ಶ್ರೀನಿವಾಸಪುರ:- ಸಂತೇಗಳಲ್ಲಿ ಕುರಿ ವ್ಯಾಪಾರ ಮಾಡುತ್ತಿದ್ದ ಕುರಿ ವ್ಯಾಪಾರಸ್ಥನನ್ನು ಪಟ್ಟಣದ ಹೊರ ವಲಯದ ಮಾವಿನ ತೋಟದಲ್ಲಿ ಕತ್ತು ಕೊಯ್ದು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ನಡೆದಿರುತ್ತದೆ.
ಹತ್ಯೆಯಾದ ವ್ಯಕ್ತಿಯನ್ನು ತಾಲೂಕಿನ ಕಸಬಾ ಹೋಬಳಿ ಗುಂಡಮನತ್ತ ಗ್ರಾಮದ ಮುನಿಶಾಮಿ(65) ಎಂದು ಗುರುತಿಸಲಾಗಿದೆ ಸಂತೇಗಳಲ್ಲಿ ಕುರಿ ವ್ಯಾಪಾರ ಮಾಡುತ್ತಿದ್ದು ವ್ಯಕ್ತಿಯ ಜೇಬಿನಲ್ಲಿ ಸದಾಕಾಲ ಹತ್ತಾರು ಸಾವಿರ ನಗದು ಇರುತಿತ್ತು ಎಂದು ಹೇಳಲಾಗಿದೆ.
ಇಂದು ಗುಂಡಮನತ್ತ ಗ್ರಾಮದ ಮನೆಯಿಂದ ಹೊರಟ ಮುನಿಶಾಮಿ ಮಧ್ಯಾಹ್ನ ಹೊತ್ತಿಗೆ ಬಸ್ ನಿಲ್ದಾಣದ ಬಳಿಯಿಂದ ತಮ್ಮ ಬಂಧು ಯುವಕನ ದ್ವಿಚಕ್ರ ವಾಹನದಲ್ಲಿ ಚಿಂತಾಮಣಿ ವೃತ್ತಕ್ಕೆ ಡ್ರಾಪ್ ಪಡೆದುಕೊಂಡಿದ್ದಾರೆ ನಂತರ ಏನಾಯಿತು ಎಂಬ ಮಾಹಿತಿ ಯಾರಿಗೂ ಇಲ್ಲ ನಂತರ ಸಂಜೆ ಹೊತ್ತಿಗೆ ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗು ಇಂದಿರಾ ನಗರದ ಹಿಂಬಾಗದ ನೂರ್ ಎಂಬುವರ ಮಾವಿನ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದು ಹಂತಕರು ಆತನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿರುವ ಸುದ್ದಿ ಹೊರಬಿದ್ದಿದೆ ಈ ಬಗ್ಗೆ ಮಾಹಿತಿ ಪಡೆದ ಪೋಲಿಸರು ಮುಳಬಾಗಿಲು ಡಿ.ವೈ.ಎಸ್.ಪಿ ಗಿರಿ ಹಾಗು ಪೋಲಿಸ್ ಇನ್ಸ್ ಪೇಕ್ಟರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಶೀಲನೆ ನಡೆಸಿರುತ್ತಾರೆ. ಮೃತನ ಮಗ ಗೋಪಾಲ್ ಈ ಸಂಬಂಧ ಶ್ರೀನಿವಾಸಪುರ ಠಾಣೆಯಲ್ಲಿ ದೂರು ದಾಖಲಿಸಿರುತ್ತಾನೆ.
ಹತ್ಯೆಯಾದ ಸ್ಥಳಕ್ಕೆ ಪೋಲಿಸ್ ಶ್ವಾನಗಳನ್ನು ಕರೆಯಿಸಿದ್ದು ಶ್ವಾನಗಳು ಹತ್ಯೆಯಾದ ಜಾಗದಿಂದ ತೋಟಗಳ ಮದ್ಯೆ ಹಾದು ಚಿಂತಾಮಣಿ-ಕೋಲಾರ ರಸ್ತೆಗಳ ನಡುವಿನ ಬೈಪಾಸ್ ರಸ್ತೆಯಲ್ಲಿ ಸಾಗಿ ಮುಂದೆ ನಂಬಿಹಳ್ಳಿ ಗೆಟ್ ಬಳಿಯವರಿಗೂ ಹೋಗಿ ವಾಪಸ್ಸಾಗಿವೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16