ನ್ಯೂಜ್ ಡೆಸ್ಕ್: ಪ್ರಿಯತಮೆಗೆ ಮೊಬೈಲ್ ಫೋನ್ ಕೊಡಿಸಲು ಹೆತ್ತಮ್ಮನನ್ನೆ ಹತ್ಯೆ ಮಾಡಿರುವ ಅಮಾನವೀಯ ಘಟನೆ ತೆಂಲಂಗಾಣದ ಖಮ್ಮಂ ನಗರದಲ್ಲಿ ಮಂಗಳವಾರ ನಡೆದಿದೆ.
ಖಮ್ಮಂ ನಗರದ ಖಾನಾಪುರಕ್ಕೆ ಸೇರಿದ ಲಕ್ಷ್ಮೀನಾರಾಯಣ-ವಾಣಿ ದಂಪತಿಗೆ ಇಬ್ಬರು ಗಂಡು ಮಕ್ಕಳು ಇಬ್ಬರು ಕುಡಿತಕ್ಕೆ ದಾಸರಾಗಿ ಮೋಜು ಮಸ್ಥ ಜಲ್ಸಾ ಮಾಡುತ್ತಿದ್ದು .ಕಿರಿಯ ಮಗ ಗೋಪಿನಾಥ್ ಮಂಗಳವಾರ ತನ್ನ ತಾಯಿ ಬಳಿ ಬಂದು ಹಣ ಕೇಳಿದ್ದಾನೆ. ತಾಯಿ ತನ್ನ ಬಳಿ ಹಣ ಇಲ್ಲ ಎಂದಾಗ ಮೈಮೇಲಿನ ಚಿನ್ನಾಭರಣ ನೀಡಿಸುವಂತೆ ಒತ್ತಾಯಿಸಿದ್ದಾನೆ ಆಕೆ ತಾಯಿ ಒಪ್ಪದಿದ್ದ ಕಾರಣಕ್ಕೆ ತಾಯಿ-ಮಗನ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಗೋಪಿ ತಾಯಿ ಕತ್ತು ಹಿಸುಕಿ ಕೊಲೆ ಮಾಡಿ ಆಕೆಯ ಮೈಲಿನ ಬಂಗಾರದ ಆಭರಣಗಳನ್ನು ತಗೆದುಕೊಂಡು ಓಡಿಹೋಗಿದ್ದಾನೆ ಕೆಲ ಹೊತ್ತಿನ ನಂತರ ಅಕ್ಕಪಕ್ಕದ ಮನೆಯವರು ಬಂದು ನೋಡಿದಾಗ ಆಕೆ ಹಾಸಿಗೆಯ ಮೇಲೆ ಶವವಾಗಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಮೃತಳ ಪತಿ ಲಕ್ಷ್ಮೀನಾರಾಯಣ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಗೋಪಿಯನ್ನು ಬಂಧಿಸಿದಾಗ ಅವನು ನೀಡಿದ ಹೇಳಿಕೆಯಂತೆ ಪ್ರಿಯತಮೆಗೆ ಫೊನ್ ಕೊಡಿಸಲು ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



