ಶ್ರೀನಿವಾಸಪುರ:ಶ್ರೀನಿವಾಸಪುರದಿಂದ ಮುಳಬಾಗಿಲುಗೆ ಹೊರಟ್ಟಿದ್ದ ಸರ್ಕಾರಿ ಬಸ್ ಗೆ ಲಾರಿಯೊಂದು ಡಿಕ್ಕಿಹೊಡೆದು ನಿಲ್ಲಿಸದೆ ವೇಗವಾಗಿ ಹೋದ ಘಟನೆ ಗುರುವಾರ ಸಂಜೆ ಶ್ರೀನಿವಾಸಪುರ ಪಟ್ಟಣದ ಮುಳಬಾಗಿಲು ವೃತ್ತದಲ್ಲಿ ನಡೆದಿರುತ್ತದೆ.
ಶ್ರೀನಿವಾಸಪುರದಿಂದ ಮುಳಬಾಗಿಲು ಕಡೆಗೆ ಹೊರಟಿದ್ದ KSRTC ಬಸ್ಸು ಹೊಸ ಬಸ್ ನಿಲ್ದಾಣದಲ್ಲಿ ಜನರನ್ನು ಹತ್ತಿಸಿಕೊಂಡು ಬರಲು ಹೋಗುತ್ತಿದ್ದಾಗ ಸಂತೆ ಮೈದಾನದ ಕಡೆಯಿಂದ ಬಂದ ತಮಿಳನಾಡು ನೊಂದಣೆಯ ಲಾರಿ ವೇಗವಾಗಿ ಬಂದು ಬಸ್ಸಿನ ಬಲಬಾಗದಲ್ಲಿ ಡಿಕ್ಕಿಹೊಡೆದಿದೆ ಇದರಿಂದ ಬಸ್ಸಿನಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಪ್ರಯಾಣಿಕರಿದ್ದು ಕೆಲ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ.
KSRTC ಬಸ್ಸಿಗೆ ಡಿಕ್ಕಿಹೊಡೆದ ತಮಿಳುನಾಡು ಲಾರಿ ಚಾಲಕ ಲಾರಿಯನ್ನು ನಿಲ್ಲಿಸದೆ ಮುಳಬಾಗಿಲು ಮಾರ್ಗದಲ್ಲಿ ವೇಗವಾಗಿ ಚಾಲನೆ ಮಾಡಿಕೊಂಡು ಹೋಗಿದ್ದು, ಬಸ್ ಚಾಲಕ ಸಾರ್ವಜನಿಕರ ಸಹಕಾರದೊಂದಿಗೆ ದ್ವಿಚಕ್ರ ವಾಹದಲ್ಲಿ ಹೋಗಿ ಕೇತಗಾನಹಳ್ಳಿ ಬಳಿ ಲಾರಿಯನ್ನು ಹಿಡದಿರುತ್ತಾರೆ.
ವೃತ್ತ ಇದೆ ಎಂಬ ಸೂಚನಾ ಫಲಕವಿಲ್ಲ !
ಅಪಘಾತಕ್ಕೆ ಮುಖ್ಯ ಕಾರಣ ರಾಷ್ಟ್ರೀಯ ಹೆದ್ದಾರಿ ಇಂಜನಿಯರ್ ಗಳದೆ ಎಂಬುದು ಸ್ಥಳೀಯರ ಆರೋಪ ಮುಳಬಾಗಿಲು ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ ಅಲ್ಲೆ ಕೋಲಾರ-ಹೊಸಹುಡ್ಯ ರಾಜ್ಯ ಹೆದ್ದಾರಿ ಹಾದುಹೋಗುತ್ತದೆ ಈ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಅಂತರಾಜ್ಯ ವಾಹನಗಳು ಒಡಾಡುತ್ತವೆ ಹಾಗಾಗಿ ವೃತ್ತ ಇದೆ ಎನ್ನುವ ಬಗ್ಗೆ ಕನಿಷ್ಟ ಸೂಚನ ಫಲಕ ಹಾಕುವ ಬಗ್ಗೆ ರಸ್ತೆ ಮಾಡಿದ ಇಂಜನಿಯರ್ ಗಳಿಗೆ ಹೊಳೆಯದಿರುವುದು ದುರಂತ ಎನ್ನುತ್ತಾರೆ
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



