ನ್ಯೂಜ್ ಡೆಸ್ಕ್:ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇತ್ತೀಚೆಗೆ ತೆಲಗು ಸ್ಟಾರ್ ವಿಕ್ಟರ್ ವೆಂಕಟೇಶ್ ಅವರ ಹೈದರಾಬಾದ್ ಮನೆಯಲ್ಲಿ ತೆಲಗು ಹಿರಿಯ ನಟರು ಪ್ರಭಾವಿ ನಿರ್ದೇಶಕರು ಹಾಗು ಪ್ರಸಿದ್ದ ನಿರ್ಮಾಪಕರನ್ನು ಭೇಟಿಯಾಗಿ ಮಾತು ಮಂಥನ ನಡೆಸಿದ್ದಾರೆ.
ಭೇಟಿ ಸಮಯದಲ್ಲಿ ಆರ್ಎಸ್ಎಸ್ ನಡೆಸುತ್ತಿರುವ ಸೇವಾ ಕಾರ್ಯಕ್ರಮಗಳ ಬಗ್ಗೆ ತೆಲಗು ಸಿನಿಮಾ ಮಂದಿಯೊಂದಿಗೆ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) 100 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ, ಸಂಸ್ಥೆಯ ಸರ್ ಸಂಘಚಾಲಕ್ ಮೋಹನ್ ಭಾಗವತ್ ಅವರು ದೇಶಾದ್ಯಂತ ವಿವಿಧ ನಗರಗಳಲ್ಲಿ ಹಲವಾರು ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ.ಇದರ ಭಾಗವಾಗಿ, ಅವರು ಇತ್ತೀಚೆಗೆ ಹೈದರಾಬಾದ್ನಲ್ಲಿ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.ಅವರು ಮೂರು ದಿನಗಳ ಹಿಂದೆ ನೊವಾಟೆಲ್ನ ಎಚ್ಐಸಿಸಿಯಲ್ಲಿ ಚಲನಚಿತ್ರ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳ ಪ್ರಸಿದ್ಧ ವ್ಯಕ್ತಿಗಳನ್ನು ಭೇಟಿಯಾಗಿದ್ದರು ಅದಕ್ಕೂ ಒಂದು ದಿನ ಮೊದಲು,ತೆಲಗು ಸಿನಿಮಾ ರಂಗದ ಹಿರಿಯ ನಟ ವಿಕ್ಟರಿ ವೆಂಕಟೇಶ್ ಅವರ ಮನೆಯಲ್ಲಿ ತೆಲಗು ಚಲನಚಿತ್ರರಂಗದ ಪ್ರಮುಖರನ್ನು ಭೇಟಿಯಾದರು.ಈ ಸಂದರ್ಭದಲ್ಲಿ ನಾಯಕ ನಟರಾದ ಅಕ್ಕಿನೇನಿ ನಾಗಾರ್ಜುನ,ವಿಕ್ಟರಿ ವೆಂಕಟೇಶ್, ನಾನಿ, ತೇಜ ಸಜ್ಜ, ವರುಣ್ ತೇಜ್, ರಾಣಾ ದಗ್ಗುಬಾಟಿ,ರಾಮ್ ಪೋತಿನೇನಿ.ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ ನವೀನ್ ಯೆರ್ನೇನಿ (ರವಿ), ಸಾಹು ಗಾರಪಾಟಿ ಅಲ್ಲು ಅರವಿಂದ್, ದಿಲ್ ರಾಜು, ತ್ರಿವಿಕ್ರಮ್ ಶ್ರೀನಿವಾಸ್, ಬ್ರಹ್ಮಾನಂದಂ, ತಮ್ಮಾರೆಡ್ಡಿ ಭಾರದ್ವಾಜ್, ಮಂಚು ವಿಷ್ಣು, ಮನೋಜ್, ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾದ ಮುರಳಿ ಮೋಹನ್ ಮತ್ತು ರಾಜೇಂದ್ರ ಪ್ರಸಾದ್ ರಾಜ್ಯಸಭಾ ಸದಸ್ಯರಾದ ವಿಜಯೇಂದ್ರ ಪ್ರಸಾದ್, ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು
ಆರೆಸ್ಸೆಸ್ ನಡೆಸುತ್ತಿರುವ ಸೇವಾ ಕಾರ್ಯಕ್ರಮಗಳನ್ನು ಚಿತ್ರರಂಗದ ಗಣ್ಯರಿಗೆ ವಿವರಿಸಿದ ಮೋಹನ್ ಭಾಗವತ್, ಸಮಾಜದ ಬಗ್ಗೆ ಚಿಂತಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದ್ದು,ಸಮಾಜ ಮತ್ತು ಸಾಮಾಜಿಕ ಬದಲಾವಣೆಯನ್ನು ನಿರ್ಮಿಸುವಲ್ಲಿ ಕಲಾವಿದರು ಮತ್ತು ಚಲನಚಿತ್ರೋದ್ಯಮ ಸಮಾಜದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಯಾರಾದರೂ ಸಮಾಜದ ಒಳಿತಿಗಾಗಿ ಕೆಲಸ ಮಾಡಿದರೆ ಸ್ವಯಂ ಸೇವಕರು ಸಹಕಾರ ಇರುತ್ತದೆ ಎಂದಿರುತ್ತಾರೆ.
ಬಲ್ಲ ಮೂಲಗಳ ಪ್ರಕಾರ ಇದೊಂದು “ಸೌಜನ್ಯ ಸಭೆ”ಎನ್ನಲಾಗಿದ್ದು ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಕೇಂದ್ರ ಕಾರ್ಯಕಾರಿ ಸದಸ್ಯ ಭಾಗಯ್ಯ, ಕ್ಷೇತ್ರ ಪ್ರಚಾರಕ್ ಭಾರತ್, ಅಖಿಲ ಭಾರತ ಪ್ರಚಾರಕ್ ಪ್ರಮುಖ್ ಸುನೀಲ್ ಅಂಬೇಕರ್, ಸಂಪರ್ಕ್ ಪ್ರಮುಖ್ ರಾಮ್ ಲಾಲ್, ತೆಲಂಗಾಣ ಪ್ರಾಂತ ಪ್ರಚಾರಕ ಶ್ರೀಧರ್, ಪ್ರಾಂತ ಕಾರ್ಯವಾಹ ಕಚಂ ರಮೇಶ್, ಕೆ.ಕೆ.ವಿ. ಶರ್ಮಾ ಮತ್ತಿತರರು ಭಾಗವಹಿಸಿದ್ದರು.



