ಸಿನಿಮಾ ಶೈಲಿಯಲ್ಲಿ ಶಾಸಕನೊಬ್ಬ ತಮ್ಮ ಹಿಂಬಾಲಕರೊಂದಿಗೆ ಮಾಜಿ ಶಾಸಕನ ಮನೆಗೆ ಹೋಗಿ ಅಲ್ಲಿದ್ದವರ ಮೇಲೆ ಹಲ್ಲೆ ನಡೆಸಿರುವ ಘಟನೆ ಆಂಧ್ರಪ್ರದೇಶದ ತಾಡಪತ್ರಿ ಪಟ್ಟಣದಲ್ಲಿ ನಡೆದಿರುತ್ತದೆ.
ಮಾಜಿ ಶಾಸಕನ ಮನೆಯಲ್ಲಿ ಹಾಲಿ ಶಾಸಕ ಕುಳಿತಿದ್ದ ಎನ್ನಲಾದ ಸೋಫಾ ಅನ್ನು ರಸ್ತೆಗೆಸೇದು ಸುಟ್ಟು ಹಾಕಿದರಂತೆ
.
ನ್ಯೂಸ್ ಡೆಸ್ಕ್: ಅಂಧ್ರಪ್ರದೇಶದ ಅನಂತಪುರ ಜಿಲ್ಲೆ ಸೇರಿದಂತೆ ರಾಯಲಸೀಮೆ ಭಾಗದಲ್ಲಿ ಫ್ಯಾಕ್ಷನ್ ರಾಜಕೀಯಕ್ಕೆ ಹೆಸರುವಾಸಿ ಎಲ್ಲವನ್ನೂ ರಾಜಕೀಯ ದೃಷ್ಠಿ ಕೋನದಿಂದ ನೋಡುವುದು ರಾಜಕೀಯದೊಂದಿಗೆ ತಾಳೆಹಾಕಿಕೊಂಡು ದಾಳಿ ಪ್ರತಿದಾಳಿ ನಡೆಸುವುದು ಇಲ್ಲಿ ಸಾಮಾನ್ಯ ಯಾರಿಗೂ ಯಾರು ಕಡಿಮೆ ಇರುವುದಿಲ್ಲ ಎಲ್ಲವೂ ಫಾಕ್ಷನ್ ಹೋಡೆದಾಟಗಳೇ ಹಾಗೆಯೇ ಗುರುವಾರ ಅನಂತಪುರ ಜಿಲ್ಲೆಯ ತಾಡಿಪತ್ರಿ ಪಟ್ಟಣದಲ್ಲಿ ಎರಡು ರಾಜಕೀಯ ಕುಟುಂಬಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ನಡೆದ ಸಂಭಾಷಣೆ ಹಾಲಿ ಶಾಸಕ ಪೆದ್ದರೆಡ್ಡಿ ಹಾಗು ಮಾಜಿ ಶಾಸಕ ಜೆಸಿ ಪ್ರಭಾಕರರೆಡ್ಡಿ ನಡುವೆ ಯುದ್ಧದ ವಾತಾವರಣವನ್ನೇ ಸೃಷ್ಠಿಸಿದಿಯಂತೆ,
ಶಾಸಕ ಕೇತಿರೆಡ್ಡಿ ಪೆದ್ದಾರೆಡ್ಡಿ ಮಾಜಿ ಶಾಸಕ ಜೆಸಿ ಪ್ರಭಾಕರಡ್ಡಿ
ತಾಡಪತ್ರಿಯ ಯೈ.ಸಿ.ಪಿ ಪಕ್ಷದ ಹಾಲಿ ಶಾಸಕ ಕೇತಿರೆಡ್ಡಿ ಪೆದ್ದಾರೆಡ್ಡಿ ತನ್ನ ರಾಜಕೀಯ ಎದುರಾಳಿ ದಿವಾಕರ ಟ್ರಾವಲ್ಸ್ ಮಾಲಿಕ,ತೆಲಗುದೆಶಂ ಪಕ್ಷದ ಮಾಜಿ ಶಾಸಕ ಜೆಸಿ ಪ್ರಭಾಕರಡ್ಡಿ ಅವರ ಮನೆಯ ಮೇಲೆ ತಮ್ಮ ಅನುಚರರೊಂದಿಗೆ ಮಾರಕಾಸ್ತ್ರಗಳೊಂದಿಗೆ ಹೋಗಿ ಮೇಲೆ ದಾಳಿ ಮಾಡಿರುತ್ತಾರೆ,ಈ ಸಂದರ್ಭದಲ್ಲಿ ಮಾಜಿ ಶಾಸಕ ಮನೆಯಲ್ಲಿ ಇರಲಿಲ್ಲವಾದರು ಮನೆಯಲ್ಲಿದ್ದ ಕೆಲಸದವರು ಮತ್ತು ಇತರರ ಮೇಲೆ ಹಲ್ಲೆ ಮಾಡಿರುವುದಾಗಿ ಹೇಳಲಾಗಿದೆ.
ವಿಷಯ ತಿಳಿದ ಮಾಜಿ ಶಾಸಕ ಜೆ.ಸಿ.ಪ್ರಭಾಕರ್ ರೆಡ್ಡಿ ಮತ್ತು ಅವರ ಪುತ್ರ ಅಸ್ಮಿತ್ ರೆಡ್ಡಿ ತಾಡಪತ್ರಿಗೆ ಬಂದಿರುತ್ತಾರೆ, ಕೆಂಡಮಂಡಲವಾಗಿದ್ದಾರೆ ನಂತರ ಘಟನೆಯನ್ನು ಗಂಭೀರವಾಗಿ ತಗೆದುಕೊಂಡ ಅವರು ನಾವು ಇಲ್ಲದ ಸಮಯದಲ್ಲಿ ನಮ್ಮ ಮನೆ ಮೇಲೆ ದಾಳಿಮಾಡಿರುವ ಅವನೇಷ್ಟು ಗಂಡಸು ಎಂದು ಮಾಧ್ಯಮಗಳ ಮುಂದೆ ಕೂಗಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮರಳು ದೊರೆತಿಲ್ಲ ವಿಚಾರದಲ್ಲಿ ಯಾರೊ ಮಾತನಾಡಿರುವ ವಿಚಾರವನ್ನು ಇಟ್ಟುಕೊಂಡು ನನ್ನ ಮನೆಯ ಮೇಲೆ ದಾಳಿ ನಡೆಸಿರುವುದು ತರವಲ್ಲ ಎಂದಿರುವ ಜೆಸಿ ಘಟನೆ ಬಗ್ಗೆ ನನ್ನ ಮನೆಯ ಸಿಸಿ ಕ್ಯಾಮರ ಫೂಟೇಜ್ ತೆಗೆದುಕೊಂಡು ಹಾಲಿ ಶಾಸಕನ ವಿರುದ್ದ ಸುಮೊಟೊ ಪ್ರಕರಣ ದಾಖಲಿಸಿ.ಎಂದು ಜೆಸಿ ಪ್ರಭಾಕರ್ ರೆಡ್ಡಿ ಅಗ್ರಹಿಸಿರುತ್ತಾರೆ.ಸಿಸಿ ಕ್ಯಾಮರ ಫೂಟೇಜ್ ಅವುಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ ಎಂದಿರುತ್ತಾರೆ.
ಇಷ್ಟಕ್ಕೂ ಜಾಲ ತಾಣದಲ್ಲಿ ಅಗಿರುವುದಾದರೂ ಏನು?
ತಾಡಿಪತ್ರಿಯಲ್ಲಿ ರಾಜಕೀಯವಾಗಿ ಜೆಸಿ ಮತ್ತು ಮತ್ತು ಪೆದ್ದಾರೆಡ್ದಿ ನಡುವಿನ ರಾಜಕೀಯ ವೈಷಮ್ಯ ಇಂದು ನೆನ್ನೆಯದಲ್ಲ ಇದುವರಿಗೂ ಹೇಳಿಕೆ ಪ್ರತಿಹೇಳಿಕೆಗಷ್ಟೆ ಮೀಸಲಾಗಿದ್ದ ವಿಚಾರ, ನಾಯಕರು ಮನೆಗಳ ಮೇಲೆ ನೇರವಾಗಿ ದಾಳಿ ನಡೆಸುತ್ತಿರುವುದು ಮಾತ್ರ ಇದೇ ಮೊದಲು. ಹಾಲಿ ಶಾಸಕ ಪೆದ್ದಾರೆಡ್ಡಿ ಪತ್ನಿ ವಿಚಾರವಾಗಿ ಟಿಡಿಪಿ ಸೋಷಿಯಲ್ ಮೀಡಿಯಾದಲ್ಲಿ ಮರಳು ದಂದೆ ವಿಷಯ ತೀವ್ರವಾಗಿ ಪ್ರಚಾರವಾಗುತ್ತಿದ್ದು ಇಬ್ಬರು ವ್ಯಕ್ತಿಗಳ ಸಂಭಾಷಣೆ ಸಹಿಸದ ಕಾರಣ ಶಾಸಕ ಪೆದ್ದಾರೆಡ್ಡಿ ನೇರವಾಗಿ ಜೆಸಿ ಮನೆಯ ಮೇಲೆ ದಾಳಿಗೆ ಮುಂದಾಗಿದ್ದಾರೆ ಎಂದು ಹೇಳಲಾಗಿದ್ದು ಮೊಬೈಲ್ ಸಂಭಾಷಣೆಯಲ್ಲಿ ಮಾತನಾಡಿರುವ ವ್ಯಕ್ತಿ ವಲ್ಲಿ ಆಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಶಾಸಕರ ಪತ್ನಿ ಒಂದು ಮರಳು ಬಂಡಿಗೆ 10 ಸಾವಿರ ಕೇಳುತ್ತಿದ್ದಾರೆ ಎಂಬ ಮಾತುಗಳು ಶಾಸಕ ಪೆದ್ದಾರೆಡ್ಡಿ ಕೋಪಕ್ಕೆ ಕಾರಣ ಎನ್ನಲಾಗಿದೆ ವಲ್ಲಿ ಮೂಲತಃ ಮಾಜಿ ಶಾಸಕ ಜೆಸಿ ಅನುಯಾಯಿಗಳಾಗಿದ್ದರಿಂದ ದಾಳಿಗೆ ಕಾರಣವಾಗಿದೆ ಎಂಬ ಮಾತು ಕೇಳಿಬಂದಿದೆ.ಈ ಕುರಿತು ಹೆಚ್ಚಿನ ಮಾಹಿತಿ ಇನ್ನೂ ತಿಳಿದುಬಂದಿಲ್ಲ.