡಿ ಮುಖ್ಯ ಭಾಷಣಕಾರನ್ನಾಗಿ ಭಾಗವಹಿಸಲು ಆಹ್ವಾನಿಸಿದ್ದರು.
ಈ ಹಿಂದೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹಿಂದುತ್ವದ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದಾಗ ಪವನ್ ಕಲ್ಯಾಣ ತೀರುಗೇಟು ನೀಡಿದ್ದರು ಇದಕ್ಕೆ ಇನ್ನಷ್ಟು ಸಮರ್ಥವಾಗಿ ಉತ್ತರ ನೀಡಲು ಬಿಜೆಪಿ ಯೋಜನೆ ರೂಪಿಸಿದಂತೆ ಅವರನ್ನು ಮುಖ್ಯ ಭಾಷಣಕಾರರನ್ನಾಗಿ ಸಭೆಯಲ್ಲಿ ಪಾಲ್ಗೋಳ್ಳಲು ಅವಕಾಶ ಕಲ್ಪಿಸಿತು.
ಪವನ್ ಇತ್ತೀಚೆಗೆ ತಮಿಳುನಾಡಿನ ಆರು ಪ್ರಖ್ಯಾತ ಸುಬ್ರಹ್ಮಣ್ಯಸ್ವಾಮಿ ದೇವಾಲಯಗಳನ್ನು ಸಂದರ್ಶನ ಮಾಡಿದ್ದರು.ಪವನ್ ಕಲ್ಯಾಣ್ ಅವರ ತಮಿಳುನಾಡು ಭೇಟಿಯ ಹಿಂದೆ ಬಿಜೆಪಿಗೆ ತಮಿಳುನಾಡಿನಲ್ಲಿ ಹಿಂದುತ್ವದ ಆಧಾರದಲ್ಲಿ ಅಡಿಪಾಯ ಹಾಕಿಕೊಡುವ ತಂತ್ರಗಾರಿಕೆ ಎನ್ನಲಾಗುತ್ತಿದೆ.
ನ್ಯೂಜ್ ಡೆಸ್ಕ್:ಧರ್ಮ ಎಲ್ಲೆಲ್ಲಿ ದಾರಿ ತಪ್ಪುತ್ತದೆಯೋ ಅಲ್ಲೆಲ್ಲಾ ಹೋರಾಟಗಳು ನಡೆಯುತ್ತದೆ ಎಂದು ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ PawanKalyan ಹೇಳಿದ್ದಾರೆ.
ಅವರು ತಮಿಳುನಾಡಿನ ಮಧುರೈನಲ್ಲಿ ನಡೆದ ಮುರುಗ ಭಕ್ತರ ಮಾನಾಡು ಸಭೆಯಲ್ಲಿ ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾಮಲೈ ಮತ್ತು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದ ಸ್ವಾಮಿಜಿಗಳೊಂದಿಗೆ ಹಸಿರು ಪಂಚೆ ಉಟ್ಟು ವೇದಿಕೆ ಹಂಚಿಕೊಂಡು ಮಾತನಾಡಿದರು. ತಮಿಳುನಾಡಿನಲ್ಲಿ ಉತ್ತರದ ಭಾವನೆ ವಿಭೇದ ಸೃಷ್ಟಿಸಿ ಉದ್ದೇಶಪೂರ್ವಕವಾಗಿ ಜನರಲ್ಲಿ ವಿಭಜನೆಯನ್ನು ತರುವ ಪಿತೂರಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಅಂತಹ ವಿಭಜನಕಾರಿ ಆಲೋಚನೆಗಳನ್ನು ಹೊಂದಿರುವವರು ತುಂಬಾ ಅಪಾಯಕಾರಿ. ಅಂತಹ ಜನರು ಶಿವ ಮತ್ತು ದೇವತೆಗಳ ಕುರಿತಾಗಿ ಬಗ್ಗೆ ಅಸಂಬದ್ದ ಪ್ರಶ್ನೆಗಳನ್ನು ಎತ್ತುತ್ತಾರೆ, ದೇಶದಲ್ಲಿ ಧರ್ಮಕ್ಕೆ ಎಲ್ಲೆಲ್ಲಿ ದಾರಿ ತಪ್ಪಿಸುತ್ತಾರೊ ಅಲ್ಲಿ ಒಗ್ಗಟ್ಟಿನ ಹೋರಾಟ ಅಗತ್ಯ ಎಂದು ಅವರು ಹೇಳಿದರು. ಧರ್ಮ ಎಂದರೇನು? ದುಷ್ಟ ಶಕ್ತಿಗಳನ್ನು ತೊಡೆದು ಹಾಕುವುದು ಧರ್ಮ. ಎಲ್ಲರನ್ನೂ ಸಮಾನವಾಗಿ ನಡೆಸುವುದು ಧರ್ಮ. ದುಷ್ಟರನ್ನು ಶಿಕ್ಷಿಸುವುದು ಧರ್ಮ ಎಂದ ಪವನ್ ಕಲ್ಯಾಣ್ ಧರ್ಮಕ್ಕೆ ತಮ್ಮದೆ ಶೈಲಿಯಲ್ಲಿ ಇಂಗ್ಲಿಷ್ ತೆಲಗು ಹಾಗು ತಮಿಳು ಭಾಷೆಗಳಲ್ಲಿ ವ್ಯಾಖ್ಯಾನ ಹೇಳಿದರು. ನಾನು ಹದಿನಾರು ವರ್ಷದವನಿದ್ದಾಗ ಶಬರಿಮಲೆಗೆ ಹೋಗಿದ್ದೆ.ಥೈಪುಸಮ್ ಸಂದರ್ಭದಲ್ಲಿ ತಿರುತ್ತಣಿಗೆ ಭಕ್ತರ ಪ್ರವಾಹ ಬರುವುದನ್ನು ನಾನು ಕಂಡಿದ್ದೇನೆ ವಿಭೂತಿ ಧರಿಸಿ ಶಾಲೆಗೆ ಹೋಗುತ್ತಿದ್ದೆ,ಎಂದು ಅವರು ತಮ್ಮ ಬಾಲ್ಯ ನಂತರ ತಮಿಳುನಾಡಿನಲ್ಲಿ ಹಾಡಿ ಬೆಳೆದದ್ದನ್ನು ನೆನಪಿಸಿಕೊಂಡರು.
ತಮಿಳಿನ ಮಹಾಕವಿ ಸುಬ್ರಮಣ್ಯಭಾರತಿ ರಚಿಸಿರುವ ಅಚ್ಚಮಿಲೈ ಅಚ್ಚಮಿಲೈ(ಭಯವಿಲ್ಲ,ಭಯವಿಲ್ಲ) ಸಾಲುಗಳನ್ನು ಹೇಳಿದ ಅವರು “ఇల్లేమో దూరం.. అసలే చీకటి.. గాఢాంధకారం… దారి అంతా గతుకులు లోయలు చేతిలో దీపం కూడా లేదు.. కానీ, గుండెల నిండా ధైర్యం ఉంటుంది” ಎಂದು ತೆಲಗು ಭಾಷೆಯಲ್ಲಿ ಮಾರ್ಮಿಕವಾಗಿ ನುಡಿದರು.
ಒಬ್ಬ ಕ್ರಿಶ್ಚಿಯನ್ ತನ್ನ ಧರ್ಮವನ್ನು ಗೌರವಿಸಬಹುದು. ಒಬ್ಬ ಮುಸ್ಲಿಂ ಕೂಡ ಅವರ ಧರ್ಮವನ್ನು ಗೌರವಿಸಬಹುದು. ಆದರೆ ಒಬ್ಬ ಹಿಂದೂ ತನ್ನ ಧರ್ಮವನ್ನು ಗೌರವಿಸಿ ದೇವರನ್ನು ಆರಾಧಿಸಿದರೆ ಯಾಕೆ ತಪ್ಪಾಗುತ್ತದೆ? ಎಂದ ಅವರು ಹಿಂದೂ ಧರ್ಮ ಮತ್ತು ಹಿಂದೂ ದೇವತೆಗಳನ್ನು ಕೇವಲವಾಗಿ ಮಾತನಾಡುತ್ತಾರೆ ಅವರದು ಜಾತ್ಯತೀತತೆ ಅಲ್ಲ, ಹುಸಿ ಜಾತ್ಯತೀತತೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು ರಾಜಕೀಯದಲ್ಲಿ ಹೊಸ ಶಕೆಗೆ ನಾಂದಿ ಸನಾತನ ಧರ್ಮದ ಹೆಸರಿನಲ್ಲಿ ತಮಿಳುನಾಡಿನಲ್ಲಿ ಹೊಸ ರೀತಿಯ ರಾಜಕೀಯ ಶಕೆಗೆ ನಾಂದಿ ಹಾಡಿದ ಪವನ್ ಕಲ್ಯಾಣ್, ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಅವರು ನಾಸ್ತಿಕರನ್ನು ಟೀಕಿಸಿ ಧರ್ಮದ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದರು. ಈ ಕಾರ್ಯಕ್ರಮವು ಆಧ್ಯಾತ್ಮಿಕ ಸಭೆಯಂತೆ ಕಂಡುಬಂದರೂ, ಜನ ಸೇನಾ ಪಕ್ಷದ ಮುಖ್ಯಸ್ಥರಾಗಿ ಪವನ್ ಕಲ್ಯಾಣ್ ಮಾಡಿದ ಭಾಷಣವು ಸ್ಪಷ್ಟ ರಾಜಕೀಯ ಸಂಕೇತಗಳನ್ನು ನೀಡಿದಂತಿತ್ತು. ತಮಿಳುನಾಡಿನಲ್ಲಿ ಹಿಂದೂ ಸಂಪ್ರದಾಯಗಳ ರಕ್ಷಣೆ ಮತ್ತು ಹಿಂದೂ ಧರ್ಮದ ವಿರುದ್ಧ ಬೆಳೆಯುತ್ತಿರುವ ಪ್ರವೃತ್ತಿಗಳನ್ನು ಎತ್ತಿ ತೋರಿಸುತ್ತಾ, ಧರ್ಮ, ಸಂಸ್ಕೃತಿ ಮತ್ತು ಭಕ್ತಿಯಂತಹ ಪದಗಳೊಂದಿಗೆ ಅವರು ಮಾತನಾಡಿದ ರೀತಿ ರಾಜಕೀಯ ಮಟ್ಟದಲ್ಲಿ ಹಲವು ಅರ್ಥಗಳನ್ನು ಮೂಡಿಸಿದಂತೆ ಇತ್ತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.



