ಬೆಂಗಳೂರು:ಕನ್ನಡ ಚಲನ ಚಿತ್ರ ನಟ,ಸಿನಿಮಾ ನಿರ್ದೇಶಕ ಗುರುಪ್ರಸಾದ್ (52)ಆತ್ಮಹತ್ಯೆಗೆ ಶರಣಾಗಿದ್ದಾರೆ.ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ನಲ್ಲಿ ಸುಸೈಡ್ ಮಾಡಿಕೊಂಡಿದ್ದು ಅವರ ಮೃತದೇಹ ಅಪಾರ್ಟ್ಮೆಂಟ್ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನವೆಂಬರ್ 2ರಂದು ಗುರುಪ್ರಸಾದ್ ಹುಟ್ಟುಹಬ್ಬ ಇದ್ದು ಈ ಬೆನ್ನಲ್ಲೇ ಅವರ ಸಾವಿನ ಸುದ್ದಿ ಚಿತ್ರರಂಗದ ಮಂದಿಗೆ ಶಾಕ್ ಕೊಟ್ಟಿದೆ. ಮೂರು ದಿನಗಳ ಹಿಂದೆ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದ್ದು ಇಂದು ಭಾನುವಾರ ಬೆಳಗ್ಗೆಯಿಂದ ಸ್ಥಳೀಯ ನಿವಾಸಿಗಳಿಗೆ ವಾಸನೆ ಬರತೊಡಗಿದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಬಾಗಿಲನ್ನು ತೆರೆಯಲಾಗಿದೆ ಎನ್ನುತ್ತಾರೆ.ಗುರುಪ್ರಸಾದ್ ಆತ್ಮಹತ್ಯೆಗೆ ಪ್ರಮುಖ ಕಾರಣ, ಸಾಲಗಾರರ ಕಿರುಕುಳ ಎನ್ನುವ ಮಾತು ಕೇಳಿಬರುತ್ತಿದೆ.ಪೊಲೀಸರು ತನಿಖೆಯಿಂದ ಸತ್ಯ ಹೋರಬರಬೇಕಿದೆ.
ಬೆಂಗಳೂರು ಗ್ರಾಮಾಂತರದ ಕನಕಪುರದಲ್ಲಿ 1972ರಲ್ಲಿ ಜನಿಸಿದ ಗುರುಪ್ರಸಾದ್ ರಾಮಚಂದ್ರ ಶರ್ಮಾ 2006 ರಲ್ಲಿ ತೆರೆಕಂಡ ‘ಮಠ’ ಚಿತ್ರದ ಮೂಲಕ ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಪ್ರಯಾಣ ಆರಂಭಿಸಿದ ಅವರು ನವರಸ ನಾಯಕ ಜಗ್ಗೇಶ್ರ 100ನೇ ಚಿತ್ರ ನಿರ್ದೇಶಿಸಿದ ನಂತರ ‘ಎದ್ದೇಳು ಮಂಜುನಾಥ’ ಸಿನಿಮಾವನ್ನು ನಿರ್ದೇಶಿಸಿದರು. ಇವೆರಡೂ ಸಿನಿಮಾಗಳು ಗುರುಪ್ರಸಾದ್ಗೆ ಭಾರಿ ಜನಪ್ರಿಯತೆಯನ್ನು ತಂದುಕೊಟ್ಟವು. ‘ಎದ್ದೇಳು ಮಂಜುನಾಥ’ ಸಿನಿಮಾದ ಚಿತ್ರಕಥೆಗಾಗಿ ರಾಜ್ಯ ಪ್ರಶಸ್ತಿಯನ್ನು ಕೂಡ ಗುರುಪ್ರಸಾದ್ ಪಡೆದುಕೊಂಡಿದ್ದರು.18 ವರ್ಷಗಳ ಸಿನಿಮಾ ವೃತ್ತಿಯಲ್ಲಿ ಅವರು ನಿರ್ದೇಶನ ಮಾಡಿರುವುದು ಕೇವಲ 5 ಸಿನಿಮಾಗಳನ್ನು ಮಾತ್ರ. 2006ರಲ್ಲಿ ‘ಮಠ’, 2009ರಲ್ಲಿ ‘ಎದ್ದೇಳು ಮಂಜುನಾಥ’, 2013ರಲ್ಲಿ ‘ಡೈರೆಕ್ಟರ್ ಸ್ಪೆಷಲ್’, 2017ರಲ್ಲಿ ‘ಎರಡನೇ ಸಲ’ ಮತ್ತು 2024ರಲ್ಲಿ ‘ರಂಗನಾಯಕ’ ಸಿನಿಮಾಗಳನ್ನು ಅವರು ನಿರ್ದೇಶನ ಮಾಡಿದ್ದರು. ಅದರಲ್ಲಿ ಮೂರು ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಸೋಲೂಂಡಿದ್ದವು. ಅದರಲ್ಲೂ ಜಗ್ಗೇಶ್ ಅವರ ಜೊತೆಗೆ ಮಾಡಿದ್ದ ಮೂರನೇ ಸಿನಿಮಾ ರಂಗನಾಯಕ ಹೀನಾಯ ಸೋಲನ್ನು ಅನುಭವಿಸಿತ್ತು.
ನಟನೆ ಮತ್ತು ರಿಯಾಲಿಟಿ ಶೋನಲ್ಲು ಹೆಸರಿತ್ತು
ಕೇವಲ ಸಿನಿಮಾ ನಿರ್ದೇಶನ ಅಲ್ಲದೆ ನಟನಾಗಿ ಸಕ್ರಿಯರಾಗಿದ್ದರು. ‘ಮೈಲಾರಿ’, ‘ಹುಡುಗರು’, ‘ಕುಷ್ಕ’, ‘ಮಠ’, ‘ಬಾಡಿ ಗಾಡ್’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಅವರು. ಬಿಗ್ ಬಾಸ್ ಕನ್ನಡ ಸೀಸನ್ 2ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿದ್ದರು. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಭರ್ಜರಿ ಕಾಮಿಡಿ, ಪುಟಾಣಿ ಪಂಟ್ರು ಸೀಸನ್ 2 ಮುಂತಾದ ಟಿವಿ ರಿಯಾಲಟಿ ಶೋಗಳಲ್ಲಿ ತೀರ್ಪುಗಾರರಾಗಿದ್ದರು. ಗುರುಪ್ರಸಾದ್ ಹಣಕಾಸು ಪರಿಸ್ಥಿತಿ ಹದಗೆಟ್ಟಿರಲಿಲ್ಲ ಜಗ್ಗೇಶ್
ನಟ ಜಗ್ಗೇಶ್ ಖಾಸಗಿ ಸುದ್ಧಿ ವಾಹಿನಿಗಯೊಂದಿಗೆ ಮಾತನಾಡಿ ಎಲ್ಲೆಡೆ ಕೇಳಿ ಬರುತ್ತಿರುವಂತೆ ಗುರುಪ್ರಸಾದ್ ಸಾಲದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ ಗುರುಪ್ರಸಾದ್ ಅವರ ಆರ್ಥಿಕ ಸ್ಥಿತಿ ತೀರಾ ಹದಗೆಟ್ಟಿರಲಿಲ್ಲ. ತಕ್ಕಮಟ್ಟಿಗೆ ಉತ್ತಮವಾಗಿತ್ತು. ಅವರ ಏಕಾಂಗಿತನವೇ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಲು ಕಾರಣವಾಗಿರಬಹುದು ಎನ್ನುತ್ತಾರೆ ಹಾಗೆ ಅವರ ವೈಯುಕ್ತಿಕ ಬದುಕಿನಲ್ಲಿ ಅವರು ಎರಡು ಮದುವೆಯಾಗಿದ್ದರು. ಮೊದಲ ಪತ್ನಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು ಆಗ ನಾನೆ ನಿಂತು ರಾಜೀ ಪಂಚಾಯ್ತಿ ನಡೆಸಿದ್ದೆ ಆದರೂ ಮೊದಲ ಪತ್ನಿಯಿಂದ ದೂರವಾದ ಗುರುಪ್ರಸಾದ್ ನಂತರ ಎರಡನೇ ಮದುವೆಯಾಗಿದ್ದರು. ಆಕೆಗೂ ಒಂದು ಮಗುವಿದೆ. ಈಗ ಅವರು ಒಂಟಿಯಾಗಿದ್ದರು ಎಂದು ಹೇಳುತ್ತಿದ್ದಾರೆ. ಅದರರ್ಥ ಅವರು ಎರಡನೇ ಪತ್ನಿಯಿಂದಲೂ ದೂರವಾಗಿದ್ದಾರೇನೋ ಎಂದು ಅನ್ನಿಸುತ್ತಿದೆ ಇಷ್ಟೆ ಅಲ್ಲ ಜನ್ಮಕೊಟ್ಟ ತಾಯಿ ದೇವರು ಅವರನ್ನು ಗುರುಪ್ರಸಾದ್ ತೀರಾ ಕೆಟ್ಟದಾಗಿ ಎಲ್ಲರ ಮುಂದೆಯೇ ಬೈಯ್ಯುತ್ತಿದ್ದರು ಈ ಬಗ್ಗೆ ನಾನೇ ಗುರುಪ್ರಸಾದ್ ಮೇಲೆ ಸಿಟ್ಟಾಗಿದ್ದೆ. ಬೇಡಪ್ಪಾ ತಾಯಿಯನ್ನು ಹೀಗೆಲ್ಲಾ ನಿಂದಿಸಬೇಡ ಎನ್ನುತ್ತಿದ್ದೆ. ದೇವರು, ಧರ್ಮದ ಬಗ್ಗೆಯೂ ತಮ್ಮ ರಂಗನಾಯಕ ಚಿತ್ರದಲ್ಲಿ ತೀರಾ ಕೆಟ್ಟದಾಗಿ ಬರೆದಿದ್ದರು. ನಾನು ಮಾತು ಹೇಳಿದ್ದೆ ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದಂತೆ ಧರ್ಮಭ್ರಷ್ಟನಾದವನು ನಾಶವಾಗುತ್ತಾನೆ ಎಂಬುದನ್ನು ಗುರುಪ್ರಸಾದ್ ಗೆ ಮನವರಿಕೆ ಮಾಡಿ ನೀನು ಧರ್ಮವನ್ನು ನಿಂದಿಸುವ ಮನಸ್ಥಿತಿಯಿಂದ ಹೋರ ಬರಬೇಕು ಎಂದು ಹೇಳಿದ್ದೆ ಎಂದು ಜಗ್ಗೆಶ್ ನೆನಪಿಸಿಕೊಳ್ಳುತ್ತಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



