ನ್ಯೂಜ್ ಡೆಸ್ಕ್: ಹುಡಗಿರಿಗಾಗಿ ಹುಡುಗರು ಬಡಿದಾಡಿಕೊಳ್ಳುವುದು ಸಾಮಾನ್ಯ ಆದರೆ ಇಲ್ಲಿ ಜೆಸ್ಟ್ ಫಾರ್ ಚೇಂಜ್ ಒರ್ವ ಹುಡುಗನಿಗಾಗಿ ಇಬ್ಬರು ಹುಡುಗಿಯರು ಸಾರ್ವಜನಿಕವಾಗಿ ನಡಿ ಬಸ್ಟಾಂಡಿನಲ್ಲಿ ಜಗಳವಾಡಿ ಬಡಿದಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ
ಇದು ಕೇಳಲು ವಿಚಿತ್ರ ಎನಿಸಿದರೂ ನಡೆದಿರುವುದು ನಿಜ ಇತ್ತೀಚೆಗಷ್ಟೇ ಬಾಯ್ ಫ್ರೆಂಡ್ನ ವಿಚಾರವಾಗಿ ಇಬ್ಬರು ಹುಡುಗಿಯರು ಜಗಳವಾಡುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಚಿತ್ರಣವಾಗಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಾರಾಷ್ಟ್ರದ ಪೈಥಾನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಪೈಥಾನ್ ನಗರದ ಬಸ್ ನಿಲ್ದಾಣದಲ್ಲಿ ನಡೆದ ಈ ಘಟನೆಯಲ್ಲಿ ಬಡಿದಾಡಿಕೊಂಡ ಬಾಲಕಿಯರಿಬ್ಬರನ್ನೂ ಪೊಲೀಸರು ಕರೆದೊಯ್ದು ಕೌನ್ಸೆಲಿಂಗ್ ನೀಡುವ ಮೂಲಕ ಬುದ್ದಿ ಹೇಳಿ ಬಿಡುಗಡೆಗೊಳಿಸಿದ್ದಾರೆ. ಪೊಲೀಸರ ಪ್ರಕಾರ, ಯುವತಿಯೊಬ್ಬಳು ಯುವಕನೊಂದಿಗೆ ಬಸ್ ನಿಲ್ದಾಣಕ್ಕೆ ಬಂದಿದ್ದಾಳೆ ಈ ವಿಷಯ ತಿಳಿದ ಮತ್ತೊಬ್ಬ ಹದಿಹರೆಯದ ಯುವತಿ ಅದೇ ಯುವಕನಿಗಾಗಿ ಬಸ್ ನಿಲ್ದಾಣಕ್ಕೆ ಬರುತ್ತಾಳೆ ಯುವಕ ಮತ್ತೊಬ್ಬ ಯುವತಿಯೊಂದಿಗೆ ಇರುವುದನ್ನು ನೋಡಿ ಕೋಪಗೊಂಡ ಆಕೆ ಬಾಯ್ ಫ್ರೆಂಡ್ ಜೊತೆಗಿದ್ದ ಯುವತಿಯ ವಿರುದ್ದ ಜಗಳ ಕಾಯ್ದಿದ್ದಾಳೆ ಪರಸ್ಪರ ಮುಷ್ಟಿ,ಗುದ್ದಾಟ ನಡೆಸಿದ್ದಾರೆ. ಜುಟ್ಟು ಹಿಡಿದು ಬೈದಾಡಿಕೊಂಡಿದ್ದಾರೆ ಯಾರಿಗೆ ಯಾರು ಕಡಿಮೆ ಇಲ್ಲದಂತೆ ವರ್ತಿಸಿದ್ದಾರೆ ಇದನ್ನು ನೋಡಿದ ಸುರಸುಂದರಾಂಗ ಯುವಕ ತನಗೇನು ಗ್ರಹಚಾರ ಕಾದಿದೀಯೋ ಎಂಬಂತೆ ಮೆತ್ತಗೆ ಜಾಗಕಾಲಿಮಾಡಿದ್ದಾನೆ. ಈ ಎಲ್ಲಾ ಬೆಳವಣಿಗಳಾಗುತ್ತಲೆ ಸ್ಥಳಕ್ಕೆ ಆಗಮಿಸಿದ ಪೋಲಿಸರು ಹದಿಹರೆಯದ ಯುವತಿಯರನ್ನು ಠಾಣೆಗೆ ಕರೆದೊಯ್ದು ಕೌನ್ಸೆಲಿಂಗ್ ನೀಡಿ ಇನ್ನೊಮ್ಮೆ ಈ ರೀತಿ ಮಾಡಿದರೆ ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟಬೇಕಾಗುತ್ತದೆ ಎಂದು ಎಚ್ಚರಿಸಿ ಕಳಿಸಿರುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



