ಶ್ರೀನಿವಾಸಪುರ:ದ್ವಿಚಕ್ರವಾಹನಕ್ಕೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿರುವ ಘಟನೆ ಪಟ್ಟಣದ ಎಪಿಎಂಸಿ ಮಾರುಕಟ್ಟೆ ಮುಂಬಾಗ ಗುರುವಾರ ಸಂಜೆ ಸುಮಾರು 6ಗಂಟೆ ಸಮಯದಲ್ಲಿ ನಡೆದಿರುತ್ತದೆ.
ಮೃತ ಪಟ್ಟಿರುವ ಇಬ್ಬರು ಅಪ್ರಪಾಪ್ತ ಬಾಲಕ ನಿಜಾಮ್ ಹಾಗು ಬಾಲಕಿ ಇಖ್ರಾ ಅಫ್ರೀನ್(13) ಎಂದು ಗುರುತಿಸಲಾಗಿದೆ.
ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯಲ್ಲಿ ಕಲ್ಲೂರು ಬಳಿಯ ಆದರ್ಶ ಶಾಲೆಯ ವಿಧ್ಯಾರ್ಥಿನಿ ಇಖ್ರಾ ಅಫ್ರೀನ್ ಳನ್ನು ಕರೆ ತರಲು ನಿಜಾಮ್ ದ್ವಿಚಕ್ರವಾಹನ ತಗೆದುಕೊಂಡು ಹೋಗಿ ಅವಳನ್ನು ವಾಹನದಲ್ಲಿ ಕುರಿಸಿಕೊಂಡು ಬರುತ್ತಿದ್ದಾಗ ಎಪಿಎಂಸಿ ಮಾರುಕಟ್ಟೆ ಬಳಿ ಹಿಂದಿನಿಂದ ಕಾರೊಂದು ಡಿಕ್ಕಿ ಹೊಡೆದಿದೆ ಇದರಿಂದ ದ್ವಿಚಕ್ರ ವಾಹನದಲ್ಲಿ ಇಬ್ಬರು ನೆಲಕ್ಕೆ ಬಿದಿದ್ದಾರೆ ಅದೆ ಸಮಯಕ್ಕೆ ಎದುರಿನಿಂದ ಬಂದಂತ ಬೊಲೋರೊ ವಾಹನ ಹರಿದು ಬೈಕ್ ಸವಾರ ನಿಜಾಮ್ ಸ್ಥಳದಲ್ಲೇ ಸಾವು ಮೃತ ಪಟ್ಟರೆ ವಿಧ್ಯಾರ್ಥಿನಿ ಇಖ್ರಾ ಅಫ್ರೀನ್ ಜಾಲಪ್ಪ ಅಸ್ಪತ್ರೆಗೆ ಸಾಗಿಸುವಾಗ ಮೃತ ಪಟ್ಟಿರುವುದಾಗಿ ಹೇಳಲಾಗಿದೆ.
ಘಟನೆ ನಡೆದ ಸ್ಥಳಕ್ಕೆ ಮುಳಬಾಗಿಲು ಡಿ.ವೈ.ಎಸ್.ಪಿ ಸಂಬಂಧ ಶ್ರೀನಿವಾಸಪುರ ಪಟ್ಟಣ ಇನ್ಸ್ ಪೇಕ್ಟರ್ ನಾರಯಣಸ್ವಾಮಿ ಭೇಟಿ ನೀಡಿ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು್.
ಪೋಲಿಸರಿಗೆ ದೂರು
ಮಾವಿನ ಸಿಸನ್ ಸಂದರ್ಭದಲ್ಲಿ ಶ್ರೀನಿವಾಸಪುರ-ಚಿಂತಾಮಣಿ ರಸ್ತೆಯಲ್ಲಿ ಲಾರಿಗಳದೆ ಕಾರುಬಾರು, ಮಾವು ಸಾಗಿಸಲು ಬಾರಿ ಗಾತ್ರದ ದೊಡ್ಡ ದೊಡ್ಡ ಲಾರಿಗಳು ಇಲ್ಲಿಗೆ ಅಗಮಿಸುತ್ತದೆ ಅವುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಡದೆ ಕೃಷಿ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದ ಪರಿಣಾಮ ರಸ್ತೆಯುದ್ದಕ್ಕೂ ಲಾರಿಗಳೆ ನಿಂತಿರುತ್ತದೆ ಜೊತೆಗೆ ರಸ್ತೆ ಹೆದ್ದಾರಿಯಾಗಿರುವುದರಿಂದ ತಮಿಳನಾಡು ಮತ್ತು ಮಹಾರಾಷ್ಟ್ರ ವಾಹನಗಳ್ಳು ಹೆಚ್ಚು ಒಡಾಡುತ್ತದೆ ಈ ಹಿನ್ನಲೆಯಲ್ಲಿ ದ್ವಿಚಕ್ರ ವಾಹನ ಸಣ್ಣ-ಪುಟ್ಟ ವಾಹನ್ಗಳ ಒಡಾಟಕ್ಕೆ ಸಮಸ್ಯೆ ಉಂಟಾಗುತ್ತದೆ ಹಾಗು ಅವ್ಯಸ್ಥೆ ಉಂಟಾಗುತ್ತದೆ ಎಂದು ದೂರಿದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16