ಶ್ರೀನಿವಾಸಪುರ:ಸಾಂಪ್ರದಾಯಿಕ ಪ್ಯಾಕೇಟ್ ಮತ್ತು ಪತ್ರಗಳನ್ನು ತಲುಪಿಸುವುದರಲ್ಲಿ ಪರಿಣತಿಯನ್ನು ಹೊಂದಿದ್ದ ದಿ ಪ್ರೊಫೆಷನಲ್ ಕೊರಿಯರ್ ಈಗ ಬದಲಾದ ಕಾಲಘಟ್ಟದಲ್ಲಿ ಪಾರ್ಸಲ್ ಹಾಗು ಕಾರ್ಗೊ ಸೇವೆಗಳನ್ನು ನೀಡುವಲ್ಲಿ ದಾಪುಗಾಲು ಹಾಕುತ್ತ ಸಾಗಿದೆ ಎಂದು ದಿ ಪ್ರೊಫೆಷನಲ್ ಕೊರಿಯರ್ The Professional Couriers ಪ್ರಾದೇಶಿಕ ವ್ಯವಸ್ಥಾಪಕ ಮನೋಜ್ ಕುಮಾರ್ ಹೇಳಿದರು.ಅವರು ಪಟ್ಟಣದ ಕಿಟ್ ಕಂಪ್ಯೂಟರ್ ಸಂಸ್ಥೆ ಸಭಾಂಗಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ವ್ಯಾಪಾರಾಭಿವೃದ್ಧಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರೊಫೆಷನಲ್ ಕೊರಿಯರ್ ಭಾರತದ ಅತಿದೊಡ್ಡ ಕೊರಿಯರ್ ಹಾಗು ಕಾರ್ಗೊ ಸಂಸ್ಥೆಯಾಗಿದೆ,ರಾಷ್ಟ್ರೀಯ ಅಂತರಾಷ್ಟೀಯ ಮಟ್ಟದಲ್ಲೂ ದುಬಾರಿಯಲ್ಲದ ಸೇವೆಗಳನ್ನು ಜನಸಾಮಾನ್ಯರಿಂದ ಬಹುರಾಷ್ಟ್ರೀಯ ಸಂಸ್ಥೆಯ ಗ್ರಾಹಕರಿಗೆ ಅನಕೂಲವಾಗುವಂತೆ ನೀಡುತ್ತಿದೆ.
ವಿತರಣಾ ವ್ಯವಸ್ಥೆಯಲ್ಲಿ ಮುಂದಂಚಿನಲ್ಲಿರುವ ದಿ ಪ್ರೊಫೆಷನಲ್ ಕೊರಿಯರ್ ದೊಡ್ಡ ಮಟ್ಟದಲ್ಲಿ ಅತ್ಯಾಧುನಿಕ ಹಬ್ ಕೇಂದ್ರಗಳನ್ನು ಹೊಂದಿದ್ದು,ಆಧುನಿಕ ಸಂವಹನ ಜಾಲ ಇರುತ್ತದೆ ಸರಕುಗಳ ಸುಗಮ ಸಾಗಣಿಕೆಗೆ ವ್ಯವಸ್ಥಿತವಾದ ಸಾರಿಗೆ ವಾಹನಗಳ ಜಾಲವನ್ನು ದೊಡ್ಡಮಟ್ಟದಲ್ಲಿ ಹೊಂದಿರುವ ಸಂಸ್ಥೆಯಲ್ಲಿ ಬೃಹತ್ ಶೇಖರಣಾ ಗೋದಾಮುಗಳು ಇದೆ, ವ್ಯಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ಗ್ರಾಹಕರಿಗೆ ಸರಕು ವಿತರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಪ್ರತಿ ಹಂತದಲ್ಲೂ ಕಾರ್ಯಚರಣೆ ಮಾಹಿತಿ ಅಂಗೈಲ್ಲಿನ ಮೊಬೈಲ್ ನಲ್ಲಿ ತಂತ್ರಜ್ಞಾನದ ಮೂಲಕ ಪಡೆದುಕೊಳ್ಳಬಹುದಾಗಿದೆ

ಉತ್ತಮ ಹಾಗು ಗುಣಮಟ್ಟದ ಸೇವೆಗಳನ್ನು ಸಾರ್ವಜನಿಕ ವಲಯದ ಉದ್ಯಮಗಳು, ಸರ್ಕಾರಿ ಸಂಸ್ಥೆಗಳು, ಕಾರ್ಪೊರೇಟ್ ಕಂಪನಿಗಳು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ಶೈಕ್ಷಣಿಕ ಮತ್ತು ಹಣಕಾಸು ಸಂಸ್ಥೆಗಳಿಗೆ ನೀಡುತ್ತ ವ್ಯಾಪಕ ಶ್ರೇಣಿಯ ಗ್ರಾಹಕರನ್ನು ಸಂತೃಪ್ತಿ ಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟು ಸಾಗುತ್ತಿದೆ ಎಂದರು.
ಗ್ರಾಮೀಣ ಮಟ್ಟದಲ್ಲೂ ಸೇವೆ
ಪ್ರೊಫೆಷನಲ್ ಕೊರಿಯರ್ The Professional Couriers ರಾಷ್ಟ್ರೀಯ ಅಂತರಾಷ್ಟೀಯ ಮಟ್ಟದಲ್ಲೆ ಅಲ್ಲ ಗ್ರಾಮೀಣ ಪ್ರಾಂತ್ಯದಲ್ಲೂ ಸೇವೆ ಒದಗಿಸುವ ನಿಟ್ಟಿನಲ್ಲಿ ತನ್ನದೆ ಆದ ಜಾಲದ ಮೂಲಕ ಪ್ರಯತ್ನಿಸುತ್ತಿದೆ ಎಂದರು.
ಸಭೆಯಲ್ಲಿ ತುಮಕೂರು ಜಿಲ್ಲಾ ಸಂಯೋಜಕ ಕೊರಟಗೆರೆಶ್ರೀನಿವಾಸಮೂರ್ತಿ,ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಂಯೋಜಕ ಶ್ರೀನಿವಾಸಮೂರ್ತಿ, ಹಿರಿಯ ವ್ಯವಸ್ಥಾಪಕ ಕಾಮೇಶ್ವರ್ ರಾವ್,ವಿವೇಕ್, ಶಿಡ್ಲಘಟ್ಟರಾಜು,ಕೋಲಾರಶ್ರೀನಿವಾಸ್ ಮುಂತಾದವರು ಇದ್ದರು.



