ಶ್ರೀನಿವಾಸಪುರ :ಪೆಟ್ರೋಲ್ ಹಾಗು ಡೀಸಲ್ ಬಳಕೆಯಿಂದ ಪ್ರಕೃತಿಯ ಮೇಲೆ ತೀವ್ರ ಪರಿಣಾಮ ಬಿರುತ್ತಿದೆ ಪ್ರಕೃತಿಯನ್ನು ಉಳಸಿಕೊಳ್ಳಲು ಪರ್ಯಾಯ ಇಂದನ ಬಳಕೆಗೆ ವಾಹನ ಬಳಕೆದಾರರು ಮುಂದಾಗಬೇಕಿದೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.
ಅವರು ಪಟ್ಟಣದ ಚಿಂತಾಮಣಿ ರಸ್ತೆಯ ರಾಜಧಾನಿ ಪೆಟ್ರೋಲ್ ಬಂಕ್ ನಲ್ಲಿ ಸಿಎನ್ಜಿ ಗ್ಯಾಸ್ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಜಿಪಿ ಸಿ.ಎನ್.ಜಿ ಗ್ಯಾಸ್ ಸಂಸ್ಥೆಯ ಪ್ರಾಂತೀಯ ವ್ಯವಸ್ಥಾಪಕ ವೆಂಕಟೇಶ್ ಮಾತನಾಡಿ ಡೀಸೆಲ್, ಪೆಟ್ರೋಲ್ ಗೆ ಪರ್ಯಾಯವಾಗಿ ಸಿ.ಎನ್.ಜಿ ಬಳಕೆ ಹೆಚ್ಚುತ್ತಿದೆ ಎಂದರು ಸಿ.ಎನ್.ಜಿ ಮೀಥೇನ್ನಿಂದ ಕೂಡಿದ
ನೈಸರ್ಗಿಕ ಅನಿಲವಾಗಿದ್ದು ವಿಶೇಷವಾಗಿ ವಾತಾವರಣ ಕಲುಷಿತಗೊಳಿಸದೆ ಪರಿಣಾಮಕಾಯಾಗಿ ಬಳಸಬಹುದಾಗಿದೆ ಎಂದರು.
ಕೋಲಾರ ಜಿಲ್ಲೆಯಲ್ಲಿ 6 ಸಿ.ಎನ್.ಜಿ ಕೇಂದ್ರಗಳು ಪ್ರಾರಂಭವಾಗಲಿದ್ದು ಪ್ರಥಮ ಕೇಂದ್ರವಾಗಿ ಶ್ರೀನಿವಾಸಪುರದ ರಾಜಧಾನಿ ಬಂಕ್ ನಲ್ಲಿ ನಮ್ಮ ಎಜಿಪಿ ಸಂಸ್ಥೆಯ ಸಿಎನ್ಜಿ ಗ್ಯಾಸ್ ಬಂಕ್ನ್ನು ತೆರೆಯಲಾಗಿದ್ದು, ಅವಶ್ಯಕತೆ ಇರುವವರಿಗೆ
ಸಿ.ಎನ್.ಜಿ ಗ್ಯಾಸ್ ಕಿಟ್ ಅನ್ನು ಸಬ್ಸಿಡಿ ದರದಲ್ಲಿ ಕೊಡಲಾಗುವುದು . ಗ್ರಾಹಕರು ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ರಿಜನಲ್ ಮುಖ್ಯಸ್ಥ ಕೆಆರ್ ವೆಂಕಟೇಶ್ ಮಾತನಾಡಿ ನಮ್ಮ ಕಂಪನಿಯಿಂದ ಗ್ರಾಹಕರ ಗ್ಯಾಸ್ಗೆ ಸಂಬಂದಿಸಿದ ಸಮಸ್ಯೆಗಳನ್ನು ಸ್ಪಂದಿಸುವ ನಿಟ್ಟಿನಲ್ಲಿ 24×7ಅವಧಿಯಲ್ಲಿ ಸೇವೆಗಳನ್ನು ನಮ್ಮ ಸಿಬ್ಬಂದಿಗಳು ಓದಗಿಸಲಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ರಾಜಧಾನಿ ಸಂಸ್ಥೆ ಮುಖ್ಯಸ್ಥ ಮುಜಾಹಿದ್ ಅನ್ಸಾರಿ,ಪುರಸಭೆ ಉಪಾಧ್ಯಕ್ಷೆ ಆಯೀಷನಯಾಜ್, ಸದಸ್ಯ ಏಜಾಜ್ಪಾಷ, ಜಿಲ್ಲಾ ಪಂಚಾಯಿತಿ ಮಾಜಿ ಸದ್ಯಸ ತೂಪಲ್ಲಿ ಆರ್.ನಾರಾಯಣಸ್ವಾಮಿ, ಮುಖಂಡರಾದ ಲಕ್ಷ್ಮಣರೆಡ್ಡಿ,ಮನು,ಎಪಿಜಿ ಗ್ಯಾಸ್ ಕಂಪನಿ ಜಿಲ್ಲಾ ವ್ಯವಸ್ಥಾಪಕ ಎಸ್.ಆರ್.ಅಶಿತ್ ಇನ್ನು ಹಲವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Sunday, March 8



