ಶ್ರೀನಿವಾಸಪುರ: ಅಪರಿಚಿತ ವಾಹನ ಡಿಕ್ಕಿ ಹೊಡೆದು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮೂವರಲ್ಲಿ ಇಬ್ಬರು ಸಾವನಪ್ಪಿ ಒರ್ವ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಶ್ರೀನಿವಾಸಪುರ-ಕೋಲಾರ ರಸ್ತೆಯ ಶ್ರೀನಿವಾಸಪುರ ತಾಲ್ಲೂಕಿನ ಹೂವಳ್ಳಿ ಗೇಟ್ ನ ಬಳಿ ಶನಿವಾರ ತಡಸಂಜೆ ನಡೆದಿರುತ್ತದೆ.
ಹೂವಳ್ಳಿ ಗ್ರಾಮದ ಮೂವರು ಒಂದೇ ದ್ವೀಚಕ್ರ ವಾಹದಲ್ಲಿ ಜೊನ್ನಪಲ್ಲಿ ಗ್ರಾಮದಲ್ಲಿನ ತಿಥಿ ಕಾರ್ಯಕ್ಕೆ ಹೋಗುತ್ತಿರುವಾಗ ಅಪಘಾತ ನಡೆದಿದ್ದು ಅಪಘಾತದಲ್ಲಿ ಹೂವಳ್ಳಿ ಗ್ರಾಮದ ರತ್ನಮ್ಮ (42) ಮತ್ತು ಆಕೆಯ ಮೈದುನ ವೆಂಕಟರವಣ (47) ಸ್ಥಳದಲ್ಲಿಯೇ ಮೃತಪಟ್ಟಿದ್ದು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ರತ್ನಮ್ಮನ ಮಗ ಸುರೇಶ್ ಪ್ರಾಣಾಪಾಯದಿಂದ ಪಾರಾಗಿರುತ್ತಾನೆ.ಸ್ಥಳೀಯರ ಸಹಾಯದಿಂದ ಗಾಯಾಳು ಸುರೇಶ್ ನನ್ನು ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಘಟನಾ ಸ್ಥಳಕ್ಕೆ ಶ್ರೀನಿವಾಸಪುರ ಠಾಣಾಧಿಕಾರಿ ನಾರಯಣಸ್ವಾಮಿ ಭೇಟಿ ನೀಡಿ ಪರಶೀಲಿಸಿರುತ್ತಾರೆ.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13