ಶ್ರೀನಿವಾಸಪುರ:ಊರೊಳಗೆ ಹಾದು ಹೋಗಿರುವ ಹೈವೆ ರಸ್ತೆಯಾದ ರಾಜಾಜಿರಸ್ತೆ ಸಂಪೂರ್ಣವಾಗಿ ಹಾಳಾಗಿದೆ ರೀಪೇರಿ ನೆಪದಲ್ಲಿ ರಸ್ತೆಯಲ್ಲಿ ಡಾಂಬರಿನ ಪ್ಯಾಚ್ ಹಾಕಿದ್ದು ರಸ್ತೆ ಸಮತಟ್ಟು ಇಲ್ಲದೆ ಎಗ್ಗಾ-ದಿಗ್ಗ ಆಗಿದೆ ರಸ್ತೆಯ ಎರಡೂ ಬದಿ ಇರುವ ಚರಂಡಿಗಳು ಒಡೆದು ಹೋಗಿವೆ,ಹಲವು ವರ್ಷಗಳಿಂದಲೂ ಈ ಸಮಸ್ಯೆ ಇದ್ದರು,ರಸ್ತೆ ಅಭಿವೃದ್ಧಿ ಮಾಡುವ ಬಗ್ಗೆ The National Highways Authority of India (NHAI) ಹೈವೆ ಪ್ರಾಧಿಕಾರ ಮುಂದಾಗಿಲ್ಲ,ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಚರಂಡಿ ನೀರು ರಸ್ತೆ ಮೇಲೆ ಹರಿದು ನೇರವಾಗಿ ಮನೆಗಳಿಗೆ ನುಗ್ಗುತ್ತದೆ,ರಸ್ತೆಯಲ್ಲಿ ಎದರು-ಬದರು ವಾಹನಗಳು ಬಂದಾಗ ಪಾದಚಾರಿಗಳು ಹಾಗು ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದು ಯಾಮಾರಿದರೆ ಎಲ್ಲಿ ಚರಂಡಿಗೆ ಬಿಳುತ್ತೆವೊ ಎಂಬ ಆತಂಕ ಇದು ಇಲ್ಲಿನ ನಿವಾಸಿಗರ ಪಾಡು ಎನ್ನುತ್ತಾರೆ ಇಮದಾಪಾಷ.
ಮೂರು ರಾಜ್ಯಗಳ ಸಂಪರ್ಕದ ಹೆದ್ದಾರಿ.
ಶ್ರೀನಿವಾಸಪುರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ National highways 69 ಹಿಂದೆ ಇದನ್ನು ರಾಷ್ಟ್ರೀಯ ಹೆದ್ದಾರಿ NH 234 ಎಂದು ಕರೆಯುತ್ತಿದ್ದರು.ಆದಕ್ಕೂ ಮುಂಚಿತವಾಗಿ ಇದು ಮುಳಬಾಗಿಲು-ಮೂಡಗೆರೆ ರಾಜ್ಯ ಹೆದ್ದಾರಿ ಆಗಿತ್ತು ತಮಿಳುನಾಡು-ಕರ್ನಾಟಕ ಸಂಪರ್ಕದ ವಾಹನ ದಟ್ಟನೆ ಹೆಚ್ಚಿದ ಹಿನ್ನಲೆಯಲ್ಲಿ UPA-2 ಸರ್ಕಾರದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಘೋಷಿಸಲಾಯಿತು, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಮೂಲಕ ಹಾದುಹೋಗುತ್ತದೆ. ಪಶ್ಚಿಮ ಟರ್ಮಿನಲ್ ಹೊನ್ನಾವರ ಬಳಿ NH 66 ರ ಜಂಕ್ಷನ್ನಲ್ಲಿದೆ, ಸಿರಾ ಬಳಿ NH 48 ಅನ್ನು ಸಂಪರ್ಕಿಸುತ್ತದೆ, ಚಿಕ್ಕಬಳ್ಳಾಪುರ ಬಳಿ NH 44 ಅನ್ನು ಸಂಪರ್ಕಿಸುತ್ತದೆ, ಮುಳಬಾಗಿಲು ಬಳಿ NH 75 ಅನ್ನು ಸಂಪರ್ಕಿಸುತ್ತದೆ ಮತ್ತು ರೇಣಿಗುಂಟದ ಪೂರ್ವ ತುದಿಯಲ್ಲಿ ಕೊನೆಗೊಳ್ಳುತ್ತದೆ. ಕರ್ನಾಟಕದಲ್ಲಿ ಅಂದಾಜು 570 ಕಿಮೀ ಆಂಧ್ರಪ್ರದೇಶದಲ್ಲಿ 162 ಕಿಮೀ ಸಾಗುವಂತ ರಾಷ್ಟ್ರೀಯ ಹೆದ್ದಾರಿ ಪಟ್ಟಣದಲ್ಲಿ ಸುಮಾರು 3-4 ಕೀ.ಮಿ ಹಾದುಹೋಗಿದೆ.
ಅಗಲೀಕರಣಕ್ಕೆ ಯಾವುದೇ ವಿರೋಧ ಇಲ್ಲ
ರಾಜಾಜಿ ರಸ್ತೆಯಲ್ಲಿ ಹೆದ್ದಾರಿ ಅಗಲೀಕರಣ ಮಾಡಬೇಕಿರುವುದು ಅವಶ್ಯಕ ಇದರಲ್ಲಿ ಯಾವುದೇ ವಿರೋಧ ಇಲ್ಲದೆ ಜನ ಒಲವು ತೋರಿದ್ದರು ಹೈವೆ ಪ್ರಾಧಿಕಾರ ಮುಂದಾಗದಿರುವುದು ವಿಪರ್ಯಾಸ,ಹೆದ್ದಾರಿ ಅಗಲೀಕರಣ ಆಗಲಿ ಎಂದು ಇಲ್ಲಿನ ಮಸೀದಿ ಆಡಳಿತ ಮಂಡಳಿ ತನ್ನ ವಾಣಿಜ್ಯ ಮಳಿಗೆಗಳನ್ನು ಹೈವೆ ಪ್ರಾಧಿಕಾರ ನಿಯಮಾವಳಿಗಳಂತೆ ರಸ್ತೆಯಿಂದ ದೂರ ನಿರ್ಮಾಣ ಮಾಡಿ ಔದಾರ್ಯ ತೋರಿದೆ, ಆದರೂ ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿ ಮಾಡಲು ಏನು ಸಮಸ್ಯೆ ಎಂಬುದು ಯಕ್ಷ ಪ್ರಶ್ನೆ ಆಗಿ ಸ್ಥಳೀಯರನ್ನು ಕಾಡುತ್ತಿದೆ.
ಹೈವೇ ಪ್ರಾಧಿಕಾರದವರು ರಾಜಾಜಿರಸ್ತೆ ಸಂತೇಮೈದಾನ ರಸ್ತೆ ಮುಳಬಾಗಿಲು ವೃತ್ತ ಅಗಲೀಕರಣ ಮಾಡಿಲ್ಲ ಅಭಿವೃದ್ಧಿ ಮಾಡಿಲ್ಲ ಇದು ಇಂದು ನಿನ್ನೆಯ ಆರೋಪವಲ್ಲ ಹಲವು ವರ್ಷಗಳಿಂದ ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಇಲ್ಲಿನ ಜನ ಚರಂಡಿಯಂತಹ ಮೂಲಭೂತ ಸೌಕರ್ಯದಿಂದಲೂ ವಂಚಿತರಾಗಿದ್ದಾರೆ,ಈ ಬಗ್ಗೆ ಪುರಸಭೆಯವರು ಹೈವೆ ಪ್ರಾಧಿಕಾರದ ಕಡೆ ಕೈ ತೊರಿಸಿ ಸುಮ್ಮನಾಗಿದ್ದಾರೆ.
ಸಾವಿರಾರು ವಾಹನಗಳ ಸಂಚಾರ
ಮಾವಿಗೆ ವರ್ಲ್ದ್ ಫೇಮಸ್ಸು ಆದ ಶ್ರೀನಿವಾಸಪುರದಲ್ಲಿ ಹೆದ್ದಾರಿ ಹಾದುಹೋಗಿದೆ ಮಾವಿನ ಬೆಳೆ ಸಾಗಿಸಲು ಭಾರತದ ನಾನಾ ಭಾಗಗಳಿಂದ ಇಲ್ಲಿಗೆ ವಾಹನಗಳು ಬರುತ್ತವೆ, ನ್ಯಾಷನಲ್ ಪರ್ಮಿಟ್ ಲಾರಿಗಳು ಬರುತ್ತವೆ ಜೊತೆಗೆ ತಮಿಳುನಾಡು ತಿರುಪತಿ ಭಾಗದಿಂದ ಬರುವಂತ ಲಾರಿಗಳು ಆಂಧ್ರದ ಅನಂತಪುರ ಹೈದರಾಬಾದ್ ಮತ್ತು ಉತ್ತರ ಕರ್ನಾಟಕದ ಭಾಗಗಳಿಗೆ ಹೋಗಲು ಇದೆ ರಸ್ತೆಯನ್ನು ಬಳಸಿಕೊಂಡು ಹೋಗುತ್ತಾರೆ ಪ್ರತಿದಿನ ದೊಡ್ಡಮಟ್ಟದಲ್ಲಿ ವಾಹನ ಸಂಚಾರ ಇದ್ದರೂ ರಾಜಾಜಿರಸ್ತೆ ಅಭಿವೃದ್ಧಿ ಮಾಡಲು ಹೈವೆ ಪ್ರಾಧಿಕಾರಕ್ಕೆ ಕನಿಷ್ಟ ಕಾಳಜಿ ಇಲ್ಲ ಎನ್ನುತ್ತಾರೆ ಪ್ರಜಾವೇದಿಕೆ ಸಂಚಾಲಕ ರಮೇಶ್ ಬಾಬು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



