ಶ್ರೀನಿವಾಸಪುರ:ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಗ್ರಾಮ ಪಂಚಾಯಿತಿ ಕಚೇರಿಗೆ ಬರುವುದು ಗೊತ್ತಿದ್ದರು ಗ್ರಾಮ ಪಂಚಾಯಿತಿ ಪಿಡಿಒ ಮೊಬೈಲ್ ಸ್ವೀಚ್ ಆಪ್ ಮಾಡಿ ಓಡಿ ಹೋದ ಸ್ವಾರಸ್ಯಕರ ಘಟನೆ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಉಪಲೋಕಾಯುಕ್ತ ಬಿ.ವೀರಪ್ಪ ತಾಲೂಕಿನಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಕಡತಗಳನ್ನು ಪರಶೀಲನೆ ನಡೆಸಿ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಿದರು.ಸಭೆಯಲ್ಲಿ ಮಾತನಾಡಿದ ಅವರು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿದ್ದು ಮುಖ್ಯಮಂತ್ರಿಯನ್ನೆ ಜೈಲುಗಟ್ಟಿದ ಖ್ಯಾತಿ ಇದೆ.ಭ್ರಷ್ಟರ ಸಂಹಾರಕ್ಕಾಗಿ ಲೋಕಾಯಕ್ತ ಸಂಸ್ಥೆ ಶ್ರಮಿಸುತ್ತಿದೆ ಯಾವುದೆ ಮುಲಾಜಿಗೂ ಒಳಪಡದೆ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಅವರ ಕೆಲಸ ಮಾಡಿಕೊಡಿ ತಾಲ್ಲೂಕಿನಾದ್ಯಂತ ಸುಮಾರು 360 ಕೋಟಿ ರೂಗಳ ವೆಚ್ಚದಲ್ಲಿ ತಾಲೂಕಿನ ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೂ ನಲ್ಲಿ ಮೂಲಕ ನೀರು ಹರಿಸುವ ಕಾಮಗಾರಿ ಚಾಲ್ತಿಯಲ್ಲಿದ್ದು ಕಾಮಗಾರಿ ಗುಣಮಟ್ಟ ಕಾಪಾಡುವ ಜವಾಬ್ದಾರಿ ಕುಡಿಯುವ ನೀರಿನ ಇಲಾಖೆ ಇಂಜಿನಿಯರ್ ಮೇಲಿದೆ, ಇದಕ್ಕೆ ಪೂರಕವಾಗಿ ಪಿ.ಡಿ.ಒ. ಗಳು ಕೆಲಸ ಮಾಡಬೇಕು ಎಂದರು.
ನಾನು ಗ್ರಾಮ ಪಂಚಾಯಿತಿಗಳಿಗೆ ಬರುವೆ
ಯಾವುದೆ ಸಮಯದಲ್ಲಾದರೂ ನಾನು ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಬರುತ್ತೇನೆ ಸಂಬಂದಿಸಿದ ಅಧಿಕಾರಿಗಳು ಕಚೇರಿಯಲ್ಲಿ ಇದ್ದು ಕಾರ್ಯಕ್ರಮಗಳ ದಾಖಲೆಗಳನ್ನು ನೀಡಿ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ನವರು ತಿಳಿಸಿದರು.
ಸುಮ್ಮನೆ ಮೂಕರ್ಜಿಗಳನ್ನು ಕೊಡಬೇಡಿ
ದಾಖಲೆ ಇಲ್ಲದೆ ಸುಮ್ಮನೆ ಮೂಕರ್ಜಿಗಳನ್ನು ಕೊಡಬೇಡಿ ಲೋಕಾಯುಕ್ತ ಕಾಯ್ದೆ ಸೆಕ್ಷನ್ 20 ಅಡಿ ಅಧಿಕಾರಿಗಳ ಮೇಲೆ ಸುಳ್ಳು ಕೇಸು ದಾಖಲಿಸಿದರೆ 6 ತಿಂಗಳಿನಿಂದ 3 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.
ನಾಪತ್ತೆಯಾದ ಪಿಡಿಓ
ಪುರಸಭೆ ಸಭಾಂಗಣದಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಕರೆದಿದ್ದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ನಂಬಿಹಳ್ಳಿ ಪಿಡಿಓ ಮಂಜುನಾಥರೆಡ್ಡಿ ಪಂಚಾಯಿತಿ ಕಚೇರಿಗೆ ಹೋಗದೆ ಮೊಬೈಲ್ ಸ್ವಿಚ್ ಆಫ್ ಹೋರಟು ಹೋಗಿದ್ದಾರೆ ಇತ್ತ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ನಂಬಿಹಳ್ಳಿ ಪಂಚಾಯಿತಿಗೆ ಭೇಟಿ ನೀಡಿದ್ದಾರೆ ಈ ಸಂದರ್ಭದಲ್ಲಿ ನಂಬಿಹಳ್ಳಿ ಪಂಚಾಯಿತಿ ಕಚೇರಿಯಲ್ಲಿ ಪಿಡಿಒ ಮಂಜುನಾಥ ರೆಡ್ಡಿ ಗೈರಾಗಿದ್ದಾರೆ ಮೊಬೈಲ್ ಕರೆ ಮಾಡಿದರೆ ಮಒಬೈಲ್ ಸ್ವೀಚ್ ಆಫ್ ಅಗಿತ್ತು ಇದಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆಂಡಾಮಂಡಲರಾದರೂ ಪಿಡಿಒ ಅನುಪಸ್ಥಿತಿಯಲ್ಲಿ ಕಚೇರಿ ಸಿಬ್ಬಂದಿ ಮೂಲಕ ನರೇಗಾ ಹಾಗೂ ಇತರೆ ಕಾಮಗಾರಿ ದಾಖಲೆಗಳು ಪರಿಶೀಲಿಸಿದಾಗ ಕಾಮಗಾರಿಗಳ ಬಗ್ಗೆ ಅಲ್ಲಿನ ಕಚೇರಿ ಸಿಬ್ಬಂದಿ ಸರಿಯಾದ ಮಾಹಿತಿ ನೀಡದ ಕಾರಣ ಸಿಬ್ಬಂದಿಯ ಮೇಲೆ ಗರಂ ಆದರು.ಕಚೇರಿ ಗುಮಾಸ್ತ ಈಶ್ವರ್ ಮೊಬೈಲ್ ತಗೆಸಿ ನೋಡಿದಾಗ ಪೋನ್ ಫೇ ಮೂಲಕ ಲಕ್ಷಾಂತರ ವ್ಯವಹಾರ ನಡೆದಿರುವುದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದರು.ಲೆಕ್ಕಿಗ ವೆಂಕಟೇಶ ರವರನ್ನು ಕರೆಸಿ . ಹಣದ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದರೆ ಕಳೆದ ಒಂದು ವಾರದಿಂದ ವಸೂಲಾತಿ ಮಾಡಿದ ಹಣವನ್ನು ಬ್ಯಾಂಕಿಗೆ ಜಮೆ ಮಾಡದೆ ಉಪಯೋಗಿಸಿಕೊಂಡಿದ್ದು ಬೆಳಕಿಗೆ ಬಂದಿದೆ,ಗ್ರಾಮದ ಸರ್ಕಾರಿ ಶಾಲೆಗೆ ಕಾಂಪೌಂಡ್ ಕಾಮಗಾರಿ ನಿಮಾ೯ಣಕ್ಕೆ ಬಿಡುಗಡೆಯಾದ ಅನುದಾನ. ಕಾಮಗಾರಿಯ ಬಗ್ಗೆ ಪರಿಶೀಲಿಸಿದರು.ಒಂದಕ್ಕೊಂದು ತಾಳೆ ಇಲ್ಲದ ಬಗ್ಗೆ ಬೇಸರ ವ್ಯಕ್ತಪಡಿಸಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಇಒ ಎಸ್.ಶಿವಕುಮಾರಿ ರವರಿಗೆ ಪಿಡಿಒ ಮಂಜುನಾಥ ರೆಡ್ಡಿ ರವರನ್ನು ತಕ್ಷಣವೇ ಸಸ್ಪೆಂಡ್ ಮಾಡುವಂತೆ ಸೂಚಿಸಿದರು.ತಹಶೀಲ್ದಾರ್ ಜಿ ಎನ್.ಸುದೀಂದ್ರ ಇದ್ದರು
ಸುಮೋಟೋ ಕೆಸ್ ದಾಖಲಿಸಿ
ನಂಬಿಹಳ್ಳಿ ಪರ್ಯಟನೆ ಮುಗಿಸಿದ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಚಲ್ದಿಗಾನಹಳ್ಳಿ ಪಂಚಾಯಿತಿಗೆ ಭೇಟಿ ನೀಡಿದ್ದು ಅಲ್ಲಿ ಒಂದೊಂದು ದಾಖಲೆ ಒಂದೊಂದು ಕಟ್ಟಡಲ್ಲಿ ಇದೆ ಎಂದು ಅಲ್ಲಿನ ಸಿಬ್ಬಂದಿ ಹಾಗು ಅಧಿಕಾರಿ ವಿಭಿನ್ನ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಸುಮೋಟೊ ಕೇಸ್ ದಾಖಲಿಸುವಂತೆ ಅಧಿಕಾರಿ ವರ್ಗಕ್ಕೆ ಸೂಚಿಸಿದರು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



