ಶ್ರೀನಿವಾಸಪುರ: ಶತಮಾನೋತ್ಸವ ಅಚರಿಸುತ್ತಿರುವ ಶ್ರೀನಿವಾಸಪುರದ ಶ್ರೀ ಶೃಂಗೇರಿ ಶಂಕರ ಮಠದ ಶತಮಾನೋತ್ಸವ ಹಾಗು ವಿಮಾನ ಗೋಪುರ ಕುಂಭಾಭಿಷೇಕ ಮಹೋತ್ಸವನ್ನು ಶ್ರೀ ಶೃಂಗೇರಿ ಶಂಕರ ಮಠದ ಉತ್ತಾಧಿಕಾರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ನೆವೇರಿಸಲಿದ್ದಾರೆ. ಮೂರು ದಿನಗಳ ಕಾಲ ನಡೆಯುವಂತ ಕಾರ್ಯಕ್ರಮದಲ್ಲಿ ಭಾಗವಹಿಸಲು ಲೋಕಕಲ್ಯಾಣಾರ್ಥ ವಿಜಯಿ ಯಾತ್ರೆಯಲ್ಲಿರುವ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳು ಸೋಮವಾರ ಸಂಜೆ 5 ಗಂಟೆಗೆ ಶ್ರೀನಿವಾಸಪುರ ಪುರ ಪ್ರವೇಶ ಮಾಡಲಿದ್ದಾರೆ ಅವರನ್ನು ವೇದಘೋಷ ಮಂಗಳ ವಾದ್ಯಗಳೊಂದಿಗೆ ಪೂರ್ಣಕುಂಭ ಸ್ವಾಗತ ಮಾಡಲಿರುವುದಾಗಿ ವಿಪ್ರ ಸಂಘದ ದಿವಾಕರ್ ಮತ್ತು ಶಂಕರಮಠದ ಮೇನೆಜರ್ ಶ್ರೀನಿವಾಸನ್ ತಿಳಿಸಿರುತ್ತಾರೆ.
ಸೋಮವಾರ ಸಂಜೆ ಶ್ರೀ ವಿಧುಶೇಖರ ಭಾರತಿ ಸ್ವಾಮಿಗಳಿಗೆ ಶಂಕರ ಮಠದಲ್ಲಿ ಪಾದುಕ ಪೂಜೆ ಫಲ ಸಮರ್ಪಣೆ ಅದ ನಂತರ ಗುರುಗಳಿಂದ ಅನುಗ್ರಹ ಭಾಷಣ ಮತ್ತು ಶ್ರೀ ಚಂದ್ರಮೌಳೇಶ್ವರ ಪೂಜಾ ಅನುಷ್ಠಾನ ಇರುತ್ತದೆ ಮಂಗಳವಾರ ವಿಶೇಷ ಪೂಜಾ ಕಾರ್ಯಕ್ರಮಗಳ ನಡೆಯಲಿದ್ದು ಬುಧವಾರ ಶ್ರೀ ಗಳಿಂದ ಗುರು ದತ್ತಾತ್ರೇಯ ಆದಿ ಶಂಕರಾಚಾರ್ಯ,ಗಾಯಿತ್ರಿ ಮಹಾ ಪೂಜೆ ಹಾಗು ನವ ಚಂಡಿ ಮತ್ತು ರುದ್ರ ಹೋಮ ಪೂರ್ಣಾಹುತಿ ಆದ ನಂತರ ಶ್ರೀ ಶಂಕರ ಮಠದ ವಿಮಾನಗೋಪುರದ ಕುಂಭಾಭಿಷೇಕ ಸಾರ್ವಜನಿಕರಿಗೆ ಶ್ರೀ ಗಳ ದರ್ಶನ ಮತ್ತು ಫಲಮಂತ್ರಾಕ್ಷತೆ ಕಾರ್ಯ ನಡೆಯಲಿದೆ ಎಂದು ತಿಳಿಸಿರುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



