ನ್ಯೂಜ್ ಡೆಸ್ಕ್:ಹೌದು ನಿಜ ಕಣ್ರಿ ಯುವಕನೊಬ್ಬನನ್ನು ಅವನ ಗೆಳತಿಯೆ ಕಿಡ್ನಾಪ್ ಮಾಡಿದ ಘಟನೆ ನಡೆದಿದೆ ತಾನು ಪ್ರೀತಿಸುತ್ತಿರುವ ಗೆಳೆಯ ತನ್ನಿಂದ ಎಲ್ಲಿ ಕೈಜಾರುತ್ತಾನೋ ಎಂದು ಪ್ರೇಮಿಯೊಬ್ಬಳು ಸಿನಿಮಾ ಶೈಲಿಯಲ್ಲಿ ಮಾಸ್ಟರ್ ಪ್ಲಾನ್ ಮಾಡಿ ಕಾರಿನಲ್ಲಿ ಪ್ರಿಯಕರನನ್ನು ಅಪಹರಿಸಿದ್ದಾಳೆ ಈ ಘಟನೆಯಲ್ಲಿ ಅನಿರೀಕ್ಷಿತವಾಗಿ ಪೊಲೀಸರು ಪ್ರವೇಶಿಸಿದಾಗ ಕಥೆ ಅಡ್ದ ತಿರುವು ಪಡೆದುಕೊಂಡು ಪ್ರೇಮಿಯ ಪ್ಲಾನ್ ವಿಫಲವಾಗಿದೆ.
ತಿರುಪತಿ ನಗರದಲ್ಲಿ ಲಾಡ್ಜ್ ನಡೆಸುತ್ತಿರುವ ಶ್ರೀನಿವಾಸುಲು ಅಲಿಯಾಸ್ ನಾನಿ (31) ಎಂಬ ಅವಿವಾಹಿತ ಯುವಕನಿಗೆ ಮದನಪಲ್ಲಿಯ ಭಾನು ಎಂಬ ವಿವಾಹಿತೆಯೊಂದಿಗೆ ಪ್ರೇಮಾಂಕುರವಾಗಿದೆ ಈಕೆಯ ಪತಿ ಇತ್ತೀಚೆಗೆ ನಿಧನರಾಗಿದ್ದು ಇಬ್ಬರೂ ಪರಸ್ಪರ ಪರಿಚಯವಾಗಿ ಪ್ರೀತಿ-ಪ್ರೇಮಕ್ಕೆ ತಿರುಗಿತು. ಇದರಿಂದ ಇಬ್ಬರು ಸುಮಾರು 8 ತಿಂಗಳಿಂದ ಆತ್ಮೀಯರಾಗಿದ್ದರು.ಅದರೆ ಏನಾಯಿತೋ ಏನೋ ಕಳೆದ ಮೂರು ತಿಂಗಳಿನಿಂದ ಇಬ್ಬರ ನಡುವೆ ಅಂತರ ಏರ್ಪಟ್ಟಿದೆ ಇಬ್ಬರಿಗೂ ಮಾತಿಲ್ಲ ಕಥೆಯಿಲ್ಲ ಇದು ಭಾನುಗೆ ಕೋಪ ತರಿಸಿದೆ ನಾನಿ ನನ್ನತ್ತ ಗಮನ ಹರಿಸುತ್ತಿಲ್ಲ ಎಂದು ಕೊನೆಗೆ ನಾನಿಯನ್ನು ಅಪಹರಿಸಲು ನಿರ್ಧರಿಸಿ ಇದಕ್ಕಾಗಿ ಮದನಪಲ್ಲಿಯ ಐವರು ಯುವಕರನ್ನು ಜೋತೆ ಮಾಡಿಕೊಂಡು ಗುರುವಾರ ಮಧ್ಯಾಹ್ನ ಇನೋವಾ ಕಾರಿನಲ್ಲಿ ತಿರುಪತಿಗೆ ಬಂದು ನಾನಿಯನ್ನು ಅಪಹರಿಸಿದ್ದಾಳೆ ಇದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಶೇಷ ತಂಡದೊಂದಿಗೆ ಬೆನ್ನಟ್ಟಿದ ಪೋಲಿಸರು ವಾಯಲ್ಪಾಡು ಬಳಿ ಕಿಡ್ನಾಪರುಗಳಿದ್ದ ಕಾರನ್ನು ಅಡ್ಡಗಟ್ಟಿ ನಾನಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ಕಂಡ ಅಪಹರಣಕಾರರು ಪರಾರಿಯಾಗಿದ್ದಾರೆ. ಆರೋಪಿಗಳನ್ನು ಮದನಪಲ್ಲಿಯ ಬಾಬಾ ಫಕ್ರುದ್ದೀನ್, ಮೋಕ್ಷಿತ್, ರಾಜೇಶ್, ರಿಯಾಜ್ ಮತ್ತು ಸಂದೀಪ್ ಎಂದು ಗುರುತಿಸಲಾಗಿದೆ. ನಾನಿ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



