ಶ್ರೀನಿವಾಸಪುರ; ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ಆರು ಭಾರಿ ಶಾಸಕರಾಗಿ ಎರಡು ಭಾರಿ ಸ್ಪೀಕರ್ ಆಗಿ ಒಮ್ಮೆ ಸಚಿವರಾಗಿ ಸದಾ ಮೇಧಾವಿಯಂತೆ ಮಾತನಾಡುವ ರಾಜಕಾರಣಿ ಮಹಿಳೆಯರ ಕುರಿತಾಗಿ ಅವರಾಡಿರುವ ಮಾತು ಮಹಿಳೆಯರು ನೂವು ಉಣ್ಣುವಂತಾಗಿದೆ ಹಾಗೇ ತಾಲ್ಲೂಕಿನ ಜನತೆ ತಲೆ ತಗ್ಗಿಸುವಂತಾಗಿದೆ ಎಂದು ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಆರೋಪಿಸಿದರು.
ಶ್ರೀನಿವಾಸಪುರ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ರಮೇಶ್ ಕುಮಾರ್ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಹಿಳೆಯರ ಬಗ್ಗೆ ಇಷ್ಟೊಂದು ಲಘುವಾಗಿ ಮಾತನಾಡುವರು ಯಾವುದೇ ಕಾರಣಕ್ಕೂ ರಾಜಕಾರಣದಲ್ಲಿ ಮುಂದುವರೆಯಬಾರದು ಕೂಡಲೇ ರಾಜೀನಾಮೆ ನೀಡಿ ರಾಜಕೀಯ ವಿಶ್ರಾಂತಿ ಪಡೆಯಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅಮುದಾವೇಣು ಮಾತನಾಡಿ ಇತ್ತೀಚೆಗೆ ರಮೇಶ್ ಕುಮಾರ್ ಸದನದಲ್ಲಿ ಮಾತನಾಡುವಾಗ ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಮಾತನಾಡುತ್ತ ಮಹಿಳೆಯರನ್ನು ಅಪಮಾನ ಮಾಡಿರುವುದು ಮಹಿಳಾಲೋಕ ಕಳಂಕ ಎದುರಿಸುವಂತಾಗಿದೆ.
ಮಹಿಳೆಯರ ಬಗ್ಗೆ ಅಗೌರವವಾಗಿ ನಡೆದುಕೊಳ್ಳುವವರಿಗೆ ಕಾನೂನು ಆ ಪದದ ಬಗ್ಗೆ ಮಾತನಾಡುವವರ ಮೇಲೂ ಅನ್ವಯಿಸುವಂತೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಾಗಬೇಕು ಎಂದು ಒತ್ತಾಯಿಸಿದರು.ರ್ಯಾಲಿಯಲ್ಲಿ ಜಿಲ್ಲಾ ವಕ್ತಾರ ಮುನಿವೆಂಕಟಪ್ಪ, ತಾಲ್ಲೂಕು ಅಧ್ಯಕ್ಷ ಅಶೋಕ್ ರೆಡ್ಡಿ, ಕಾರ್ಯದರ್ಶಿ ಶಿವಶಂಕರಗೌಡ ಪುರಸಭೆ ಸದಸ್ಯ ರಾಮಾಂಜಿ,ರಮೇಶ್,ಶಫಿ ಮಹಿಳಾ ಮೋರ್ಚಾ ಮುಖಂಡರು ಇದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



