ಶ್ರೀನಿವಾಸಪುರ:ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ತಾಲೂಕಿನ ನಂಬಿಹಳ್ಳಿ ಪಂಚಾಯಿತಿ ಭೇಟಿ ಸಂದರ್ಭದಲ್ಲಿ ಮೊಬೈಲ್ ಸ್ವೀಚ್ ಆಫ್ ಮಾಡಿ ಬೇಜವಬ್ದಾರಿಯಿಂದ ನಾಪತ್ತೆಯಾಗಿದ್ದ ನಂಬಿಹಳ್ಳಿ ಪಿಡಿಓ ಮಂಜುನಾಥರೆಡ್ಡಿಯನ್ನು ಜಿಲ್ಲಾಪಂಚಾಯಿತಿ ಸಿಇಒ ಸಸ್ಪೆಂಡ್ ಮಾಡಿರುತ್ತಾರೆ.
ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಶ್ರೀನಿವಾಸಪುರ ಭೇಟಿ ಸಂದರ್ಭದಲ್ಲಿ ಅಧಿಕಾರಿಗಳ ಸಭೆ ನಡೆಸಿ ವಿಶೇಷವಾಗಿ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ್ದರು ಅದರಂತೆ ನಂಬಿಹಳ್ಳಿ ಪಂಚಾಯಿತಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಭೇಟಿ ನೀಡಿದಾಗ, ನಂಬಿಹಳ್ಳಿ ಪಿಡಿಓ ಮಂಜುನಾಥರೆಡ್ಡಿ ಪಂಚಾಯಿತಿ ಕಚೇರಿಯಲ್ಲಿ ಇಲ್ಲದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು,ಇದಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಕೆಂಡಾಮಂಡಲರಾಗಿ ಸಭೆಯಲ್ಲಿ ಭಾಗವಹಿಸಿದ್ದ ಪಿಡಿಒ ಮಂಜುನಾಥರೆಡ್ಡಿ ನಂತರ ಕಚೇರಿಗೆ ಆಗಮಿಸದೆ ನಾಪತ್ತೆಯಾಗಿದ್ದು ಇದನ್ನು ತೀವ್ರವಾಗಿ ಪರಿಗಣಿಸಿದ ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಪಿಡಿಒ ಮಂಜುನಾಥರೆಡ್ಡಿ ಯನ್ನು ತಕ್ಷಣವೇ ಸಸ್ಪೆಂಡ್ ಮಾಡುವಂತೆ ಸ್ಥಳದಲ್ಲಿದ್ದ ತಾಲೂಕು ಪಂಚಾಯಿತಿ ಇಒ ಶಿವಕುಮಾರಿ ಅವರಿಗೆ ಸೂಚಿಸಿದರು.
ಈ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಇಒ ಶಿವಕುಮಾರಿ ಅವರು ಕೋಲಾರ ಜಿಲ್ಲಾಪಂಚಾಯಿತಿ ಸಿಇಒ ಅವರಿಗೆ ಪಿಡಿಒ ಮೇಲಿನ ಆರೋಪ ವಿವರಿಸಿ ಕರ್ತವ್ಯ ಲೋಪದ ಆರೋಪದಡಿ ಉಪಲೋಕಾಯುಕ್ತ ನ್ಯಾಯಮೂರ್ತಿಗಳ ಆದೇಶದಂತೆ ಅಮಾನತ್ತು ಮಾಡಲು ಶಿಫಾರಸ್ಸು ಮಾಡಿದ್ದರು ಅದರಂತೆ ಕೋಲಾರ ಜಿಲ್ಲಾಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕರ್ನಾಟಕ ನಾಗರೀಕ ಸೇವಾ(ವರ್ಗೀಕರಣ ನಿಯಂತ್ರಣ ಮತ್ತು ಅಪೀಲು) ನಿಯಮ 1957 ಅಡಿಯಲ್ಲಿ ಪಿಡಿಒ ಮಂಜುನಾಥರೆಡ್ಡಿಯನ್ನು ಅಮಾನತ್ತು ಮಾಡಿರುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



