![](https://www.vcsnewz.com/wp-content/uploads/2021/03/A0062.jpg)
ಕೋಲಾರ:-ತಾಲೂಕು ವೇಮಗಲ್ ಪಟ್ಟಣದ ಪ್ರಜಾ ಹಿತ ಸೇವಾ ಸಮಿತಿ ಪದಾಧಿಕಾರಿಗಳು 15ನೇ ಶ್ರಮದಾನದ ಅಂಗವಾಗಿ “ನಮ್ಮ ಊರು ನನ್ನ ಸೇವೆ” ಎಂಬ ಘೋಷವಾಕ್ಯ ದೊಂದಿಗೆ ವೇಮಗಲ್ ನ ಸಾರ್ವಜನಿಕ ನೂತನ ಆಸ್ಪತ್ರೆ ಆವರಣ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛತೆ ಮಾಡಿರುತ್ತಾರೆ.
![](https://www.vcsnewz.com/wp-content/uploads/2021/03/IMG-20210315-WA0061.jpg)
ಈ ಸಂಸರ್ಭದಲ್ಲಿ ಮಾತನಾಡಿದ ಪದಾಧಿಕಾರಿಗಳು ನಮ್ಮ ಊರಿನ ಸ್ವಚ್ಚತೆ ನಮ್ಮದೇ ಜವಬ್ದಾರಿ ಊರು ಬೀದಿ ಸ್ವಚ್ಚವಾಗಿದ್ದರೆ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ ಇದಕ್ಕಾಗಿ ನಾವು ಶ್ರಮಾಧಾನದ ಹೆಸರಿನಲ್ಲಿ ಸ್ವಚ್ಚತೆ ಹಾಗು ಗ್ರಾಮದ ಇತರೆ ಉತ್ತಮ ಕೆಲಸ ಕಾರ್ಯಗಳಿಗೆ ಸಹಕಾರ ನೀಡುತ್ತ ಬಂದಿರುವುದಾಗಿ ಹೇಳಿದರು.
ಸಫಲ್ ಶ್ರೀನಿವಾಸ ಮತ್ತು ವೇಮಗಲ್ ಆನಂದ್ ,ಸೂರ್ಯನಾರಾಯಣ ಸ್ವಾಮಿ,ಪೈಂಟಿಂಗ್ ಮುನಿರಾಜು,ಶಿವಕುಮಾರ್ ,ಸಿಸಿಟಿವಿ ನವೀನ್,ಮೂರ್ತಿ,ಯಜಮಾನನಾಗೇಶ್, ದಾಸಪ್ಪ,ರಾಜಗೋಪಾಲ್, ಮಂಜುನಾಥ,ಮಧು, ಬಿ.ಎಂ.ಟಿ.ಸಿ.ರಾಜೇಂದ್ರರವರು, ಶ್ರಮದಾನಿಗಳಾಗಿ ಭಾಗಿಯಾಗಿದ್ದರು.ಆಸ್ಪತ್ರೆಯ ಕ್ಲೀನಿಂಗ್ ಸಿಬ್ಬಂದಿಗೂ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಸುಚಿತ್ವ ಕಾಪಾಡಿಕೊಂಡು ಬರುವಂತೆ ಸೂಚಿಸಿರುತ್ತಾರೆ.
ಸಮುದಾಯಕ್ಕೆ ಮಾದರಿ ವ್ಯವಸ್ಥೆಯಲ್ಲಿ ಯುವಕರು ಯಾರು ಯಾರ ಮಾತು ಕೇಳದೆ ದಾರಿತಪ್ಪುತ್ತಿರುವ ಕಾಲದಲ್ಲಿ ಗ್ರಾಮದ ಸ್ವಚ್ಚತೆಗೆ ಗ್ರಾಮದ ಯುವಕರು ಒಗ್ಗೂಡಿ ಸ್ವಚ್ಚತೆ ಮಂತ್ರ ಪಠಿಸಿರುವುದು ಯುವ ಸಮುದಾಯಕ್ಕೆ ಮಾದರಿ ಎನ್ನಬಹುದು