ಶ್ರೀನಿವಾಸಪುರ: ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಅವರ ಇನೋವಾ ಕಾರು ಬೈಕ್ ಸವಾರನಿಕೆ ಡಿಕ್ಕಿ ಹೋಡೆದ ಪರಿಣಾಮ ವ್ಯಕ್ತಿಯೋಬ್ಬ ಸಾವನಪ್ಪಿರುವ ಘಟನೆ ತಾಲೂಕಿನ ಚಿಂತಾಮಣಿ ರಸ್ತೆಯ ಪಾತಪಲ್ಲಿ ಬಳಿ ಬಳಿ ನಡೆದಿರುತ್ತದೆ.
ಮೃತ ವ್ಯಕ್ತಿಯನ್ನು ಪಾತಪಲ್ಲಿ ಗ್ರಾಮದ ಕಾಂಗ್ರೆಸ್ ಮುಖಂಡರಾಗಿದ್ದ ದಿವಂಗತ ಗುಡಿರೆಡ್ದಿ ಸಹೋದರ ರಾಜಣ್ಣ(62)ಎಂದು ಗುರುತಿಸಲಾಗಿದೆ ಮೃತ ವ್ಯಕ್ತಿ ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿರುವಾಗ ಅತಿ ವೇಗದಿಂದ ಬಂದಂತ ಇನೋವಾಕಾರು ಡಿಕ್ಕಿಯಾಗಿದೆ ಈ ಸಂದರ್ಭದಲ್ಲಿ ಇನೊವಾಕಾರಿನಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಇದ್ದು ಅವರು ಶ್ರೀನಿವಾಸಪುರದಿಂದ ಚಿಂತಾಮಣಿಗೆ ತೆರಳುತ್ತಿದ್ದಾಗ ಅಪಘಾತ ವಾಗಿದ್ದು ಈ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲೆ ಪ್ರಕರಣ ದಾಖಲಾಗಿದೆ.
ಅಪಘಾತ ವಾಗುತ್ತಿದ್ದಂತೆ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಕಾರಿನಲ್ಲಿದ್ದ ಡಾ.ವೇಣುಗೋಪಾಲ್ ಅಲ್ಲೆ ಇದ್ದು ಮೃತ ವ್ಯಕ್ತಿಯ ಕುಟುಂಬಕ್ಕೆ ಸ್ವಾಂತಾನ ಹೇಳಿ ಪಂಚನಾಮೆ ಅಗುವ ವರಿಗೂ ಪಾತಪಲ್ಲಿಯಲ್ಲೆ ಉಳಿದಿದ್ದರು.
ರಾಷ್ಟ್ರೀಹೆದ್ದಾರಿ ಇಲಾಖೆ ನಿರ್ಲಕ್ಷ್ಯ!
ಶ್ರೀನಿವಾಸಪುರ-ಚಿಂತಾಮಣಿ ನಡುವಿನ ರಸ್ತೆ ರಾಷ್ಟ್ರೀಯ ಹೆದ್ದಾರಿ 234ರಲ್ಲಿ ಇತ್ತಿಚಿಗೆ ಅಂತರಾಜ್ಯ ವಾಹನ ದಟ್ಟಣೆ ಹೆಚ್ಚಾಗಿದೆ ವಿಶೇಷವಾಗಿ ಈ ರಸ್ತೆಯಲ್ಲಿ ಎಲ್ಲಿಯೂ ರಸ್ತೆ ಉಬ್ಬುಗಳಿಲ್ಲ ರಾಷ್ಟ್ರೀಯ ಹೆದ್ದಾರಿ ಅಗಿರುವ ಹಿನ್ನಲೆಯಲ್ಲಿ ವಾಹನಗಳಿಗೆ ವೇಗದ ಮೀತಿ ಇಲ್ಲದೆ ವಾಹನಗಳು ಅತಿವೇಗದಿಂದ ಸಾಗುತ್ತಿರುವುದು ಸಾಮನ್ಯವಾಗಿದೆ ವಿಶೇಷವಾಗಿ ಪಾತಪಲ್ಲಿ ಗೇಟ್ ಬಳಿ 4-5 ಹಳ್ಳಿಗಳು ಕೂಡುವ ವೃತ್ತವಾಗಿದ್ದು ಕೋಲಾರ ಭಾಗದಿಂದ ಬರುವಂತ ವಾಹನಗಳು ಚಿಂತಾಮಣಿ ತಾಲೂಕಿನ ಉತ್ತರಭಾಗದ ಹಳ್ಳಿಗಳಿಗೆ ಸಾಗಲು ಈ ವೃತ್ತದಿಂದ ಹೋದರೆ ಕಿಲೊಮಿಟರ್ ಕಡಿಮೆಯಾಗುತ್ತದೆ ಎಂದು ಇಲ್ಲಿ ರಸ್ತೆ ದಾಟುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿದ್ದು ಈ ಸ್ಥಳವನ್ನು ರಾಷ್ಟ್ರೀಹೆದ್ದಾರಿ ಇಲಾಖೆಯವರು ಯಾವುದೆ ರಸ್ತೆ ನಿಯಮಾವಳಿಗಳ ಮಾರ್ಗ ಸೂಚಿ ನಿರ್ಮಿಸದೆ ನಿರ್ಲಕ್ಷಿಸಿರುತ್ತಾರೆ ಜೊತೆಗೆ ಪೋಲಿಸ್ ಇಲಾಖೆಯವರು ಸಹ ವೇಗದ ಮೀತಿ ನಿಗದಿ ಗೊಳಿಸಲು ಯಾವುದೆ ಬ್ಯಾರಿಕೇಡ್ ಗಳನ್ನು ಸ್ಥಾಪಿಸದೆ ಇರುವುದು ಅಪಘಾತಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಾರೆ.