ನ್ಯೂಜ್ ಡೆಸ್ಕ್:ಮಕ್ಕಳು ಹುಟ್ಟಿದರೆ ತಂದೆ-ತಾಯಿಗಳು ಸಂಭ್ರಮಿಸುತ್ತಾರೆ ಅದರಲ್ಲೂ ಗಂಡು ಮಕ್ಕಳು ಹುಟ್ಟಿದರೆ ಅನಂದ ಪರವಶರಾಗುತ್ತಾರೆ ಗಂಡುಮಗುವಿಗೆ ಜನ್ಮ ನೀಡಿದೆ ಎಂದು ಬೀಗುತ್ತಾರೆ ಪ್ರೀತಿ ಧಾರೆ ಎರೆದು ಪೊಷಿಸುತ್ತಾರೆ. ನಂತರದಲ್ಲಿ ಗಂಡು ಮಗು ಬೆಳೆದು ದೊಡ್ಡವರಾದಂತೆ,ಹೆತ್ತವರು ಹೋರೆಯಾಗಿದ್ದಾರೇನೋ ಎಂಬಂತೆ ಕೆಲ ಮಕ್ಕಳು ವರ್ತಿಸುತ್ತಾರೆ ನಾವ್ಯಾಕೆ ಪೋಷಕರನ್ನು ಪೊಷಿಸಬೇಕು ಎಂಬ ಭಾವನೆಯಲ್ಲಿ ದುಷ್ಟ ಮಕ್ಕಳು ನಡೆದುಕೊಳ್ಳುತ್ತಾರೆ ಅಂತ ಸಾಲಿನಲ್ಲಿ ದುಷ್ಟ ಮಗನೊಬ್ಬ ತನ್ನ ಹೆಂಡತಿಯ ಮಾತು ಕೇಳಿ ತನ್ನ ವೃದ್ಧ ತಂದೆಯನ್ನು ಕರೆದುಕೊಂಡು ಹೋಗಿ ಹರಿಯುವ ನದಿ ಕಾಲುವೆಗೆ ತಳ್ಳಿ ಹತ್ಯೆ ಮಾಡಿರುವ ಹೃದಯ ವಿದ್ರಾಯಕ ಘಟನೆ ಆಂಧ್ರದ ಪಲ್ನಾಡು ಜಿಲ್ಲೆಯ ಇಪುರ್ ಮಂಡಲದಲ್ಲಿ ನಡೆದಿದೆ. ಪ್ರತ್ಯಕ್ಷದರ್ಶಿಗಳ ಹೇಳಿರುವಂತೆ ನದಿ ದಂಡೆ ಮೇಲೆ ಕಾರನ್ನು ನಿಲ್ಲಿಸಿದ ವ್ಯಕ್ತಿ ವೃದ್ದ ಕೊಂಡಯ್ಯನನ್ನು ಕಾರಿನಿಂದ ಹೊರತೆಗೆದು, ತನ್ನ ಕೈಗಳಿಂದ ಎತ್ತಿ ಕಾಲುವೆಗೆ ಎಸೆದಿರುತ್ತಾನೆ ಅಲ್ಲಿದ್ದ ರೈತರು ತಕ್ಷಣ ಸ್ಥಳಕ್ಕೆ ಧಾವಿಸಿ ವ್ಯಕ್ತಿಯನ್ನು ಹಿಡಿದು ಕಾಲುವೆಯಲ್ಲಿ ಬಿದ್ದ ವೃದ್ದನ ಉಳಿಸಲು ಪ್ರಯತ್ನಿಸಿದ್ದಾರೆ ಆದರೆ ಸಾಧ್ಯವಾಗಲಿಲ್ಲ ವೃದ್ಧ ಕೊಂಡಯ್ಯ ನೀರಿನಲ್ಲಿ ಮುಳುಗಿದ್ದಾರೆ ದುಷ್ಟ ಮಗನಿಗೆ ಸ್ಥಳೀಯರು ಧರ್ಮದೇಟು ನೀಡಿ ಪೋಲಿಸರಿಗೆ ಒಪ್ಪಿಸಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



