ಶ್ರೀನಿವಾಸಪುರ:-ಕೆ.ಎಸ್.ಆರ್.ಟಿ.ಸಿ ನೌಕರರ ಹಿತ ಕಾಪಾಡುವ ಜವಾಬ್ದಾರಿ ಸರ್ಕಾರದ ಹೊಣೆ ಮುಷ್ಕರ ನಿರತ ನಿಮ್ಮನ್ನು ನಿರ್ಲಕ್ಷಿಸುವುದು ತರವಲ್ಲ ಎಂದು ಮಾಜಿ ಸ್ಪೀಕರ್ ಹಾಗು ಶಾಸಕ ರಮೇಶಕುಮಾರ್ ಹೇಳಿದರು ಅವರು ಇಂದು ಶ್ರೀನಿವಾಸಪುರದಲ್ಲಿ ತಮ್ಮನ್ನು ಭೇಟಿಯಾಗಿದ್ದ ಮುಷ್ಕರ ನಿರತ ಸಾರಿಗೆ ಸಂಸ್ಥೆ ನೌಕರರಿಗೆ ನೈತಿಕ ಬೆಂಬಲ ಸೂಚಿಸಿ ಮಾತನಾಡಿದರು.
ಮುಷ್ಕರ ನಿರತ ಕಾರ್ಮಿಕರ ವಿರುದ್ದ ಸರ್ಕಾರ ದ್ವೇಷ ಸಾದಿಸುವುದನ್ನು ಬಿಟ್ಟು ಅವರೊಂದಿಗೆ ಮಾತುಕತೆಗೆ ಮುಂದಾಗುವಂತೆ ಅಗ್ರಹಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ನಿಮ್ಮದೆ ಸರ್ಕಾರಗಳು ಇವೆ ನೀವು ಮಾತೃಹೃದಯಿಯಾಗಿ ನೌಕರರ ಸಮಸ್ಯೆಗಳನ್ನು ಆಲಿಸಬೇಕು ಎಸ್ಮಾ ಜಾರಿ ಮಾಡುವುದನ್ನು ಬಿಟ್ಟು,ಶಾಂತಿ, ಸಾವಧಾನವಾಗಿ ಚರ್ಚೆ ಮೂಲಕ ಕಾರ್ಮಿಕರ ಹಿತ ಕಾಪಾಡುವುದರೊಂದಿಗೆ ಸೌಜನ್ಯಯುಕ್ತವಾಗಿ ವರ್ತಿಸುವಂತೆ ಸರ್ಕಾರಕ್ಕೆ ಹೇಳಿದರು.
ಸಾರಿಗೆ ಸಿಬ್ಬಂದಿಯೂ ಸಹ ಹತಾಶರಾಗದೆ, ಹಟಕ್ಕೆ ಬೀಳದೆ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಿದ್ದರಾಗುವಂತೆ ಸಲಹೆ ನೀಡಿದರಲ್ಲದೆ, ನಾವು ಸದಾಕಾಲವೂ ದುಡಿಯುವ ವರ್ಗದ ಹಾಗೂ ಕಾರ್ಮಿಕರ ಪರವಾಗಿ ಬೆಂಬಲಕ್ಕೆ ಇರುವುದಾಗಿ ಭರವಸೆ ನೀಡಿದರು.
ಖಾಸಗಿ ಕರಣದಿಂದ ಉದ್ದಾರ ಆಗುತ್ತದೆ ಎನ್ನುವುದು ಸುಳ್ಳು ಇದೊಂದು ಅವೈಜ್ಞಾನಿಕ ಚಿಂತನೆ ಎಂದು ಕಿಡಿಕಾರಿದರು. ಸರ್ಕಾರ ಬಂಡತನ ಬಿಟ್ಟು ಸಾರಿಗೆ ನೌಕರರ ಸಮಸ್ಯೆ ಅವರ ಆವೇದನೆ ಆಲಿಸಬೇಕು ಅವರು ಸಹ ಮನುಷ್ಯರೆ ಅವರು ಸಹ ಇಲ್ಲಿಯೇ ಹುಟ್ಟಿ ಬೆಳೆದ ಇಲ್ಲಿನ ಪ್ರಜೆಗಳೆ ಎಂದ ಅವರು ಸರ್ಕಾರ ನಡೆಸುವಂತವರು ಪಂಚೇಂದ್ರಿಯಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು ಎಂದು ಆಕ್ರೋಷದಿಂದ ನುಡಿದರು.
ಮುಂದಿನ ದಿನಗಳಲ್ಲಿ ಹಬ್ಬ ಹರಿದಿನಗಳು ಬರುತ್ತಿದ್ದು ಸಾರಿಗೆ ಮುಷ್ಕರದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಸರ್ಕಾರಕ್ಕೆ ಸಮಸ್ಯೆ ಹೇಳಿ ಪರಿಹಾರ ಕೊಡಿಸಬೇಕಾದ ಅಧಿಕಾರಿಗಳು ಹವಾನಿಂತ್ರಿತ ಕೊಠಡಿಗಳಲ್ಲಿ ಕುಳಿತು ಸಮಯ ಕಳೆಯುತ್ತಿದ್ದಾರೆ ಎಂದು ವಿಷಾಧಿಸಿದರು.
ನೌಕರರ ಮುಷ್ಕರದ ವಿಚಾರದಲ್ಲಿ ಸರ್ಕಾರ ದ್ವಂದ ನೀತಿ ಅನುಸರಿಸುವುದು ಸರಿಯಲ್ಲ ಈಗಾಗಲೆ ಕೆಲ ನೌಕರರನ್ನು ವಜಾಮಾಡಿರುವ ಸರ್ಕಾರ, ನೌಕರರನ್ನು ವರ್ಗಾವಣೆ ಮಾಡಿ ಬೆದರಿಸುವುದು ಹೀಗೆ ನಾನಾ ರಿತಿಯಲ್ಲಿ ಕಿರಕುಳ ನೀಡುವುದು ಸರಿಯಲ್ಲ ಇದು ಹೀಗೆ ಮುಂದುವರೆದರೆ ವಿರೋಧಪಕ್ಷವಾದ ನಾವು ಸುಮ್ಮನೆ ಕುರಲು ಸಾಧ್ಯವಾಗುದಿಲ್ಲ ನಾವು ನಮ್ಮ ಮುಖಂಡ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್,ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆಶೋಕ್,ಡಿಸಿಸಿ ಬ್ಯಾಂಕ್ ನಿರ್ದೇಶಕ ಶಾಗತ್ತೂರು ಸುಧಾಕರ್,ಕೆ.ಕೆ.ಮಂಜು,ದೊರೆಸ್ವಾಮಿರೆಡ್ಡಿ,ರತ್ನಪ್ಪ ಮುಂತಾದವರು ಇದ್ದರು.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16