ಸಮಾಜದಲ್ಲಿನ ಕೆಲವು ಘಟನೆಗಳು ಬೆಚ್ಚಿಬಿಳಿಸುತ್ತಿವೆ ಮಾನವೀಯತೆ ಇಲ್ಲದೆ ವರ್ತನೆಗಳು ಸಮಾಜವನ್ನು ಎತ್ತ ಕೊಂಡೊಯುತ್ತಿದೆ ಎಂಬ ಪ್ರಶ್ನೆ ಏಳುತ್ತದೆ,ಇದಕ್ಕಿಂತ ಕೆಟ್ಟದ್ದೇನಾದರೂ ಇದೆಯೇ ಎಂಬ ಆತಂಕ ಕಾಡುತ್ತದೆ!ಹೈದರಾಬಾದ್ ನಗರದಲ್ಲಿ ನಡೆದಿರುವಂತ ಘಟನೆಯೊಂದು ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ ಹತ್ತನೇ ತರಗತಿಯ ವಿದ್ಯಾರ್ಥಿನಿ ತನ್ನ ಗೆಳೆಯನಿಗಾಗಿ ತನ್ನ ತಾಯಿಯನ್ನು ಕೊಂದಿದ್ದಾಳೆ.ಸಂಬಂಧಗಳು ಏನಾದವೂ ಜೀವನಕ್ಕೆ ತಾಯಿ ಅಡ್ಡ ಬರುತ್ತಾಳ ಬದುಕು ಯಾರಿಗಾಗಿ ಎಂಬ ಉತ್ತರ ಸಿಗದ ಪ್ರಶ್ನೆಗಳು ಸಮಾಜವನ್ನು ಕಾಡುತ್ತಿದೆ.
ನ್ಯೂಜ್ ಡೆಸ್ಕ್:ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಪಗಿಲ್ಲಾ ಶಿವ (19) ಎಂಬುವನ ಜೊತೆ ಸೇರಿಕೊಂಡು ಹೆತ್ತಮ್ಮನನ್ನು ಕೊಂದಿದ್ದಾಲೆ ಹತ್ತನೆ ತರಗತಿ ಒದುತ್ತಿರುವ ವಿಧ್ಯಾರ್ಥಿನಿ.
ಹೈದರಾಬಾದ್ ನಗರದ ಜೀಡಿಮೆಟ್ಲಾ ಪ್ರದೇಶದ ಎನ್.ಎಲ್.ಬಿ ನಗರದಲ್ಲಿ ಕ್ರೂರ ಘಟನೆ ನಡೆದಿದ್ದು ಸ್ಥಳೀಯ ಘಟನೆ ದಾಖಲಿಸಿಕೊಂಡಿದ್ದಾರೆ.
ಹತ್ತನೆ ತರಗತಿ ಒದುತ್ತಿರುವ ವಿಧ್ಯಾರ್ಥಿನಿ ಅತಿಯಾದ ಇನ್ಸ್ಟಾಗ್ರಾಮ್ Reels ಹುಚ್ಚಿಗೆ ಬಿದಿದ್ದು ಇದೆ ಸಂಪರ್ಕದಲ್ಲಿ ಶಿವ ಎಂಬ ಯುವಕನ ಪರಿಚಯವಾಗಿ ನಿರಂತರ ಚಾಟಿಂಗ್ ನಲ್ಲಿ ಮುಳುಗಿದ್ದಳು ಇದನ್ನು ವಿದ್ಯಾರ್ಥಿ ತಾಯಿ ಅಂಜಲಿ(39) ಮಗಳು ನಿರಂತರವಾಗಿ ಫೋನ್ ಚಾಟಿಂಗ್ನಲ್ಲಿ ಮುಳುಗಿರುವುದನ್ನು ಕಂಡು ಮಗಳು ಚಿಕ್ಕ ವಯಸ್ಸಿನಲ್ಲಿ ತಪ್ಪುಗಳನ್ನು ಮಾಡುತ್ತಿದ್ದಾಳೆ ಎಂದು ಗಮನಿಸಿ ಅದನ್ನು ಸರಿಪಡಿಸಲು ಮುಂದಾಗಿ ಇಂತಹ ವಿಷಯಗಳನ್ನು ಬದಿಗಿಟ್ಟು ಓದಿನತ್ತ ಗಮನಹರಿಸುವಂತೆ ಮಗಳಿಗೆ ಬುದ್ದಿವಾದ ಹೇಳಿದ್ದಾಳೆ ಚೆನ್ನಾಗಿ ಉತ್ತಮವಾಗಿ ವಿದ್ಯಾಭ್ಯಾಸ ಮಾಡುವಂತೆ ಸಲಹೆ ನೀಡಿದ್ದಾಳೆ ಆದರೂ ಚಾಳಿ ಬಿಡದ ಹತ್ತನೇ ತರಗತಿ ಮಗಳು ನಿರಂತರವಾಗಿ ಇನ್ಸ್ಟಾಗ್ರಾಮ್ನಲ್ಲಿ ಚಾಟಿಂಗ್ ಅಥವಾ ಫೋನ್ ಕರೆಗಳಲ್ಲಿ ಮುಳಗಿದ್ದ ಬಗ್ಗೆ ಬೆಸರ ಗೊಂಡ ತಾಯಿ ಮಗಳ ನಡವಳಿಕೆಗೆ ಬೆಸೆತ್ತು ಮಗಳ ಇನ್ಸ್ಟಾಗ್ರಾಮ್ ಪರಿಚಯದ ಯುವಕನನ್ನು ಕರೆದು ಬುದ್ದಿಹೇಳಿದ್ದಾಳೆ
ಇದರಿಂದ ಕುಪಿತಳಾದ 10 ನೇ ತರಗತಿ ಓದುತ್ತಿರುವ ಹುಡುಗಿ ತನ್ನ ತಾಯಿ ಜೀವಂತ ಇದ್ದರೆ ನಮ್ಮ ಪ್ರೀತಿಗೆ ಅಡ್ಡಿಯಾಗುತ್ತಾಳೆ ಎಂದು ತನ್ನ ತಾಯಿಯನ್ನು ಕೊಲ್ಲಲು ನಿರ್ಧರಿಸಿ ನಲ್ಗೊಂಡದಲ್ಲಿರುವ ಆಕೆಯ Reels ಗೆಳೆಯ ಶಿವನಿಗೆ ತಿಳಿಸಿದ್ದಾಳೆ ಇದಕ್ಕೆ ಶಿವ ನಲ್ಗೊಂಡದಿಂದ ತನ್ನ ಗೆಳತಿ ಮನೆಗೆ ಬಂದಿದ್ದಾನೆ ಇಬ್ಬರು ಕೊಲೆಗೆ ಸ್ಕೆಚ್ ಹಾಕಿ ಇದಕ್ಕೆ ಶಿವ ತನ್ನ ಕಿರಿಯ ಸಹೋದರ ಪಗಿಲ್ಲಾ ಯಶವಂತ್ (18) ನ ಸಹಾಯ ಪಡೆದು ಮೂವರು ಒಟ್ಟಾಗಿ ಯುವತಿ ತಂಗಿ ಮನೆಯಲ್ಲಿ ಇಲ್ಲದಿದ್ದಾಗ ಕೊಲೆ ಯೋಜನೆ ರೂಪಿಸಿ ತಾಯಿ ಅಂಜಲಿಯನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ. ನಂತರ ಅಂಜಲಿಯನ್ನು ಚುನ್ನಿಯಿಂದ ನೇಣು ಹಾಕಿ ತಲೆಗೆ ಹೊಡೆದಿದ್ದಾರೆ ಆಕೆ ಸತ್ತಿರುವುದು ದೃಡಪಟ್ಟಿದೆ ಅಷ್ಟರಲ್ಲಿ ಮೃತಳ ಕಿರಿ ಮಗಳು ಬಂದಿದ್ದಾಳೆ ಅಲ್ಲಿ ಅಂಜಲಿ ನಡುಗುತ್ತಿರುವುದನ್ನು ಗಮನಿಸಿದ ಕಿರಿಯ ಮಗಳು ಎನಾಯಿತು ಎಂದಾಗ ತಾಯಿ ಕುರ್ಚಿಯಿಂದ ಬಿದ್ದು ಮೃತ ಪಟ್ಟಿದ್ದಾಳೆ ಎಂದು ಸಹೋದರಿಗೆ ಹೇಳಿ ನಂಟರನ್ನು ಕರೆ ತರುವಂತೆ ತನ್ನ ತಂಗಿಯನ್ನು ಮನೆಯಿಂದ ಹೊರಗೆ ಕಳುಹಿಸಿದ್ದಾಳೆ ತಂಗಿ ಅಲ್ಲಿಂದ ಹೋದ ನಂತರ ತಾಯಿ ಜೀವಂತವಾಗಿದ್ದರೆ ತಮ್ಮ ಕೊಲೆ ಯತ್ನ ಬಯಲಾಗುತ್ತದೆ ಎಂದು ಭಾವಿಸಿ, ಗೆಳೆಯ ಮತ್ತು ಅವನ ಕಿರಿಯ ಸಹೋದರನೊಂದಿಗೆ ಮತ್ತೆ ತಾಯಿ ಕತ್ತು ಹಿಸುಕಿ ಅದನ್ನು ಸೀಳಿ ಕೊಂದಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.



