ಸಿನಿ ಡೆಸ್ಕ್:ತೆಲಗು ಸಿನಿಮಾ ರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಬಂದಿರೋ ನಿರ್ದೇಶಕ most lucky director ಅನಿಲ್ ರಾವಿಪುಡಿ ನಿರ್ದೇಶನದ ಮತ್ತೊಂದು ಸಿನಿಮಾ ರಿಲೀಸ್ ಆಗಿದೆ. ಮೆಗಾಸ್ಟಾರ್ ಚಿರಂಜೀವಿ ನಟಿಸಿರುವ “ಮನ ಶಂಕರ ವರಪ್ರಸಾದ್ ಗಾರು” ಸಿನಿಮಾದಲ್ಲಿ , ಸೌತ್ ಲೇಡಿ ಸೂಪರ್ಸ್ಟಾರ್ ನಯನತಾರಾ, ವಿಕ್ಟರಿ ವೆಂಕಟೇಶ್, ಕ್ಯಾಥರೀನ್ ಟ್ರೆಸಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜನವರಿ 12 ರಂದು ಸೋಮವಾರ ವಿಶ್ವದಾದ್ಯಂತ ರಿಲೀಸ್ ಆಗಿದೆ.
ಬಾಲಿವುಡ್ನ ಹಿರಿಯ ನಟಿ ಜರೀನಾ ವಹಾಬ್, ಸಚಿನ್ ಖೇಡೆಕರ್, ಶರತ್ ಸಕ್ಸೇನಾ, ಹರ್ಷವರ್ಧನ್, ಅಭಿನವ್ ಗೋಮಠಂ ಮತ್ತು ರಘು ಬಾಬು ಅಂತಹ ಜನರು ಈ ಸಿನಿಮಾದಲ್ಲಿ ನಟಿಸಿರೋದು ಪ್ರಮುಖ ಆಕರ್ಷಣೆಯಾಗಿದ್ದು ಅನಿಲ್ ರಾವಿಪುಡಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಾಹು ಗಾರಾಪಾಟಿ ಮತ್ತು ಸುಸ್ಮಿತಾ ಕೊನಿದೇಲಾ ಬಂಡವಾಳ ಹೂಡಿದ್ದಾರೆ
ತಾಂತ್ರಿಕ ವರ್ಗದಲ್ಲಿ ಕ್ಯಾಮೆರಾ ಸಮೀರ್ ರೆಡ್ಡಿ,ಸಂಕಲನ ತಮ್ಮಿರಾಜು ಜವಾಬ್ದಾರಿ ಹೊತ್ತಿದ್ದಾರೆ. ಸಂಕ್ರಾಂತಿ ಫೇಮ್ ಭೀಮ್ಸ್ ಸಿಸಿರೋಲಿಯೋ ಸಂಗೀತದ ನೀಡಿದ್ದರೆ ಎ.ಎಸ್. ಪ್ರಕಾಶ್ ಆರ್ಟ್ ಸಿನಿಮಾವನ್ನು ಮತ್ತಷ್ಟು ಕಲರ್ಫುಲ್ ಆಗಿಸಿದ್ದಾರೆ.
ಚಿರಂಜೀವಿ ನಟಿಸಿದ್ದಾರೆ ಅಂದರೆ ಕಥೆ ಏನೋ ವಿಶೇಷ ಇದೆ ಎಂಬ ಕೂತುಹಲ ಅಭಿಮಾನಿಗಳಿಗಷ್ಟೆ ಅಲ್ಲ ಸಿನಿ ಪ್ರೇಕ್ಷಕರಿಗೂ ಮೂಡುತ್ತದೆ ಆದರೆ ‘ಮನ ಶಂಕರ ವರಪ್ರಸಾದ್ ಗಾರು’ family entertainer ಸಿನಿಮಾದ ಕಥೆ ತುಂಬಾ ಸಿಂಪಲ್ NIA ಅಧಿಕಾರಿ ಶಂಕರ ವರಪ್ರಸಾದ್ (ಚಿರಂಜೀವಿ) ಅವರ ಸುತ್ತ. ಕೇಂದ್ರ ಗೃಹ ಸಚಿವ (ಶರತ್ ಸಕ್ಸೇನಾ) ರಕ್ಷಣೆ ಜವಾಬ್ದಾರಿ ಕಥಾನಾಯಕನದು ಈತ ಖ್ಯಾತ ಉದ್ಯಮಿ ಜಿವಿಆರ್ (ಸಚಿನ್ ಖೇಡೆಕರ್) ಅವರ ಪುತ್ರಿ ಶಶಿ ರೇಖಾ (ನಯನತಾರಾ)ರನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಪ್ರೀತಿಸಿ ಮದುವೆಯಾದರೂ,ಜೀವನ ಇವರು ಅಂದುಕೊಂಡಂತೆ ಸಾಗುವುದಿಲ್ಲ. ಇವರಿಗೆ ಇಬ್ಬರು ಮಕ್ಕಳಿದ್ದರೂ ನಾನಾ ಕಾರಣಗಳಿಂದ ವಿಚ್ಛೇದನ ಪಡೆಯುತ್ತಾರೆ. ಆದರೆ, ವರಪ್ರಸಾದ್ಗೆ ಮಕ್ಕಳಿಂದ ದೂರವಿರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರ ಪ್ರೀತಿಯನ್ನು ಮತ್ತೆ ಗಳಿಸಲು ವರಪ್ರಸಾದ್ ನಿರ್ಧರಿಸಿ, ತಮ್ಮ ಮಾಜಿ ಪತ್ನಿಯ ಮನೆಯಲ್ಲೇ ನೆಲಸುತ್ತಾರೆ.
ಇನ್ನು ಪರ್ಫಾಮೆನ್ಸ್ ಬಗ್ಗೆ ಹೇಳುವುದಾದರೆ, ಶಂಕರ ವರಪ್ರಸಾದ್ ಪಾತ್ರದಲ್ಲಿ ಚಿರಂಜೀವಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ಕೊಡುತ್ತಾರೆ.ಎಪ್ಪತ್ತರ ವಯಸ್ಸಿನಲ್ಲೂ ತುಂಬಾ ಸ್ಮಾರ್ಟ್ ಆಗಿರುವ ಚಿರು ಅತ್ತಕು ಯಮಡು ಅಮ್ಮಾಯಿಕಿ ಮೊಗಡು, ದೊಂಗ ಸಿನಿಮಾಗಳ ಹಳೇಯ ಚಿರಂಜೀವಿ ಇಲ್ಲಿ ಕಾಣಸಿಗುತ್ತಾರೆ.ಡ್ಯಾನ್ಸ್ ಪರಫಾರ್ಮೇನ್ಸ್ ಸೂಪರ್ ಆಗಿದ್ದು ನೃತ್ಯ ನಿರ್ದೇಶಕ ಸಂದೀಪ್ ಮಾಸ್ಟರ್ ಸಂಯೋಜನೆ ಮಾಡಿರುವ “Hook Step” ಡ್ಯಾನ್ಸ್ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಸಿದೆ. ಇನ್ನೂ ಹಾಸ್ಯ,ವಿನೋದ, ಭಾವನಾತ್ಮಕ ಹಾಗೂ ಮಾಸ್ ರೇಂಜ್ ನಲ್ಲಿ ಕಾಣುವ ಚಿರಂಜಿವಿ ಫಸ್ಟ್ಹಾಫ್ನಲ್ಲಿ ಹಾಸ್ಯದ ಸನ್ನಿವೇಶಗಳಲ್ಲಿ ನಗಿಸಿದರೆ,ಇನ್ನು ಸೆಕೆಂಡ್ಹಾಫ್ನಲ್ಲಿ ಸೆಂಟಿಮೆಂಟ್ ದೃಶ್ಯಗಳಲ್ಲಿ ಇಷ್ಟ ಆಗುತ್ತಾರೆ. ಗಂಭೀರ ಪಾತ್ರದಲ್ಲಿ ನಯನತಾರಾ ಅಚ್ಚುಕಟ್ಟಾಗಿ ನಟಿಸಿದ್ದಾರೆ. ಇನ್ನು ವೆಂಕಟೇಶ್ ಸ್ಪೆಷಲ್ ಎಂಟ್ರಿಯೇ ಅಟ್ರ್ಯಾಕ್ಷನ್. ಚಿರಂಜೀವಿ ಮತ್ತು(ವೆಂಕಿ ಗೌಡ) ವೆಂಕಟೇಶ್ (ಕನ್ನಡ ಮಾತನಾಡುವ) ಇರೋವವರೆಗೂ ತೆರೆಯ ಮೇಲೆ ಸುನಾಮಿ ಸೃಷ್ಟಿಯಾಗುತ್ತೆ.

ಗೆದ್ದ ನಿರ್ದೇಶಕ ಅನಿಲ್ ರಾವಿಪುಡಿ
ಜಿರಂಜೀವಿ ಅಭಿಮಾನಿಗಳು ಹಾಗೂ ಮಾಸ್ ಪ್ರೇಕ್ಷಕರ ನಾಡಿಮಿಡಿತ ಅರಿತಿರುವ ನಿರ್ದೇಶಕ ಅನಿಲ್ ರಾವಿಪುಡಿ ಪಕ್ಕಾ ಎಂಟರ್ಟೈನರ್ ಸಿನಿಮಾವನ್ನು ಕೊಟ್ಟಿದ್ದಾರೆ. ಈ ಸಿನಿಮಾದ ದೃಶ್ಯಗಳೊಂದಿಗೆ ಸಂಭಾಷಣೆ ಅದ್ಭುತವಾಗಿ ವರ್ಕ್ಔಟ್ ಆಗಿದೆ. ತಂದೆಯ ಭಾವನಾತ್ಮಕ ಪ್ರೀತಿ ಮತ್ತು ಹಾಸ್ಯ ಸನ್ನಿವೇಶಗಳು ಸಿನಿಮಾವನ್ನು power full ಮಾಡಿದೆ.ಚಿರಂಜೀವಿಯ ಅದ್ಭುತ ನಟನೆ ಸಿನಿಮಾವನ್ನು ಯಶಸ್ಸಿನತ್ತ ತೆಗೆದುಕೊಂಡು ಹೋಗಿದೆ. ಚಿರಂಜೀವಿ ಮತ್ತು ವೆಂಕಟೇಶ್ ಕಾಂಬಿನೇಷನ್ ಪ್ರೇಕ್ಷಕರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಾರೆ. ಕಥೆ ಮುಗಿದೇ ಹೋಯಿತು ಅನ್ನಿಸುವ ಸಮಯದಲ್ಲಿ ವೆಂಕಟೇಶ್ ಎಂಟ್ರಿ ನಿರ್ದೇಶಕರ ಜಾಣ್ಮೆಯನ್ನು ತೋರಿಸುತ್ತೆ. ಭೀಮ್ಸ್ ಸಿಸಿರೋಲಿಯೋ ಅವರ ಸಂಗೀತ ಸಿನಿಮಾಗೆ ಬ್ಯಾಕ್ ಬೋನ್



