ಶ್ರೀನಿವಾಸಪುರ:-ವಿಧಾಸಭೆಯಲ್ಲಿ ಮಾಜಿ ಸ್ಪೀಕರ್ ಹಾಲಿ ಶಾಸಕ ರಮೇಶ್ ಕುಮಾರ್ ಅತ್ಯಾಚಾರ ಕುರಿತಾಗಿ ನೀಡಿರುವಂತ ಹೇಳಿಕೆ ವಿರುದ್ದ ಶ್ರೀನಿವಾಸಪುರ ಪಟ್ಟಣದಲ್ಲಿ ಜೆಡಿಎಸ್ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ರಾಜ್ಯ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭಿಮಗುಂಟಪಲ್ಲಿಶಿವಾರೆಡ್ಡಿ ನೇತೃತ್ವದಲ್ಲಿ ದೊಡ್ಡಸಂಖ್ಯೆಯಲ್ಲಿ ಕಾರ್ಯಕರ್ತರು ಜೆಡಿಎಸ್ ಕಚೇರಿ ಇರುವ ಕುವೆಂಪು ವೃತ್ತದಿಂದ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಹೊರಟು ಬಸ್ ನಿಲ್ದಾಣದ ಬಳಿ ರಮೇಶ್ ಕುಮಾರ್ ಪ್ರತಿಕೃತಿಯನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಕ್ಷೇತ್ರದ ಮತದಾರ ತಲೆತಗ್ಗಿಸುವಂತಾಗಿದೆ
ಈ ಸಂದರ್ಭದಲ್ಲಿ ವಕೀಲ ಶಿವಪ್ಪ ಮಾತನಾಡಿ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಮಹಿಳೆಯರ ಕುರಿತಾಗಿ ವಿಧಾನಸಭೆಯಲ್ಲಿ ಅಗೌರವವಾಗಿ ಮಾತನಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ, ಅವರ ಮೂರ್ಖತನದ ಮಾತು ಇಡಿ ಸ್ತ್ರೀ ಸಮೂಹ ನೋವುಂಡುವಂತಾಗಿದೆ ಅಷ್ಟೆ ಅಲ್ಲ ಶ್ರೀನಿವಾಸಪುರ ಕ್ಷೇತ್ರದ ಮತದಾರರ ಗೌರವಕ್ಕೆ ಧಕ್ಕೆ ತರುವಂತಿದೆ ಎಂದು ಶಾಸಕ ರಮೇಶ್ ಕುಮಾರ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರ ವಿಚಾರವಾಗಿ ಕೆಟ್ಟದಾಗಿ ವರ್ತಿಸುವಂತ ತಿಳಿಗೆಡಿ ದುರ್ಮಾರ್ಗಿಗಳಿಗೆ ಅವರ ಹೇಳಿಕೆ ಪುಷ್ಟಿ ನೀಡುವಂತಿದೆ. ತಾನೇ ಮೆಧಾವಿ ಎನ್ನುವ ಶಾಸಕ ಮಹಿಳೆಯರ ಸಂಕಷ್ಟ ನೋವು ಸಂವೇದನೆ ಅರ್ಥವಾಗುದಿಲ್ಲವ ಎಂದು ಪ್ರಶ್ನಿಸಿದರು.
ರಮೇಶ್ ಕುಮಾರ್ ಹೇಳಿಕೆ ಕುರಿತಾಗಿ ಕಾಂಗ್ರೆಸ್ ರಾಷ್ಟ್ರೀಯ ಮುಖಂಡರಾದ ಪ್ರಿಯಾಂಕಾಗಾಂಧಿಯವರು ಅವರು ಪ್ರತಿಕ್ರಿಯಿಸಿದ್ದಾರೆ ಅವರು ಈ ತಕ್ಷಣ ಕಾಂಗ್ರೆಸ್ ಪಕ್ಷದಿಂದ ಹೊರಹಾಕುವ ಮೂಲಕ ರಾಷ್ಟ್ರೀಯತೆಯನ್ನು ಎತ್ತಿ ಹಿಡಿಯುವಂತೆ ಹಾಗು ಚಳಿಗಾಲದ ಅಧಿವೇಶನದಿಂದಲೂ ಅವರನ್ನು ಅಮಾನತ್ತು ಮಾಡುವಂತೆ ಅಗ್ರಹಿಸಿದರು.
ಪುರಸಭಾಧ್ಯಕ್ಷರಾದ ಲಲಿತಾ ಶ್ರೀನಿವಾಸ್ ಮಾತನಾಡಿ ಮಹಿಳೆಯರ ಕುರಿತಾಗಿ ಕೀಳಾಗಿ ಮಾತನಾಡಿರುವ ಶಾಸಕ ರಮೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡುವ ಮೂಲಕ ತಮ್ಮ ಹಿರಿತನದ ಗೌರವ ತೋರಬೇಕೆಂದು ಹೇಳಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಭೀಮಗುಂಟಪಲ್ಲಿಶಿವಾರೆಡ್ಡಿ ಮಾತನಾಡಿ, ಸದನದಲ್ಲಿ ರಮೇಶ್ ಕುಮಾರ್ ಸ್ತ್ರೀ ಕುಲಕ್ಕೆ ಅಪಮಾನ ಮಾಡಿದ್ದಾರೆ, ಜೊತೆಗೆ ಬೇಕಾಬಿಟ್ಟಿ ಕ್ಷಮೆಯಾಚಿಸಿರುವುದು ಯಾವುದೇ ಕಾರಣಕ್ಕೂ ಒಪ್ಪುವಂತಹದ್ದಲ್ಲ, ಶ್ರೀನಿವಾಸಪುರದ ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗಿದೆ ಕ್ಷೇತ್ರದ ಜನತೆಯ ಮುಂದೆ ಬೇಷರತ್ ಕ್ಷಮೆ ಕೇಳಬೇಕು ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಪುರಸಭೆ ಉಪಾದ್ಯಕ್ಷರಾದ ಅಯಿಶಾನಯಾಜ್ ಸದಸ್ಯರಾದ ಗೋಲಿಬಾರ್ ವೆಂಕಟರೆಡ್ಡಿ,ರಾಜು,ಅನಂದಗೌಡ, ಜಯಲಕ್ಷ್ಮೀಸತ್ಯನಾರಾಯಣ್, ಸುನಿತಾ, ಮುತ್ತಕಪಲ್ಲಿ ಸರ್ದಾರ್, ನಯಾಜ್, ತಾ.ಪಂ.ಮಾಜಿ ಸದಸ್ಯರಾದ ಹಳೇಪೆಟೆ ಮಂಜುನಾಥ ರೆಡ್ಡಿ, ತಾಲ್ಲೂಕು ಯುವ ಜನತಾದಳ ಅಧ್ಯಕ್ಷ ವೇಣುಗೋಪಾಲರೆಡ್ಡಿ, ಯುವ ಮುಖಂಡ ಪೂಲುಶಿವಾರೆಡ್ಡಿ,ಕಲ್ಲೂರುಸುರೇಶ್, ತರ್ನಹಳ್ಳಿ ಡಿವಿಜಿ ಮಂಜು, ಕುಮ್ಮಗುಂಟೆ ಮನು, ಕಾರ್ ಬಾಬು, ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.
Breaking News
- ಮದನಪಲ್ಲಿ-ತಿರುಪತಿ ಘಾಟ್ ರಸ್ತೆಯಲ್ಲಿ ಅಪಘಾತ ಕರ್ನಾಟಕದ ನಾಲ್ವರ ಸಾವು!
- ಕಮ್ಯುನಿಸ್ಟ್ ಧ್ವನಿ ಸೀತಾರಾಂ ಯೆಚೂರಿ ಇನ್ನಿಲ್ಲ!
- ಚಿಂತಾಮಣಿ ನಗರಸಭೆ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ
- ಅಮೇರಿಕಾದಲ್ಲಿ ರಾಹುಲ್-ಶಿವಕುಮಾರ್ ಭೇಟಿ ರಾಜಕೀಯ ಸಂಚಲನ
- ಮೃತ ಪತ್ರಕರ್ತನ ಕುಟುಂಬಕ್ಕೆ ಪರಿಹಾರ ಮಂಜೂರು ಮಾಡಿದ ಸಿಎಂ
- ಚಿಂತಾಮಣಿ ಎಪಿಎಂಸಿ ಅಂಗಡಿಯಲ್ಲಿ ಲಕ್ಷಾಂತರ ಹಣ ಎಗರಿಸಿದ ಖದೀಮರು
- ಹಳೆ ವಸ್ತುಗಳ ಗುಜರಿ ವ್ಯಾಪಾರಿಗೆ ಲಾಟರಿಯಲ್ಲಿ ಕೋಟಿಗಟ್ಟಲೆ ದುಡ್ಡು!
- ಪತ್ರಕರ್ತರ ರೈಲ್ವೆ ಪಾಸ್ ಸೌಲಭ್ಯ ಆರಂಭಿಸಲು ಮನವಿ
- ದೇಶದ ಮೊದಲ MPAX ಪ್ರಕರಣ ಪತ್ತೆ!
- ನಂದಮೂರಿ ಬಾಲಕೃಷ್ಣ ಮಗ ಮೊಕ್ಷಜ್ಞ ಸಿನಿಮಾ ರಂಗಕ್ಕೆ ಎಂಟ್ರಿ
Friday, September 13