ಶ್ರೀನಿವಾಸಪುರ:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶ್ರೀನಿವಾಸಪುರ ತಾಲೂಕು ಘಟಕಕ್ಕೆ 2024-29ನೇ ಸಾಲಿಗೆ 5 ವರ್ಷದ ಅವಧಿಗೆ ಆಕ್ಟೋಬರ್ 28 ರಂದು ಚುನಾವಣೆ ನಡೆಯಲಿದ್ದು,ತಾಲೂಕಿನ 24 ಇಲಾಖೆ ವ್ಯಾಪ್ತಿಯಲ್ಲಿ 32 ಸ್ಥಾನಗಳಿಗೆ 27 ಸ್ಥಾನಗಳ ಅವಿರೋಧ ಅಯ್ಕೆಯಾಗಿದ್ದು ಇದರಲ್ಲಿ ಪ್ರಮುಖ ಇಲಾಖೆಗಳಾದ ಆರೋಗ್ಯ ಇಲಾಖೆಯಿಂದ 4 ಕಂದಾಯ ಇಲಾಖೆಯಲ್ಲಿ 3 ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 2 ಭೂಮಾಪನ ಇಲಾಖೆಯಲ್ಲಿ 2 ಸೇರಿದಂತೆ ಉಳಿದ ಎಲ್ಲಾ ಇಲಾಖೆಯಿಂದ ತಲಾ ಒಬ್ಬರು ಅಯ್ಕೆಯಾಗಿದ್ದಾರೆ. ಕೆಲ ಇಲಾಖೆಗಳಲ್ಲಿ ನೌಕರರು ಕನಿಷ್ಠ ಸಂಖ್ಯೆಯಲ್ಲೂ ಇಲ್ಲದ ಕಾರಣ ಕೆಲವೊಂದು ಇಲಾಖೆಗಳ ಜೋತೆ ಸೇರಿಸಿ ಪ್ರತಿನಿಧಿಗಳನ್ನು ಅಯ್ಕೆ ಮಾಡಿಕೊಳ್ಳಲಾಗಿದೆ.
ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ,ಪ್ರೌಢಶಾಲಾ ಶಿಕ್ಷಕರ ಸಂಘದ ಹಾಗು ಬಿಇಒ ಕಚೇರಿ ನೌಕರರ ಸಂಬಂದಿಸಿದಂತೆ ಅಭ್ಯರ್ಥಿಗಳು ಚುನಾವಣೆಗೆ ಮುಂದಾಗಿದ್ದು ಇದರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 677 ಮತದಾರರಿದ್ದು 9 ಜನ ಶಿಕ್ಷಕರು ಮೂರು ತಂಡಗಳಾಗಿ(ಪ್ಯಾನಲ್) ಅಭ್ಯರ್ಥಿಗಳಾಗಿ ಕಣದಲ್ಲಿದ್ದು ಚುನಾವಣೆ ಕಣ ರಂಗೇರಿದೆ ಹೈಓಲ್ಟೇಜ್ ಕಣವಾಗಿ ಮಾರ್ಪಟ್ಟಿದೆ ಎನ್ನುವ ಮಾತು ಎಲ್ಲಡೆ ಕೇಳಿಬರುತ್ತಿದೆ.
ಪ್ರೌಡಶಾಲೆ ಶಿಕ್ಷಕರ ಕ್ಷೇತ್ರದಲ್ಲಿ 160 ಮತದಾರರಿದ್ದು ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದರೆ ಕ್ಷೇತ್ರ ಶಿಕ್ಷಣ ಇಲಾಖೆ (BEO) ಕಚೇರಿಯಲ್ಲಿ 14 ಮತದಾರಲ್ಲಿ ಒಮ್ಮತ ಇಲ್ಲದೆ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಚುನಾವಣೆ ಕಣದಲ್ಲಿದ್ದಾರೆ.
ಸಾರ್ವತ್ರಿಕ ಚುನಾವಣೆಗಳಿಗೂ ಕಡಿಮೆ ಇಲ್ಲ
ಹೆಸರು ಹೇಳಲು ಬಯಸದ ಕೆಲ ಶಿಕ್ಷಕರು ಹೇಳುವಂತೆ ಯಾವುದೆ ಅಜೆಂಡ ಇಲ್ಲದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಚುನಾವಣೆ ನಡೆಯುತ್ತಿದೆ ಸ್ಪರ್ದಾಳುಗಳು ಅಬ್ಬರದ ಪ್ರಚಾರ ನಡೆಸುತ್ತ ಯಾವುದೆ ಸಾರ್ವತ್ರಿಕ ಚುನಾವಣೆಗಳಿಗಿಂತ ಕಡಿಮೆ ಇಲ್ಲ ಎಂಬಂತೆ ಪ್ರಚಾರದಲ್ಲಿ ಆಕ್ರಮಣಕಾರಿ ಆಟ ಆಡುತ್ತಿದ್ದು, ಅಭ್ಯರ್ಥಿಗಳು ಮತದಾರರನ್ನು ಆಕರ್ಷಿಸಲು ಎಲ್ಲಾ ಕಸರತ್ತುಗಳನ್ನು ಮಾಡುತ್ತ ಮತ ಯಾಚನೆ ಮಾಡುತ್ತಿದ್ದರಂತೆ.
ಮತದಾರರ ಪಟ್ಟಿ ಸಕ್ರಮ ಇಲ್ಲ ಆರೋಪ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶ್ರೀನಿವಾಸಪುರ ತಾಲೂಕು ಘಟಕ ಮತದಾರರ ಪಟ್ಟಿ ಸಕ್ರಮವಾಗಿಲ್ಲ ಅದರಲ್ಲೂ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನಡೆಯಬಾರದ ಅಕ್ರಮಗಳು ನಡೆದಿವೆ ಅದರೂ ಚುನಾವಣೆ ನಡೆಸಲಾಗುತ್ತಿದೆ ಎಂಬ ಆರೋಪ ಚುನಾವಣೆ ಘೋಷಣೆಯಾದಗಿಂದಲೂ ಕೇಳಿಬರುತ್ತಿದೆ ಇದಕ್ಕೆ ಚುನಾವಣಾಧಿಕಾರಿಯಾಗಿ ಹೇಳುವುದೇನೆಂದರೆ ಅಯಾ ಇಲಾಖೆ ಮುಖ್ಯಸ್ಥರು ಏನು ಪಟ್ಟಿ ಕಳಿಸಿದ್ದಾರೋ ಅದನ್ನೆ ನಾವು ತಾಲೂಕು,ಜಿಲ್ಲಾ ಹಾಗು ರಾಜ್ಯ ನೌಕರರ ಸಂಘದ ಪಧಾದಿಕಾರಿಗಳ ಬಳಿ ಒಪ್ಪಿಗೆ ಪಡೆದುಕೊಂಡು ಮತದಾರರ ಪಟ್ಟಿ ತಯಾರಿಸಿ ಚುನಾವಣೆ ನಡೆಸುತ್ತಿರುವುದಾಗಿ ಹೇಳುತ್ತಾರೆ.ನಿವೃತ್ತ ಪ್ರೌಢಶಾಲಾ ಶಿಕ್ಷಕ ಐಮಾರೆಡ್ಡಿ ಚುನಾವಣಾಧಿಕಾರಿಯಾಗಿ ನಿವೃತ್ತ ಶಿಕ್ಷಕ ತಿಪ್ಪಣ್ಣ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
Breaking News
- ಸಾವನ್ನೇ ಗೆದ್ದ ಮಾರ್ಕಂಡೇಯ ಪುರಾಣ ಗಾಥೆ ವಕ್ಕಲೇರಿಯ ದೇವಾಲಯದಲ್ಲಿ!
- UPSC 2024 Result:ಶ್ರೀನಿವಾಸಪುರ ಮೇಷ್ಟ್ರ ಮಗಳು 446 ರ್ಯಾಂಕ್.
- ದಾಳಿಂಬೆ ಜ್ಯೂಸ್ ಎಷ್ಟು ಆರೋಗ್ಯಕರ?
- ಅವಲಕುಪ್ಪ ರಸ್ತೆಗೆ ಮೇಕಪ್ ತೇಪೆ ಬೇಡ,ಡಾಂಬರ್ ಹಾಕುವುದು ಯಾವಾಗ?!
- ಅಂಬೇಡ್ಕರ್ ಭವನ ನಿರ್ಮಾಣಕ್ಕೆ 2 ಎಕರೆ ಜಾಗ ಮೀಸಲು ಶಾಸಕ ವೆಂಕಟಶಿವಾರೆಡ್ದಿ
- ಶ್ರೀನಿವಾಸಪುರ:ಅರಣ್ಯಾಧಿಕಾರಿಗಳಿಂದ ರೈತರ ಬಂಧನ ಪ್ರತಿಭಟನೆ ಹೆದ್ದಾರಿ ಬಂದ್!
- ಅದ್ದೂರಿಯಾಗಿ ನಡೆದ ಯಲ್ದೂರು ಕೋದಂಡರಾಮ ಕಲ್ಯಾಣೋತ್ಸವ ಹಾಗು ರಥೋತ್ಸವ
- VIP ಕಾಲೇಜಿಗೆ ಪಿಯು ಪರೀಕ್ಷೆಯಲ್ಲಿ 95 ರಷ್ಟು ಫಲಿತಾಂಶ!
- PUC FAIL ನಾಲ್ವರು ವಿದ್ಯಾರ್ಥಿಗಳ ಆತ್ಮಹತ್ಯೆ!
- ಶ್ರೀನಿವಾಸಪುರದಲ್ಲಿ ಎಲ್ಲೆಲ್ಲೂ ಮೊಳಗಿದ ಜೈ ಶ್ರೀ ರಾಮ Vibes!
Saturday, April 26