ಶ್ರೀನಿವಾಸಪುರ:ಕಲ್ಲೂರಿನ ಗ್ರಾಮದೇವತೆ ಚೌಡೇಶ್ವರಿದೇವಿ ದರ್ಶನ ಪಡೆದು ಪುನೀತನಾದೆ ಅಮ್ಮನ ದರ್ಶನದಿಂದ ನೆಮ್ಮದಿ ಸಿಕ್ಕಿದಂತಾಗಿದೆ ಇದು ನನ್ನ ಪುಣ್ಯ ಎಂದು ತೋಟಗಾರಿಕೆ ಹಾಗು ಕೋಲಾರ ಜಿಲ್ಲೆ ಉಸ್ತವಾರಿ ಸಚಿವ ಮುನಿರತ್ನ ಹೇಳಿದರು ಅವರು ತಾಲೂಕಿನ ಕಸಬಾ ಹೋಬಳಿ ಕಲ್ಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾತನಾಡಿ ನವೀಕರಣವಾಗುತ್ತಿರುವ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಬೇಕಾದ ರಸ್ತೆ, ಹೈಮಾಸ್ಕ್ ಲೈಟ್ ಸೇರಿದಂತೆ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.
ಬೆಂಗಳೂರಿನಲ್ಲಿ ಖ್ಯಾತರಾಗಿರುವ ಎಂಡೋಕ್ರೈನಾಲಜಿ ತಜ್ಞ ವೈದ್ಯ ಕಲ್ಲೂರು ಮೂಲದ ಡಾ.ಸೋಮಶೇಖರರೆಡ್ಡಿ ನಮ್ಮ ಕುಟುಂಬಕ್ಕೆ ಆಪ್ತರು ಅವರು ನೀಡಿದ ಆಹ್ವಾನದ ಮೇರೆಗೆ ಇಂದು ಗ್ರಾಮಕ್ಕೆ ಬೇಟಿ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಸಚಿವರನ್ನು ಗೌರವಿಸಿದರು. ತಹಸೀಲ್ದಾರ್ ಶರೀನ್ತಾಜ್,ಬಿಜೆಪಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಸಚಿವರ ಆಪ್ತ ಡಾ.ಸೋಮಶೇಖರರೆಡ್ಡಿ,ತಾಲೂಕು ಬಿಜೆಪಿ ಅಧ್ಯಕ್ಷ ಅಶೋಕ್ರೆಡ್ಡಿ, ಮುಖಂಡರಾದ ಲಕ್ಷ್ಮಣಗೌಡ,ರಾಮಾಂಜಿ,ರೋಣೂರುಚಂದ್ರು, ಎ.ವೆಂಕಟರೆಡ್ಡಿ, ಕೆ.ಕೆ.ಮಂಜು, ನಿವೃತ್ತ ಉಪನ್ಯಾಸಕ ವಿಚೌಡರೆಡ್ಡಿ ಚಂದ್ರಶೇಖರ್, ಸೀತಾರಾಮರೆಡ್ಡಿ,ಫಾರೆಸ್ಟರ್ಅಶ್ವತ್ಥರೆಡ್ಡಿ ನಾರಾಯಣಸ್ವಾಮಿ, ರತ್ನಪ್ಪ, ರಾಮಕೃಷ್ಣಾರೆಡ್ಡಿ ಮುಂತಾದವರು ಇದ್ದರು.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



