ನ್ಯೂಜ್ ಡೆಸ್ಕ್:ಬೈಟೂ ಕಾಫಿ ನೀಡದ ಹೋಟೆಲ್ ಮೇಲೆ JCB ಮೂಲಕ ದಾಳಿ ಮಾಡಿಸಿದೆ ಮುನ್ಸಿಪಲ್ ಉದ್ಯೋಗಿಯನ್ನು ಅಲ್ಲಿನ ಜಿಲ್ಲಾಧಿಕಾರಿ ವಜಾ ಮಾಡಿರುವ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪ್ರೊದ್ದಟೂರ್ ನಗರದಲ್ಲಿ ನಡೆದಿರುತ್ತದೆ.
ಮುನ್ಸಿಪಲ್ ನಲ್ಲಿ ಹೊರಗುತ್ತಿಗೆ ಉದ್ಯೋಗಿಯೊಬ್ಬ ಸ್ಥಳೀಯ ಹೋಟೆಲ್ ನಲ್ಲಿ ಕಾಫಿ ಕುಡಿಯಲು ಹೋಗಿ ಬೈಟೂ ಕಾಫಿ ಕೇಳಿದ್ದಾನೆ ಅದಕ್ಕೆ ಹೋಟೆಲ್ ಮಾಲಿಕ ಬೈಟೂ ಪದ್ಧತಿ ಇಲ್ಲಾ ಎಂದಿರುತ್ತಾನೆ.ಅದಕ್ಕೆ ಕೊಪಗೊಂಡ ಮುನ್ಸಿಪಲ್ ಉದ್ಯೋಗಿ ಕಚೇರಿಗೆ ವಾಪಸ್ಸು ಹೋಗಿ ಇಲಾಖೆ ಜೆಸಿಬಿ ಕಳಿಸಿ, ಬೈಟೂ ಕಾಫಿ ಇಲ್ಲಾ ಎಂದ ಹೋಟೆಲ್ ಮುಂಭಾಗದ ಅತಿಕ್ರಮಣ ತೆರವು ಮಾಡಿಕೊಂಡು ಬನ್ನಿ ಎಂದು ಸೂಚಿಸಿದ್ದಾನೆ. ಅದರಂತೆ ಜೆಸಿಬಿ ತೆಗೆದುಕೊಂಡು ಹೋದ ಮುನ್ಸಿಪಲ್ ಸಿಬ್ಬಂದಿ ಹೋಟೆಲ್ ಮುಂಭಾಗದಲ್ಲಿ ಕಾರ್ಯಾಚರಣೆಗೆ ಮುಂದಾದಾಗ ಹೋಟೆಲ್ ಮಾಲಿಕ ರಸ್ತೆ ಮೇಲೆ ಮಲಗಿ ಬೇಡಿಕೊಂಡಿದ್ದಾನೆ ಇದನ್ನು ಸ್ಥಳೀಯ ಜನತೆ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ ಜೊತೆಗೆ ಜನರು ತೀವ್ರವಾಗಿ ವಿರೋಧಿಸಿದ್ದಾರೆ. ವಿಷಯ ಮುನ್ಸಿಪಲ್ ಆಯುಕ್ತರ ವರಿಗೂ ತಲುಪಿದೆ ನಂತರ ಜಿಲ್ಲಾಧಿಕಾರಿ ಗಮನಕ್ಕೆ ಹೋಗಿದೆ. ಇದು ದಬ್ಬಾಳಿಕೆ ವರ್ತಿನೆ ಎಂದು ಪರಿಗಣಿಸಿ, ಜಿಲ್ಲಾಧಿಕಾರಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಹೋಟೆಲ್ಗೆ ಜೆಸಿಬಿಯನ್ನು ಕಳುಹಿಸಲು ಹೊರಗುತ್ತಿಗೆ ನೌಕರರನಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪುರಸಭೆಯ ಎಸಿಪಿಗೆ ಚಾರ್ಜ್ ಮೆಮೊ ನೀಡಿ ವಿವರಣೆ ಕೇಳಿದ್ದಾರೆ. ಪುರಸಭೆಯ ಉದ್ಯೋಗಿಯೊಬ್ಬರು ಇಷ್ಟೊಂದು ಪ್ರಭಾವಿಯಂತೆ ವರ್ತಿಸಲು ಹೇಗೆಸಾಧ್ಯ? ಹೋಟೆಲ್ ಮಾಲೀಕರು ಜೆಸಿಬಿಗೆ ಅಡ್ಡಲಾಗಿ ಮಲಗಿದಾಗ ಆಘಾತವಾಗಿದ್ದರೆ ಯಾರು ಜವಾಬ್ದಾರರು ಎಂದು ಕೆಂಡಾಮಂಡಲರಾದ ಜಿಲ್ಲಾಧಿಕಾರಿ ಜೆಸಿಬಿ ಕಳಿಸಿದ ಔಟ್ ಸೋರ್ಸಿಂಗ್ ಉದ್ಯೋಗಿಯನ್ನು ವಜಾ ಗೊಳಿಸಿದ್ದಾರೆ ಎನ್ನಲಾಗಿದೆ.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



