ಶ್ರೀನಿವಾಸಪುರ:ಕಸಬಾ ಹೋಬಳಿ ದಳಸನೂರು ಗ್ರಾಮ ಪಂಚಾಯತಿ ಹೂವಳ್ಳಿ ಗ್ರಾಮದ ದಲಿತ ಮುಖಂಡಕೃಷ್ಣಪ್ಪ ಕುಟುಂಬದಿಂದ ನೂರಕ್ಕೂ ಹೆಚ್ಚು ಮಣ್ಣಿನ ಗಣೇಶನಮೂರ್ತಿಗಳನ್ನು ವಿತರಿಸಿದ್ದಾರೆ .
ಹೂವಳ್ಳಿಕೃಷ್ಣಪ್ಪ ಅವರ ಮಗ ಬೆಂಗಳೂರಿನ ಉದ್ಯಮಿ ಅಂಬರೀಶ್ ಸಮಾಜ ಸೇವೆ ಹೆಸರಿನಲ್ಲಿ ಕಸಬಾ ಹೋಬಳಿ ಮತ್ತು ತಾಲ್ಲೂಕಿನ ಹಲವು ಗ್ರಾಮಗಳ ಗಣೇಶೋತ್ಸವ ಸಮಿತಿಗಳಿಗೆ ಗಣೇಶನಮೂರ್ತಿಗಳನ್ನು ವಿತರಣೆ ಮಾಡಿದ್ದಾರೆ ಇದು ತಾಲೂಕಿನ ರಾಜಕೀಯದಲ್ಲಿ ಒಂದಷ್ಟು ಸಂಚಲನ ಮೂಡಿಸಿದೆ.
ಮುಖಂಡ ಕೃಷ್ಣಪ್ಪ ಮಾತನಾಡಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಘ್ನ ನೀವಾರಕ ವಿನಾಯಕನನ್ನು ಸಮಸ್ತ ಜನತೆ ಪೂಜಿಸುವ ಮೂಲಕ ನಾಡು ಸುಭಿಕ್ಷವಾಗಿರಲು ಗಣೇಶನ ಕೃಪೆ ಬೇಕು ಇದಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಗಣೇಶ ಮೂರ್ತಿಗಳನ್ನು ವಿತರಿಸಿರುವುದಾಗಿ ಹೇಳಿದರು.
ಶ್ರೀನಿವಾಸ ಕಲ್ಯಾಣೋತ್ಸವ ಆಯೋಜನೆ
ಕೆಲ ತಿಂಗಳ ಹಿಂದೆ ಹೂವಳ್ಳಿಕೃಷ್ಣಪ್ಪ ತಮ್ಮ ಗ್ರಾಮಕ್ಕೆ ತಿರುಮಲದಿಂದ ಶ್ರೀವೆಂಕಟರಮಣಸ್ವಾಮಿ ವಿಗ್ರಹಗಳನ್ನು ತರಿಸಿ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿ ಜನ ಮೆಚ್ಚುಗೆ ಗಳಿಸಿದ್ದರು.
ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆ
ಸಮಾಜಸೇವಕ ಹೂವಳ್ಳಿಅಂಬರೀಶ್ ರಾಜಕೀಯ ರಂಗ ಪ್ರವೇಶಕ್ಕೆ ಎಲ್ಲಾ ವರ್ಗದ ಜನರನ್ನು ತಲುಪಲು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಮದುವೆ ಶುಭಕಾರ್ಯಗಳಿಗೆ ಇತರೆ ಸಂದರ್ಭಗಳಲ್ಲಿ ಕೈಲಾದ ನೆರವು ನೀಡುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತ ಜನ ಮನ್ನಣೆ ಗಳಿಸುತ್ತಿದ್ದಾರೆ.
ಗಣೇಶಮೂರ್ತಿ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್,ನಂಬಿಹಳ್ಳಿನರಸಿಂಹ, ಶಿಕ್ಷಕ ತಿಪ್ಪಣ್ಣ,ದಳಸನೂರು ಶ್ರೀನಿವಾಸಗೌಡ, ತೆರ್ನಹಳ್ಳಿ ವೆಂಕಟೇಶಪ್ಪ, ಹೂವಳ್ಳಿ ಮಂಜುನಾಥ್, ಚಲ್ದಿಗಾನಹಳ್ಳಿ ಈರಪ್ಪ,ಡಿ ಪಿ ಎಸ್ ವೆಂಕಟೇಶ್,ಗಾಂಡ್ಲಹಳ್ಳಿ ರಮೇಶ್,ವಾನರಾಶಿ ನಾಗೇಶ್, ನಾಗನಾಯಕನಹಳ್ಳಿ ವೆಂಕಟೇಶ್, ಮೊಗಲಹಳ್ಳಿ ಶಿವಪ್ಪ, ಗೌಡಳ್ಳಿ ಯಲ್ಲಪ್ಪ,ವೆಂಕಟೇಶ್ (ಸೋನಿ ), ನವೀನ್, ಶ್ರೀನಿವಾಸ್ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



