ಮುಳಬಾಗಿಲು:ಮುಳಬಾಗಿಲು ನಗರದ ಮುತ್ಯಾಲಪೆಟೆಯಲ್ಲಿರುವ ಪ್ರಖ್ಯಾತ ಗಂಗಮ್ಮ ದೇವಾಲಯದ ಅವರಣದಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಮಾಡಿರುವ ಘಟನೆ ಮುಂಜಾನೆ ನಸುಕಿನಲ್ಲಿ ನಡೆದಿದೆ.
ದುಷ್ಕರ್ಮಿಗಳಿಂದ ಹತ್ಯೆಯಾದ ವ್ಯಕ್ತಿಯನ್ನು ಮುಳಬಾಗಿಲು ನಗರಸಭೆ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ (50) ಎಂದು ಗುರುತಿಸಲಾಗಿದೆ ನಗರದ ಮತ್ಯಾಲಪೇಟೆಯಲ್ಲಿ ತಮ್ಮ ನಿವಾಸದ ಬಳಿಯಿರುವ ಗಂಗಮ್ಮ ದೇವಾಲಯಕ್ಕೆ ಮುಂಜಾನೆ ೫ ಗಂಟೆ ಸಮಯದಲ್ಲಿ ಜಗನಮೋಹನ್ ರೆಡ್ಡಿ ಹೋಗಿರುತ್ತಾರೆ ಈ ಸಂದರ್ಭದಲ್ಲಿ ಹೊರಗೆ ಕಾಯುತ್ತಿದ್ದ ದುಷ್ಕರ್ಮಿಗಳು ರೆಡ್ಡಿ ಮೇಲೆ ಲಾಂಗು, ಮಚ್ಚುಗಳಿಂದ ದಾಳಿಮಾಡಿ ಕೊಲೆಗೈದು ಪರಾರಿಯಾಗಿರುತ್ತಾರೆ.
ಪೂಜೆ ಮಾಡುಲು ಹೋಗಿದ್ದರು
ಜಗನ್ ಮೋಹನ್ ರೆಡ್ಡಿ ಗಂಗಮ್ಮನಿಗೆ ಪೂಜೆ ಸಲ್ಲಿಸಲು ಹೋಗಿದ್ದು ಪೂಜೆ ಮುಗಿಸಿ ಹೊರಬರುತ್ತಿದ್ದಂತೆ ಆತನ ಮೇಲೆ ಎರಗಿರುವ ದುಷ್ಕರ್ಮಿಗಳು ಮರಾಕಾಸ್ತ್ರಗಳಿಂದ ಹತ್ಯೆಮಾಡಿರುತ್ತಾರೆ. ಹತ್ಯೆಯ ದೃಶ್ಯಾವಳಿಗಳು ಸ್ಥಳೀಯ ಸಿಸಿ ಕೆಮೆರಾಗಳಲ್ಲಿ ಸೆರೆಯಾಗಿದೆ ಎನ್ನಲಾಗುತ್ತಿದೆ.
ಮುಳಬಾಗಲು ತಾಲೂಕು ಆವಣಿ ಮೂಲದವರಾದ ಜಗನ್ ಮೋಹನ್ ರೆಡ್ಡಿ ಎರಡನೆ ಬಾರಿಗೆ ನಗರಸಭಾ ಸದಸ್ಯನಾಗಿ ಮಾಜಿ ಶಾಸಕ ಕೊತ್ತೂರು ಮಂಜುನಾಥ ಆಪ್ತನಾಗಿದ್ದ ಹಾಗು ಹಾಲಿ ಶಾಸಕ ಎಚ್.ನಾಗೇಶ್ ಜೊತೆಗೂ ರಾಜಕೀಯ ನಂಟು ಹೊಂದಿದ್ದ
ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ರೀತಿಯ ಸೆಟ್ಲಮೆಂಟ್ ಗಳಲ್ಲಿ ತೊಡಗಿಸಿಕೊಂಡಿದ್ದ ಪೋಲಿಸ್ ದಾಖಲೆಗಳಲ್ಲೂ ಇತನ ಬಗ್ಗೆ ಕ್ರಿಮಿನಲ್ ಪ್ರಕರಣಗಳಲ್ಲಿವೆ ಎನ್ನುತ್ತಾರೆ ಪೋಲಿಸರು.
ಶವವನ್ನು ಕೋಲಾರದ ಜಾಲಪ್ಪ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಹತ್ಯೆ ಹಿನ್ನಲೆಯಲ್ಲಿ ಮುಳಬಾಗಲು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Tuesday, September 17