ಶ್ರೀನಿವಾಸಪುರ:ಪಂಚಾಯಿತಿ ವ್ಯಾಪ್ತಿಯ ನಿವೇಶನಕ್ಕೆ ಸಂಬಂದಪಟ್ಟಂತೆ ಇ-ಖಾತೆ ಮಾಡಿಕೊಡಲು ಗ್ರಾಮಸ್ಥನಿಂದ ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(PDO) ಎಸಿಬಿ ಪೋಲಿಸರ ಬಲೆಗೆ ಬಿದ್ದಿದ್ದಾನೆ.
ತಾಲೂಕಿನ ಲಕ್ಷ್ಮೀಪುರ ಪಂಚಾಯಿತಿಯ ವೆಂಕಟರಾಜು ಎನ್ನುವ ವ್ಯಕ್ತಿ ತನ್ನ ತಂದೆ ಮುನಿವೆಂಕಟಪ್ಪ ಮತ್ತು ಸುಶೀಲಮ್ಮ ತಾಯಿ ಹೆಸರಲ್ಲಿದ್ದ ಗ್ರಾಮದ ವ್ಯಾಪ್ತಿಯ ಕಾಲಿ ನಿವೇಶನಗಳ ಇ-ಖಾತೆ ಮಾಡಿಕೊಡುವ ಸಂಬಂದ ಮಾರ್ಚ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು ಆದರೆ ಅರ್ಜಿಗೆ ಇದುವರಿಗೂ ಯಾವುದೇ ಸ್ವೀಕೃತಿ ಸಹ ನೀಡದೆ ಪಿಡಿಒ ಸತಾಯಿಸುತ್ತಿದ್ದು ಈ ಸಂಬಂದ ಅರ್ಜಿದಾರನ ತಂದೆ ಖುದ್ದು ಪಿಡಿಒ ಶಂಕರಪ್ಪ ಅವರನ್ನು ಭೇಟಿ ಮಾಡಿ ವಿಚಾರಿಸಿದಾಗ ಪಿಡಿಒ ಇ-ಖಾತ ಮಾಡಲು 15 ಸಾವಿರ ಡಿಮ್ಯಾಂಡ್ ಮಾಡಿದ್ದು ಇದಕ್ಕೆ ಅರ್ಜಿದಾರ ಮುನಿವೆಂಕಟಪ್ಪ ತಕ್ಷಣ ಸ್ಥಳದಲ್ಲಿಯೇ 2 ಸಾವಿರ ಹಣವನ್ನು ನೀಡಿರುತ್ತಾರೆ ಉಳಿದ ಹಣ 13 ಸಾವಿರ ತಂದು ಹಣ ತಂದುಕೊಡುವುದಾಗಿ ಹೇಳಿದ್ದು, ಈ ಬಗ್ಗೆ ಅರ್ಜಿದಾರ ಮುನಿವೆಂಕಟಪ್ಪನ ಮಗ ವೆಂಕಟ್ರಾಜು ಜುಲೈ 14 ರಂದು ಕೋಲಾರದ ಎಸಿಬಿ ಪೋಲಿಸರಿಗೆ ದೂರು ನೀಡಿರುತ್ತಾರೆ ಅದರಂತೆ ಉಳಿದ ಹಣ 13ಸಾವಿರವನ್ನು ಲಕ್ಷ್ಮೀಪುರಕ್ರಾಸನಲ್ಲಿರುವ ಮಯೂರಿ ಬಾರ್ ನಿಂದ ಲಕ್ಷ್ಮೀಪುರಕ್ಕೆ ಹೋಗುವ ದಾರಿ ಮದ್ಯ ಇಂದು ಮಂಗಳವಾರ ಪಿಡಿಒ ಶಂಕರಪ್ಪ ಅರ್ಜಿದಾರನಿಂದ ಪಡೆಯುತ್ತಿರುವಾಗ ಎಸಿಬಿ ಪೋಲಿಸರಿಗೆ ಸಿಕ್ಕಿ ಬಿದ್ದಿರುತ್ತಾರೆ.ಎಸಿಬಿ ಡಿವೈಎಸ್ಪಿ ಸುಧೀರ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಡಿಒ ಶಂಕರಪ್ಪನನ್ನು ವಶಕ್ಕೆ ಪಡೆದಿರುತ್ತಾರೆ.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13