ತಿರುಪತಿ:- ಮದನಪಲ್ಲಿ-ತಿರುಪತಿ ಮಾರ್ಗದಲ್ಲಿರುವ ಭಾಕರಪೇಟ ಘಾಟ್ ರಸ್ತೆಯ ತಿರುವಿನಲ್ಲಿ ಮದುವೆ ದಿಬ್ಬಣದ ಬಸ್ಸು ಬಿದ್ದು ಭಿಕರ ಅಪಘಾತವಾಗಿದೆ.
ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಧರ್ಮಾವರಂನಿಂದ ಮದುವೆ ನಿಶ್ಚಿತಾರ್ಥಕ್ಕೆ ಮದನಪಲ್ಲಿ ಮೂಲಕ ತಿರುಪತಿಗೆ ಹೊರಟಿದ್ದ ಖಾಸಗಿ ಬಸ್ ಭಾಕರಪೇಟ ಘಾಟ್ ರಸ್ತೆಯ ತಿರುವಿನಲ್ಲಿ ಶನಿವಾರ ನಡು ರಾತ್ರಿಯಲ್ಲಿ ನೂರು ಅಡಿ ಆಳದ ಪ್ರಪಾತಕ್ಕೆ ಬಿದ್ದಿದೆ ಈ ಅಪಘಾತದಲ್ಲಿ ಸುಮಾರು 8 ಮಂದಿ ಮೃತಪಟ್ಟಿರಬಹುದು ಎನ್ನಲಾಗಿದೆ.
ಅಪಘಾತವಾಗಿ ಸುಮಾರು ಎರಡು ಘಂಟೆಗಳ ನಂತರ ಅಪಘಾತ ವಿಷಯ ಹೊರಜಗತ್ತಿಗೆ ತಿಳಿದಿರುತ್ತದೆ. ಕಡಿದಾದ ಬೆಟ್ಟಗಳು ಮತ್ತು ಕಣಿವೆಗಳ ನಡುವೆ ಹಾದು ಹೋಗುವ ಘಾಟ್ ರಸ್ತೆಯಲ್ಲಿ ಯಾವುದೇ ಸೆಲ್ ಫೋನ್ ಸಿಗ್ನಲ್ ಸಿಗುವುದಿಲ್ಲ ಪ್ರಪಾತಕ್ಕೆ ಬಿದ್ದ ಬಸ್ನಲ್ಲಿದ್ದ ಐದು ಜನ ಪ್ರಯಾಣಿಕರು ನಡುರಾತ್ರಿಯಲ್ಲಿ ಅಷ್ಟಕಷ್ಟಗಳನ್ನು ಬಿದ್ದು ಪ್ರಯಾಸದಿಂದ ಆಳದಿಂದ ಮೆಲೆ ಹತ್ತಿ ಮುಖ್ಯರಸ್ತೆಗೆ ಬಂದು ದಾರಿಯಲ್ಲಿ ಹೋಗುತ್ತಿದ್ದ ವಾಹನ ಚಾಲಕರ ಸಹಾಯದಿಂದ ಭಾಕರಪೇಟೆಯ ಹೊರವಲಯದ ಚೆಕ್ಪೋಸ್ಟ್ ಪೋಲಿಸ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಪೋಲಿಸರ ಬಳಿಯಿದ್ದ ಬ್ಯಾಟರಿ ಬೆಳಕಿನಲ್ಲಿ ಬಸ್ ಅಪಘಾತವಾದ ಸ್ಥಳವನ್ನು ತಲುಪಿ ಹಗ್ಗ ಕಟ್ಟಿಕೊಂಡು ಆಳದಲ್ಲಿ ಇಳಿದು ಗಾಯಾಳುಗಳನ್ನು ಒಬ್ಬೊಬ್ಬರನ್ನಾಗಿ ರಸ್ತೆಗೆ ಸಾಗಿಸಿರುತ್ತಾರೆ.
ಕಗ್ಗತಲ ಕಣಿವೆಯಲ್ಲಿ ಬದುಕಿದವರ ಅರಣ್ಯರೋಧನ!
ಕೊನೆಯ ಮಾಹಿತಿ ಬಂದಾಗ 46 ಮಂದಿ ಗಾಯಾಳುಗಳನ್ನು ತಿರುಪತಿ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.
ಭಾಕರಪೇಟ ಘಾಟ್ ರಸ್ತೆಯಲ್ಲಿ ಅಪಘಾತ ನಡೆದ ಸ್ಥಳ ರಣಭಯಾನಕವಾಗಿದೆ. ಬಸ್ಸು ನೂರಾರು ಅಡಿ ಆಳದ ಕಣಿವೆಗೆ ಬಿದಿದ್ದು ಬಿದ್ದ ಬಸ್ಸು ಕಣಿವೆಯಲ್ಲಿರುವ ಕಲ್ಲುಬಂಡೆಗಳ ಮೆಲೆ ಬಿದ್ದ ಕಾರಣ ಬಾರಿ ಶಬ್ದವಾಗಿದೆ ಜೊತೆಗೆ ಅಪಘಾತ ತೀವ್ರತೆ ಸಹ ಹೆಚ್ಚಾಗಿದೆ. ಸಣ್ಣಪುಟ್ಟದಾಗಿ ಗಾಯಗೊಂಡವರು ಧೈರ್ಯದಿಂದ ಬಸ್ಸಿನಿಂದ ತಾವಾಗಿಯೇ ಹೊರಬಂದರಾದರೂ ಕಗ್ಗತ್ತಲ ಕಾಡಿನಲ್ಲಿ ಕಲ್ಲು, ಪೊದೆ,ಮರಗಳ ಅಡ್ಡ ಇದ್ದ ಕಾರಣ ಎಡವಿ ಬಿದ್ದು ಎದ್ದು ಗಾಯಗೊಂಡು ಅಸಾಯಕರಾಗಿ ಕೂಗಾಡಿದ್ದಾರೆ. ಅತ್ತು ಸುಮ್ಮನಾಗಿದ್ದಾರೆ.
ಧರ್ಮಾವರಂನಿಂದ ಮಧ್ಯಾಹ್ನ 3.30 ಕ್ಕೆ ಹೊರಟಿದ್ದ ಬಸ್ (ಬಸ್ ಸಂಖ್ಯೆ ಕೆಎಲ್ 30 ಎ-4995) ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಸಾಗಿದ್ದ ರಾತ್ರಿ 9.30ರ ಸುಮಾರಿಗೆ ಭಾಕರಪೇಟೆ ಪೆಟ್ರೋಲ್ ಬಂಕ್ ನಲ್ಲಿ ಬಸ್ ನಿಲ್ಲಿಸಿ ಡೀಸೆಲ್ ಹಿಡಿಸಿದ್ದಾರೆ ಈ ಸಂದರ್ಭದಲ್ಲಿ ಬಸ್ ಅತಿ ರಭಸವಾಗಿ ಹೋಗುತ್ತಿದ್ದುದನ್ನು ಸ್ಥಳೀಯರು ಗಮನಿಸಿದ್ದಾರೆ. ಭಾಕರಪೇಟ ದಾಟಿದ ನಂತರ ಘಾಟ್ನಲ್ಲಿ ಬಸ್ ಕೂಡ ವೇಗವಾಗಿ ಚಲಿಸಿದಾಗ ಹಳಿತಪ್ಪಿ ಕಣಿವೆಗೆ ಬಿದ್ದಿದೆ ಎಂದು ಶಂಕಿಸಲಾಗಿದೆ. ಚಾಲಕ ಕುಡಿದ ಅಮಲಿನಲ್ಲಿ ಬಸ್ ಚಲಾಯಿಸುತ್ತಿದ್ದ ಎನ್ನಲಾಗುತ್ತಿದೆ, 200 ಕ್ಕೂ ಹೆಚ್ಚು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಚರಣೆ ಮೂಲಕ ಗಾಯಳುಗಳನ್ನು ಮತ್ತು ಮೃತ ದೆಹಗಳನ್ನು ಅಪಘಾತ ಸ್ಥಳದಿಂದ ಸಾಗಿಸಿರುತ್ತಾರೆ. ಚಿತ್ತೂರು ಜಿಲ್ಲಾಧಿಕಾರಿ ಹರಿನಾರಾಯಣನ್ ಮತ್ತು ತಿರುಪತಿ ನಗರ ಎಸ್ಪಿ ವೆಂಕಟ ಅಪ್ಪಲನಾಯುಡು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯಾಚರಣೆಯನ್ನು ಖುದ್ದು ಮೇಲ್ವಿಚಾರಣೆ ನಡೆಸಿದರು. ಮೃತ ಪಟ್ಟ ಕುಟುಂಬಗಳಿಗೆ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಲಾ ಎರಡು ಲಕ್ಷ ನಗದು ಪರಿಹಾರ ಗೋಷಿಸಿದ್ದಾರೆ.
Breaking News
- ನಾಗಮಂಗಲ ಗಲಭೆ ಸಂಬಂಧ ಕೇರಳದ ಇಬ್ಬರ ಬಂಧನ!
- J&Kಚುನಾವಣೆ ವೇಳೆ ಎನ್ಕೌಂಟರ್ ಮೂವರು ಉಗ್ರರ ಹತ್ಯೆ ಇಬ್ಬರು ಸೈನಿಕರ ವೀರ ಮರಣ!
- BIGSHOK ಏರಿಕೆಯಾದ ಅಡುಗೆ ಎಣ್ಣೆ ರೇಟು!
- ಶ್ರೀನಿವಾಸಪುರದ KSRTC ಗಣೇಶ ವಿಸರ್ಜನೆ
- ಶ್ರೀನಿವಾಸಪುರದ ಯುವಕ ಗೋಕರ್ಣದಲ್ಲಿ ಸಮುದ್ರದಪಾಲು
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
Monday, September 16