ಶ್ರೀನಿವಾಸಪುರ:ಸರ್ಕಾರಿ ಸೇವೆಯಿಂದ ನಿವೃತ್ತರಾದವರು ನೆಮ್ಮದಿಯ ಹಾಗು ಆರೋಗ್ಯವಂತರಾಗಿ ಜೀವನ ಮಾಡಲು ನಿಯಮಿತ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗಾಸನ ಬಹು ಸಹಕಾರಿಯಾಗುತ್ತದೆ ನಿರಂತರವಾಗಿ ಯೋಗಾಭ್ಯಾಸ ಮಾಡುವ ಮೂಲಕ ಉತ್ತಮ ಆರೋಗ್ಯ ಪಡೆಯುವಂತೆ ಯಲಹಂಕದ ವಿವೇಕಾನಂದ ಯೋಗ ಶಿಕ್ಷಣ ಕೇಂದ್ರದ ಮುಖ್ಯಸ್ಥ ಮಾದಪ್ಪ ಹೇಳಿದರು. ಅವರು ಶ್ರೀನಿವಾಸಪುರದ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ಸಕ್ರೀಯ ಸದಸ್ಯ ಹಾಗು ಪಶು ವೈದ್ಯಾಧಿಕಾರಿ ಡಾ.ವೆಂಕಟೇಶ್ ತಮ್ಮ ಸರ್ಕಾರಿ ವೃತ್ತಿ ಜೀವನದಲ್ಲಿ ನಿವೃತ್ತರಾದ ಸಂದರ್ಭದಲ್ಲಿ ಡಾ.ವೆಂಕಟೇಶ್ ದಂಪತಿಯನ್ನು ಶ್ರೀನಿವಾಸಪುರದ ಶ್ರೀ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ವತಿಯಿಂದ ಗೌರವಿಸಿದರು.
ಶ್ರೀ ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ಶಿಕ್ಷಕ ವೆಂಕಟೇಶ್ ಬಾಬು ಮಾತನಾಡಿ ಡಾ.ವೆಂಕಟೇಶ್ ರವರು ಪಶು ವೈದ್ಯಾಧಿಕಾರಿಗಳಾಗಿ ತಮ್ಮ ಸೇವಾ ಅವಧಿಯಲ್ಲಿ ಉತ್ತಮವಾಗಿ ಸೇವೆಯನ್ನು ಸಮಾಜ ಮೆಚ್ಚುವ ರಿತಿಯಲ್ಲಿ ನಿರ್ವಹಿಸಿದ್ದಾರೆ ಅವರು ಕೆಲಸ ಮಾಡಿದ ಗ್ರಾಮೀಣ ಭಾಗದಲ್ಲಿ ಜನರು ಅವರ ಸೇವೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ ಜನ ಮೆಚ್ಚಿದರೆ ಭಗವಂತ ಮೆಚ್ಚಿದಂತೆ ಅವರು ನಿವೃತ್ತಿ ಜೀವನ ಆರೋಗ್ಯ ಪೂರ್ಣವಾಗಿರಲಿ ಎಂದು ಪತಂಜಲಿ ಮುದ್ರಾ ಯೋಗ ಶಿಕ್ಷಣ ಸಮಿತಿ ವತಿಯಿಂದ ಶುಭಹಾರೈಸಿದರು. ಇದೆ ಸಂದರ್ಭದಲ್ಲಿ ಕಾರ್ತೀಕ ಮಾಸದ ಮಹತ್ವ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳಾಗಿದ್ದ ಜಯರಾಮಪ್ಪ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ರಂಗಪ್ಪಶೆಟ್ಟಿ ಪಾಲ್ಗೋಂಡಿದ್ದರು ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಂಕರೇಗೌಡ ಶಿಕ್ಷಕ ಚಂದ್ರಣ್ಣ,ವಕೀಲ ವಿನಯಕುಮಾರ್, ಎಲ್.ಐ.ಸಿ ಶ್ರೀನಿವಾಸನ್ ಯೋಗ ಬಂಧುಗಳಾದ ಗೇಟ್ ಲಕ್ಷ್ಮಣರೆಡ್ಡಿ,ಮದ್ವೇಶ್,ವೆಂಕಟೇಶ್,ನಾರಾಯಣಸ್ವಾಮಿ,ಪ್ರಭಾಕರ್, ವಿನಯ್,ಮಂಜುಳ,ಭಾಗ್ಯಲಕ್ಷ್ಮೀ, ಜಯಮ್ಮ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



